ವಿವೇಕ ಸ್ಮಾರಕವು ಸಾಧಕರು - ಶ್ರದ್ಧಾಳುಗಳ ಕೇಂದ್ರ ಆಗಲಿ: ಪ್ರಧಾನಿ ಮೋದಿ ಆಶಯ
PM Modi Visited Mysore Aand Inagurated Viveka Smarakal: ಶ್ರೀರಾಮಕೃಷ್ಣ ಮಠದಿಂದ ನಿರ್ಮಿಸಿದ ವಿವೇಕ ಸ್ಮಾರಕವನ್ನು ಉದ್ಘಾಟಿಸಿರುವ ಪ್ರಧಾನಿ ಮೋದಿ ಅವರು, 7 ಸಂಪುಟಗಳ ರಾಮಾಯಣ, ಬದುಕು ಬೆಳಕು ಪುಸ್ತಕಗಳನ್ನು ಇದೇ ವೇಳೆ ಬಿಡುಗಡೆ ಮಾಡಿದರು.
ಮೈಸೂರು: ಮೈಸೂರು ಪ್ರಮುಖ ಸಾಂಸ್ಕಂತಿಕ ಕೇಂದ್ರ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದು, ವಿವೇಕ ಸ್ಮಾರಕವು ಸಾಧಕರು ಮತ್ತು ಶ್ರದ್ಧಾಳುಗಳ ಕೇಂದ್ರ ಆಗಲಿ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಶ್ರೀರಾಮಕೃಷ್ಣ ಮಠದಿಂದ ನಿರ್ಮಿಸಿದ ವಿವೇಕ ಸ್ಮಾರಕವನ್ನು ಶನಿವಾರ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು. 7 ಸಂಪುಟಗಳ ರಾಮಾಯಣ, ಬದುಕು ಬೆಳಕು ಪುಸ್ತಕಗಳನ್ನು ಅವರು ಇದೇವೇಳೆ ಬಿಡುಗಡೆ ಮಾಡಿದರು.
ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್‍ನ ಸ್ವಾಮೀಜಿಗಳು ಸಂತರು, ಗುರುಬಂಧುಗಳನ್ನು ಭೇಟಿ ಮಾಡುವ ಅವಕಾಶ ಮತ್ತೆ ನನಗಿಂದು ಲಭಿಸಿದೆ ಎಂದು ತಿಳಿಸಿದರು.

ದಸರಾ, ಸಂಗೀತ-ಸಾಹಿತ್ಯ ಸೇರಿ ಅನೇಕ ಪ್ರಮುಖ ಕ್ಷೇತ್ರಗಳಲ್ಲಿ ಕೊಡುಗೆಗಳನ್ನು ಈ ನಗರ ನೀಡಿದೆ. ರಾಮಕೃಷ್ಣ ಆಶ್ರಮವೂ ಇಲ್ಲಿನ ಸಮೃದ್ಧತೆಯ ಭಾಗ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ರಾಷ್ಟ್ರಕವಿ ಕುವೆಂಪು ಮೈಸೂರಿನಲ್ಲಿದ್ದಾಗ ಅವರು ಈ ಆಶ್ರಮದಲ್ಲಿದ್ದರು ಎಂದು ನೆನಪಿಸಿದರು.
ಸಾಧನೆಯೆಡೆ ಸಾಗುವಾಗ ತಪಸ್ಸು ಅನಿವಾರ್ಯ ಎಂದ ಅವರು, ಸ್ವಾಮಿ ವಿವೇಕಾನಂದರ ಜೀವನದಲ್ಲಿ ಮೈಸೂರಿನ ಯೋಗದಾನವು ದೊಡ್ಡದು. ಇಲ್ಲಿಗೆ ಆಗಮಿಸಿದ್ದ ಅವರು ಆಗ ಪ್ರಸಿದ್ಧರಾಗಿರಲಿಲ್ಲ. ಸ್ವಾಮಿ ವಿವೇಕಾನಂದರು ಅಮೆರಿಕದಿಂದ ಹಾರಾಜರಿಗೆ ಪತ್ರ ಬರೆದಿದ್ದರು ಎಂದರು.

