Asian Para Games-2026: ಕನ್ನಡತಿಗೆ ಪದಕ.. ಅಭಿನಂದನೆ
Asian Para Games-2026: ಕನ್ನಡತಿ ಪಲ್ಲವಿ ಕಾಲುವೆಹಳ್ಳಿ ಮಂಜುನಾಥ ಕಂಚಿನ ಪದಕ ಜಯಿಸಿದ್ದು, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Asian Para Games-2026: ಏಷ್ಯನ್ ಪ್ಯಾರಾ ಗೇಮ್ಸ್–2026ರಲ್ಲಿ ಕನ್ನಡತಿ ಪಲ್ಲವಿ ಕಾಲುವೆಹಳ್ಳಿ ಮಂಜುನಾಥ ಕಂಚಿನ ಪದಕ ಜಯಿಸಿದ್ದು, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ 'ಎಕ್ಸ್'ನಲ್ಲಿಯೂ ಪೋಸ್ಟ್ ಆಡಿದ್ದಾರೆ. ಜಪಾನ್‌ನ ಐಚಿ–ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್–2026ರ ವನಿತೆಯರ ವೀಲ್‌ಚೇರ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದು, ಜಾಗತಿಕ ಕ್ರೀಡಾ ರಂಗದಲ್ಲಿ ಕರ್ನಾಟಕದ ಹಿರಿಮೆಯನ್ನು ಹೆಚ್ಚಿಸಿರುವ ಪಲ್ಲವಿ ಕಾಲುವೆಹಳ್ಳಿ ಮಂಜುನಾಥ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ದೈಹಿಕ ನ್ಯೂನತೆಗಳನ್ನು ಮೀರಿ ಸಾಧನೆಯ ಶಿಖರವೇರಬೇಕೆಂಬ ಅವರ ಅಚಲ ಸಂಕಲ್ಪ ಇಂದು ನಾಡಿಗೆ ಹೆಮ್ಮೆ ತಂದಿದೆ.
ಕ್ರೀಡಾಪಟುಗಳ ಪ್ರತಿಭೆಗೆ ಸೂಕ್ತ ಪ್ರೋತ್ಸಾಹ ಮತ್ತು ಬೆಂಬಲ ನೀಡುವ ಮೂಲಕ ಅವರ ಕನಸುಗಳು ನನಸಾಗಲು ನೆರವಾಗಲು ನಮ್ಮ ಸರ್ಕಾರ ಬದ್ಧವಾಗಿದೆ. ಪಲ್ಲವಿ ಅವರ ಸಾಧನೆಯ ಪಯಣ ಇನ್ನಷ್ಟು ಯಶಸ್ಸಿನೊಂದಿಗೆ ಮುಂದುವರಿಯಲಿ, ಮುಂಬರುವ ಸ್ಪರ್ಧೆಗಳಲ್ಲಿ ಮತ್ತಷ್ಟು ಪದಕಗಳು ಅವರದಾಗಲಿ ಎಂದು ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ.