Bengaluru-Mysuru Expressway: ಟೋಲ್ ಶುಲ್ಕ ಏರಿಕೆ.. ಎಷ್ಟಾಗಿದೆ?

Bengaluru-Mysuru Expressway: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಬಳಸುವ ವಾಹನ ಸವಾರರ ಜೇಬಿಗೆ ಮತ್ತೆ ಕತ್ತರಿ ಬಿದ್ದಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಈ ಹೆದ್ದಾರಿಯ ಟೋಲ್ ದರವನ್ನು ಸ್ವಲ್ಪ ಮಟ್ಟಿಗೆ ಏರಿಕೆ ಮಾಡಿದೆ.

Jul 23, 2026 - 13:25
Jul 23, 2026 - 13:25
Bengaluru-Mysuru Expressway: ಟೋಲ್ ಶುಲ್ಕ ಏರಿಕೆ.. ಎಷ್ಟಾಗಿದೆ?

ರಾಮನಗರ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ (Bengaluru-Mysuru Expressway) ಬಳಸುವ ವಾಹನ ಸವಾರರ ಜೇಬಿಗೆ ಮತ್ತೆ ಕತ್ತರಿ ಬಿದ್ದಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI), ಈ ಹೆದ್ದಾರಿಯ ಟೋಲ್ ದರವನ್ನು ಸ್ವಲ್ಪ ಮಟ್ಟಿಗೆ ಏರಿಕೆ ಮಾಡಿದೆ. ಅದು ಕನಿಷ್ಠ ರೂ.5 ರಿಂದ ಗರಿಷ್ಠ ರೂ.35 ರವರೆಗೆ ಏರಿಕೆಯಾಗಿದೆ.

ಇದೇ ಏಪ್ರಿಲ್ ತಿಂಗಳಲ್ಲೂ ಟೋಲ್ ಶುಲ್ಕವನ್ನು ಅಧಿಕಗೊಳಿಸಲಾಗಿತ್ತು. ಕೆಂಗೇರಿ ಸಮೀಪದ ಕಣಿಮಿಣಿಕೆ ಟೋಲ್‌ನಿಂದ ಮಂಡ್ಯದ ನಿಡಘಟ್ಟ ಹಾಗೂ ಅಲ್ಲಿಂದ  ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಟೋಲ್‌ನವರೆಗೆ ಈ ನೂತನ ದರಗಳು ಅನ್ವಯಿಸಲಿವೆ.

ಕಣಿಮಿಣಿಕೆ ಟೋಲ್‌ನಿಂದ ನಿಡಘಟ್ಟವರೆಗೆ:

ಕಾರು, ವ್ಯಾನ್ ಹಾಗೂ ಜೀಪ್‌ಗಳಿಗೆ ಏಕಮುಖ ಸಂಚಾರ ದರವನ್ನು ಈಗ ರೂ.185ಕ್ಕೆ ಏರಿಸಲಾಗಿದೆ. ಈ ಹಿಂದೆ ರೂ.180 ಇತ್ತು. ಅಂದೇ ಹಿಂದಿರುಗುವ ವಾಹನಗಳಿಗೆ ರೂ.275  ಹಾಗೂ ತಿಂಗಳ ಪಾಸ್‌ಗೆ ರೂ.6100 ನಿಗದಿಪಡಿಸಲಾಗಿದೆ.

ಲಘು ವಾಣಿಜ್ಯ ವಾಹನ ಹಾಗೂ ಮಿನಿ ಬಸ್‌ಗಳಿಗೆ ರೂ.285 ರಿಂದ ರೂ.295ಕ್ಕೆ ಹೆಚ್ಚಸಲಾಗಿದೆ. ಟ್ರಕ್, ಬಸ್ ಮತ್ತು 2 ಆಕ್ಸಲ್ ವಾಹನಗಳಿಗೆ ರೂ.600 ರಿಂದ ರೂ.620ಕ್ಕೆ ಏರಿಸಲಾಗಿದೆ. ಮೂರು ಆಕ್ಸಲ್ ವಾಣಿಜ್ಯ ವಾಹನಗಳಿಗೆ ರೂ.655 ರಿಂದ ರೂ.675ಕ್ಕೆ ಅಧಿಕಗೊಳಿಸಲಾಗಿದೆ. 

ಭಾರೀ ಕಟ್ಟಡ ನಿರ್ಮಾಣ ವಾಹನ, ಅರ್ಥ್ ಮೂವರ್ಸ್, 4 ರಿಂದ 6 ಆಕ್ಸಲ್ ವಾಹನಗಳಿಗೆ ರೂ.940 ರಿಂದ ರೂ.970ಕ್ಕೆ ಹೆಚ್ಚಳಲಾಗಿದೆ. 7 ಅಥವಾ ಅದಕ್ಕಿಂತ ಹೆಚ್ಚಿನ ಆಕ್ಸಲ್ ಒಳಗೊಂಡಿರುವ ದೊಡ್ಡ ವಾಹನಗಳಿಗೆ ರೂ.1145 ರಿಂದ ರೂ.1180ಕ್ಕೆ ಏರಿಕೆ ಮಾಡಲಾಗಿದೆ.

ಗಣಂಗೂರು ಟೋಲ್‌ನಿಂದ ನಿಡಘಟ್ಟದವರೆಗೆ:

ಕಾರು, ವ್ಯಾನ್ ಹಾಗೂ ಜೀಪ್‌ಗಳಿಗೆ ರೂ.175 ರಿಂದ ರೂ.180ಕ್ಕೆ ಹೆಚ್ಚಿಸಲಾಗಿದೆ. ಲಘು ವಾಹನಗಳಿಗೆ ರೂ.280 ರಿಂದ ರೂ.290ಕ್ಕೆ ಅಧಿಕಗೊಳಿಸಲಾಗಿದೆ. ಟ್ರಕ್, ಬಸ್ ಮತ್ತು 2 ಆಕ್ಸಲ್ ವಾಹನಗಳಿಗೆ ರೂ.585 ರಿಂದ ರೂ.605ಕ್ಕೆ ಏರಿಸಲಾಗಿದೆ. 

ಮೂರು ಆಕ್ಸಲ್ ವಾಹನಗಳಿಗೆ ರೂ.640 ರಿಂದ ರೂ.660ಕ್ಕೆ ಅಧಿಕಗೊಳಿಸಲಾಗಿದೆ. ಭಾರೀ ವಾಹನಗಳಿಗೆ ರೂ.920 ರಿಂದ ರೂ.950 ಹಾಗೂ 7 ಆಕ್ಸಲ್ ಮೇಲ್ಪಟ್ಟ ವಾಹನಗಳಿಗೆ ರೂ.1120 ರಿಂದ ರೂ.1155ಕ್ಕೆ ಹೆಚ್ಚಿಸಲಾಗಿದೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.