ರಾಮಕೃಷ್ಣ ಆಶ್ರಮವು 100 ವರ್ಷ ಪೂರೈಸಿದೆ. ವಿವೇಕ ಸ್ಮಾರಕವು ಸಾಧಕರು ಮತ್ತು ಶ್ರದ್ಧಾಳುಗಳ ಕೇಂದ್ರ ಆಗಲಿ. ಭಾರತದ ಯುವಜನತೆ ಇದೀಗ ವಿಶ್ವದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದ್ದಾರೆ ಎಂದು ಹೇಳಿದರು.
ಭಾರತವು ಸ್ಟಾರ್ಟಪ್ ಕ್ಷೇತ್ರದಲ್ಲೂ ಪ್ರಮುಖ ಸ್ಥಾನ ಪಡೆದಿದೆ. ಮೊಬೈಲ್ ಫೋನ್ ನಿರ್ಮಾಣದಲ್ಲೂ ಅದು ದೊಡ್ಡ ಸಾಧನೆ ಮಾಡಿದೆ. ಡಿಜಿಟಲ್ ಸೊಲ್ಯೂಷನ್ ವಿಚಾರದಲ್ಲೂ ಅದು ಸಾಧಕ ದೇಶವಾಗಿದೆ. ಸೆಮಿ ಕಂಡಕ್ಟರ್ ಕ್ಷೇತ್ರದಲ್ಲೂ ಅದು ಸಾಧನೆ ಮಾಡುತ್ತಿದೆ. ಇದೆಲ್ಲದಕ್ಕೂ ಯುವಜನರೇ ಕಾರಣ ಎಂದು ಶ್ಲಾಘಿಸಿದರು. ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯ ಸಾಧನೆಯಲ್ಲೂ ಭಾರತದ ಯುವಜನರ ಕೊಡುಗೆ ದೊಡ್ಡದು ಎಂದರು.

ವಿದ್ಯಾರ್ಥಿಗಳು, ಯುವಜನರ ಹರ್ಷೋದ್ಘಾರಗಳ ನಡುವೆ ಮಾತನಾಡಿದ ಅವರು, ಎಲ್ಲರಿಗೂ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲೇ ತಿಳಿಸಿದರು. ಚಾಮುಂಡೇಶ್ವರಿ ದೇವಿಗೆ ಪ್ರಣಾಮ ಸಲ್ಲಿಸಿ ಭಾಷಣ ಆರಂಭಿಸಿದರು. ನನ್ನ ಸಾಧನೆಯಲ್ಲಿ ರಾಮಕೃಷ್ಣ ಮಿಷನ್‍ನ ಕೊಡುಗೆ ದೊಡ್ಡದು ಎಂದು ತಿಳಿಸಿದರು.
ಯುವಜನರಿಗೆ ಸರಿಯಾದ ದಾರಿ ತೋರಿಸುವಲ್ಲಿ ಶಿಕ್ಷಣ ಸಂಸ್ಥೆಗಳ ಕೊಡುಗೆ ಪ್ರಮುಖವಾದುದು ಎಂದ ಅವರು, ಶಿಕ್ಷಣ ಕ್ಷೇತ್ರಕ್ಕೆ ತಮ್ಮ ಸರ್ಕಾರ ನೀಡಿದ ಕೊಡುಗೆಯನ್ನು ಉಲ್ಲೇಖಿಸಿದರು. ಶಿಕ್ಷಣ ಕ್ಷೇತ್ರದ ಮೂಲಸೌಕರ್ಯವನ್ನು ಆಧುನೀಕರಣ ಮಾಡಲಾಗುತ್ತಿದೆ ಎಂದು ವಿವರಿಸಿದರು. ಅಟಲ್ ಟಿಂಕರಿಂಗ್ ಲ್ಯಾಬ್‍ಗಳ ಸ್ಥಾಪನೆಯ ಮಾಹಿತಿ ಕೊಟ್ಟರು.

ಮಾತೃಭಾಷೆಯಲ್ಲೇ ಮೆಡಿಕಲ್-ಎಂಜಿನಿಯರಿಂಗ್ ಶಿಕ್ಷಣ ಕೊಡಲಾಗುತ್ತಿದೆ. ಕ್ರೀಡಾ ಕ್ಷೇತ್ರಕ್ಕೂ ಉತ್ತೇಜನ ಕೊಡಲಾಗಿದೆ. ಖೇಲೋ ಇಂಡಿಯ ಮೂಲಕ ಯುವಜನರಿಗೆ ವೇದಿಕೆ ಕಲ್ಪಿಸಿದೆ. ರಾಜ್ಯವು ಕನ್ನಡ ಭಾಷೆಯಲ್ಲಿ ಮಹಾನ್ ಲೇಖಕರ ಮತ್ತು ಸಾಹಿತಿಗಳನ್ನು ನೀಡಿದೆ ಎಂದರು.
ಪ್ರಧಾನಿಯವರು ವಿದ್ಯಾರ್ಥಿಗಳತ್ತ ಕೈಬೀಸಿದಾಗ 'ಮೋದಿ, ಮೋದಿ' ಎಂದು ಉದ್ಘಾರ ಕೇಳಿಸಿತು.
ಶ್ರೀರಾಮಕೃಷ್ಣ ಮಠ ಆಶ್ರಮದ ಸ್ವಾಮೀಜಿ ಯುವಜನತೆಗೆ ಸಂದೇಶ ನೀಡಿದರು. ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಜೀವನ-ಸಂದೇಶಗಳ ಕುರಿತು ಮಾತನಾಡಿದರು. ಆಶ್ರಮದ ಕುರಿತ ಕಿರುಚಿತ್ರವನ್ನು ಪ್ರದರ್ಶನ ಮಾಡಲಾಯಿತು.

ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ಯದುವೀರ್ ಒಡೆಯರ್, ಶಾಸಕರು ಹಾಗೂ ಸ್ಥಳೀಯ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.