IND vs ZIM T20: ಸರಣಿ ಗೆದ್ದ ಭಾರತ.. ಇಂದು ಮೂರನೇ ಪಂದ್ಯ

IND vs ZIM T20: ಟೀಂ ಇಂಡಿಯಾ ಮತ್ತೆ ಫಾರ್ಮ್‌ಗೆ ಬಂದಿದೆ. ಸದ್ಯ ಜಿಂಬಾಬ್ವೆ ಪ್ರವಾಸದಲ್ಲಿದ್ದು, ಹರಾರೆ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ಇಂದು (ಭಾನುವಾರ) ಅಂತಿಮ ಪಂದ್ಯ ಆಯೋಜನೆಗೊಂಡಿದೆ.

Jul 26, 2026 - 12:13
Jul 26, 2026 - 18:16
IND vs ZIM T20: ಸರಣಿ ಗೆದ್ದ ಭಾರತ.. ಇಂದು ಮೂರನೇ ಪಂದ್ಯ

ಹರಾರೆ: ಟೀಂ ಇಂಡಿಯಾ (Team India) ಮತ್ತೆ ಫಾರ್ಮ್‌ಗೆ ಬಂದಿದೆ. ಸದ್ಯ ಜಿಂಬಾಬ್ವೆ (zimbabwe) ಪ್ರವಾಸದಲ್ಲಿದ್ದು, 3 ಪಂದ್ಯಗಳ 'ಟಿ20' ಸರಣಿಯನ್ನು ಆಡುತ್ತಿದೆ. ಹರಾರೆ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ಇಂದು (ಭಾನುವಾರ) ಅಂತಿಮ ಪಂದ್ಯ ಆಯೋಜನೆಗೊಂಡಿದ್ದು, ಸಂಜೆ 4:30ಕ್ಕೆ ಶುರುವಾಗಲಿದೆ. ಈಗಾಗಲೇ ಸರಣಿಯಲ್ಲಿ 2-0 ಅಂತರದಲ್ಲಿ ಮುನ್ನಡೆ ಸಾಧಿಸಿದ್ದು, ಕ್ಲೀನ್ ಸ್ಪೀಪ್ ಮಾಡುವ ವಿಶ್ವಾಸದಲ್ಲಿದೆ.

ನಿನ್ನೆ (ಶನಿವಾರ) ನಡೆದ ಎರಡನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ, 5 ವಿಕೆಟ್ ನಷ್ಟಕ್ಕೆ 219 ರನ್ ಕಲೆಹಾಕಿತು. ಇಶಾನ್ ಕಿಶನ್ (81) ಹಾಗೂ ತಿಲಕ್ ವರ್ಮಾ (60) ಅಬ್ಬರಿಸಿದರು. 

ಈ ಗುರಿ ಬೆನ್ನಟ್ಟಿದ ಜಿಂಬಾಬ್ವೆ ಟೀಂ ಇಂಡಿಯಾದ ಬೌಲಿಂಗ್ ದಾಳಿಗೆ ತತ್ತರಿಸಿತು. 18ನೇ ಓವರ್​ನಲ್ಲಿಯೇ 129 ರನ್​ ಗಳಿಸಿ ಆಲೌಟ್ ಆಯಿತು. ಅಭಿಷೇಕ್ ಶರ್ಮಾ 3 ವಿಕೆಟ್‌ ಕಬಳಿಸಿದರು.

ಮೊದಲ ಪಂದ್ಯದಲ್ಲಿ ಜಿಂಬಾಬ್ವೆ, ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 125 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತವು ಬರೀ 13.2 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 126 ರನ್ ಬಾರಿಸಿ, ಗೆಲುವಿನ ನಗು ಬೀರಿತ್ತು.

ಸಂಭಾವ್ಯ ಪ್ಲೇಯಿಂಗ್ 11: 

ಭಾರತ: ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಶ್ರೇಯಸ್ ಐಯ್ಯರ್ (ನಾಯಕ), ತಿಲಕ್ ವರ್ಮ, ರಿಂಕು ಸಿಂಗ್, ಶಿವಂ ದುಬೆ, ರವಿ ಬಿಷ್ಣೋಯಿ, ಪ್ರಿನ್ಸ್ ಯಾದವ್, ಅಶೋಕ್ ಶರ್ಮಾ ಮತ್ತು ಮಾಯಾಂಕ್ ಯಾದವ್.

ಜಿಂಬಾಬ್ವೆ: ಬ್ರಾಯನ್ ಬೆನೆಟ್, ಬೆನ್ ಕರನ್, ಡಿಯೋನ್ ಮೈಯರ್ಸ್, ಸಿಕಂದ‌ರ್ ರಜಾ (ನಾಯಕ), ರಯಾನ್ ಬರ್ಲ್, ವೆಸ್ಲಿ ಮಾಧೆವೆರೆ, ತಸಿವನಾಶೆ ಮರುಮಣಿ, ಬ್ರಾಡ್ ಇವಾನ್ಸ್, ನೆಲ್ಮನ್ ನ್ಯಾಮ್‌ಹುರಿ, ರಿಚಾರ್ಡ್ ಎನ್ಗವಾರ ಹಾಗೂ ಬ್ಲೆಸಿಂಗ್ ಮುಝರಾಬಾನಿ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.