Today Gold Price: ಆಭರಣ ಪ್ರಿಯರಿಗೆ ಭರ್ಜರಿ ಸಿಹಿಸುದ್ದಿ ಲಭ್ಯವಾಗಿದೆ. ಚಿನಿವಾರ ಪೇಟೆಯಲ್ಲಿ ಇಂದು (ಗುರುವಾರ) ಚಿನ್ನ ಹಾಗೂ ಬೆಳ್ಳಿ ಬೆಲೆಗಳು ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿವೆ.
ರಾಜ್ಯದಲ್ಲಿ (ಬೆಂಗಳೂರು) 24 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ ರೂ.1,700 ಇಳಿಕೆಯಾಗಿ ರೂ.1,44,380 ಇದೆ. 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ರೂ.1,550 ಕಡಿಮೆಯಾಗಿ ರೂ.1,32,350ಕ್ಕೆ ಬಂದಿದೆ. 18 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ ರೂ.1,270 ಇಳಿಕೆಯಾಗಿ ರೂ.1,08,290 ಆಗಿದೆ.
ಅದೇ ರೀತಿಯಲ್ಲಿ 1 ಕೆಜಿ ಬೆಳ್ಳಿ ರೂ.5,000 ಕಡಿಮೆಯಾಗಿ ರೂ.2,25,000 ದರದಲ್ಲಿ ಗ್ರಾಹಕರ ಖರೀದಿಗೆ ದೊರೆಯುತ್ತದೆ. 10 ಗ್ರಾಂ ಪ್ಲಾಟಿನಂ ಬೆಲೆಯೂ ರೂ.1,530 ಇಳಿಕೆಯಾಗಿ ರೂ.48,000 ಇದೆ.
ಷೇರುಪೇಟೆ: ಇಂದು ನಕಾರತ್ಮಕ ವಹಿವಾಟು
ಭಾರತದ ಷೇರುಪೇಟೆ ವಹಿವಾಟು ಇಂದು ನಕಾರತ್ಮಕವಾಗಿದೆ. ಬಿಎಸ್ಇ ಸೆನ್ಸೆಕ್ಸ್ 366.36 ಅಂಕಗಳು ಕುಸಿದು 73,343.33 ಅಂಕಗಳಿಗೆ ತಲುಪಿದೆ. ನಿಫ್ಟಿ 123.60 ಅಂಕಗಳು ಇಳಿದು 22,687.75 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ.