Bengaluru-Vijayawada Expressway: ಬೆಂಗಳೂರು-ವಿಜಯವಾಡ ಎಕ್ಸ್‌ಪ್ರೆಸ್‌ವೇ.. ಬರೀ 7 ಗಂಟೆ ಪ್ರಯಾಣ!

Bengaluru-Vijayawada Expressway: ಆಂಧ್ರ ಪ್ರದೇಶ ಹಾಗೂ ಕರ್ನಾಟಕ ನಡುವೆ ಸಂಪರ್ಕ ಜಾಲವನ್ನು ಸುಧಾರಿಸಲು ಬೆಂಗಳೂರು-ವಿಜಯವಾಡ ಎಕ್ಸ್‌ಪ್ರೆಸ್‌ವೇ ಅಭಿವೃದ್ಧಿಪಡಿಸಲಾಗುತ್ತಿದೆ.

Oct 21, 2026 - 16:10
Bengaluru-Vijayawada Expressway: ಬೆಂಗಳೂರು-ವಿಜಯವಾಡ ಎಕ್ಸ್‌ಪ್ರೆಸ್‌ವೇ.. ಬರೀ 7 ಗಂಟೆ ಪ್ರಯಾಣ!

ಬೆಂಗಳೂರು: ಆಂಧ್ರ ಪ್ರದೇಶ ಹಾಗೂ ಕರ್ನಾಟಕ ನಡುವೆ ಸಂಪರ್ಕ ಜಾಲವನ್ನು ಸುಧಾರಿಸಲು  ಬೆಂಗಳೂರು-ವಿಜಯವಾಡ ಎಕ್ಸ್‌ಪ್ರೆಸ್‌ವೇ (Bengaluru-Vijayawada Expressway) ಅಭಿವೃದ್ಧಿಪಡಿಸಲಾಗುತ್ತಿದೆ. ಇದು 6 ಪಥಗಳನ್ನು ಹೊಂದಿರುವ  ಗ್ರೀನ್‌ಫೀಲ್ಡ್ ಹೆದ್ದಾರಿಯಾಗಿದೆ. 

 'ಭಾರತಮಾಲಾ ಯೋಜನೆ'ಯಡಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಈ 'ಎಕ್ಸ್‌ಪ್ರೆಸ್‌ವೇ'ಯನ್ನು ನಿರ್ಮಿಸುತ್ತಿದೆ. ಸುಮಾರು 342 ರಿಂದ 343 ಕಿ.ಮೀ ಉದ್ದದ ಹೆದ್ದಾರಿ ಇದಾಗಿದ್ದು, ಆಂಧ್ರಪ್ರದೇಶ-ಕರ್ನಾಟಕ ಗಡಿಯ ಸಮೀಪವಿರುವ ಕೊಡಿಕೊಂಡದಿಂದ ಪ್ರಕಾಶಂ ಜಿಲ್ಲೆಯ ಮುಪ್ಪಾವರಂವರೆಗೆ ಸಾಗುತ್ತದೆ.  

ಈ ಯೋಜನೆಗೆ ಒಟ್ಟು ರೂ.19,200 ರಿಂದ ರೂ.19,320 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. 2027ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. 

ನೂತನ ಎಕ್ಸ್‌ಪ್ರೆಸ್‌ವೇ ಗುಂಟೂರು, ಪ್ರಕಾಶಂ, ಕರ್ನೂಲು ಹಾಗೂ ಕಡಪ ಜಿಲ್ಲೆಗಳಲ್ಲಿ ಹಾದುಹೋಗಲಿದೆ. ಈ ಹೆದ್ದಾರಿ ಲೋಕಾರ್ಪಣೆಗೊಂಡ ಬಳಿಕ, ವಿಜಯವಾಡ, ಬೆಂಗಳೂರು ಮತ್ತು ಪೂರ್ವ ಕರಾವಳಿಯ ಬಂದರುಗಳ ಮಧ್ಯೆ ಸಾರಿಗೆ ಸಂಪರ್ಕವು ಸುಧಾರಿಸಲಿದ್ದು, ಆರ್ಥಿಕ ಬೆಳವಣಿಗೆಗೂ ಸಹಕಾರಿಯಾಗಲಿದೆ.  

ಈ ಎಕ್ಸ್‌ಪ್ರೆಸ್‌ವೇ ನಿರ್ಮಾಣದಿಂದ ಪ್ರಯಾಣದ ಅವಧಿಯು ಕಡಿಮೆಯಾಗಲಿದ್ದು, ಸದ್ಯವಿರುವ 11 ರಿಂದ 12 ಗಂಟೆಗಳಿಂದ 6 ರಿಂದ 7 ಗಂಟೆಗೆ ಇಳಿಕೆಯಾಗುವ ಸಾಧ್ಯತೆಯಿದೆ.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.