RRB: 6,557 ಟೆಕ್ನಿಷಿಯನ್ ಹುದ್ದೆಗೆ ಅರ್ಜಿ.. ಜುಲೈ 29 ಕಡೆ ದಿನ

RRB Technician Recruitment 2026: ರೈಲ್ವೆ ನೇಮಕಾತಿ ಮಂಡಳಿ, ಅತಿದೊಡ್ಡ ಅಧಿಸೂಚನೆ ಹೊರಡಿಸಿದೆ. ಒಟ್ಟು 6,557 ಟೆಕ್ನಿಷಿಯನ್ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ತುಂಬಲಾಗುತ್ತದೆ. ಅರ್ಜಿ ಸಲ್ಲಿಸಲು ಕೆಲವೇ ದಿನ ಬಾಕಿಯಿದ್ದು, ಜುಲೈ 29ಕ್ಕೆ ಕೊನೆಗೊಳ್ಳುತ್ತದೆ.

Jul 27, 2026 - 14:17
Jul 27, 2026 - 14:19
RRB: 6,557 ಟೆಕ್ನಿಷಿಯನ್ ಹುದ್ದೆಗೆ ಅರ್ಜಿ.. ಜುಲೈ 29 ಕಡೆ ದಿನ

ಬೆಂಗಳೂರು: ರೈಲ್ವೆ ನೇಮಕಾತಿ ಮಂಡಳಿ (RRB), ಅತಿದೊಡ್ಡ ಅಧಿಸೂಚನೆ ಹೊರಡಿಸಿದೆ. ಒಟ್ಟು 6,557 ಟೆಕ್ನಿಷಿಯನ್ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ತುಂಬಲಾಗುತ್ತದೆ. ಅರ್ಜಿ ಸಲ್ಲಿಸಲು ಕೆಲವೇ ದಿನ ಬಾಕಿಯಿದ್ದು, ಜುಲೈ 29ಕ್ಕೆ ಕೊನೆಗೊಳ್ಳುತ್ತದೆ.

ಹುದ್ದೆಗಳ ವರ್ಗಿಕರಣ: ಟೆಕ್ನಿಷಿಯನ್ ಗ್ರೇಡ್-I ಸಿಗ್ನಲ್ ವಿಭಾಗದಲ್ಲಿ 323 ಮತ್ತು ಟೆಕ್ನಿಷಿಯನ್ ಗ್ರೇಡ್-III ವಿಭಾಗದಲ್ಲಿ 6,234 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ಶಿಕ್ಷಣ: ಟೆಕ್ನಿಷಿಯನ್ ಗ್ರೇಡ್-I ಹುದ್ದೆಗೆ ಭೌತಶಾಸ್ತ್ರ, ಎಲೆಕ್ಟ್ರಾನಿಕ್ಸ್ & ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಬಿಎಸ್ಸಿ ಅಥವಾ ಎಂಜಿನಿಯರಿಂಗ್ ಪದವಿ/ ಡಿಪ್ಲೊಮಾ ಉತ್ತೀರ್ಣರಾಗಿರಬೇಕು. ಟೆಕ್ನಿಷಿಯನ್ ಗ್ರೇಡ್-III ಹುದ್ದೆಗೆ 10ನೇ ತರಗತಿಯೊಂದಿಗೆ ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ ಶಿಕ್ಷಣವನ್ನು ಮುಗಿಸಿರಬೇಕು.

ವಯೋಮಿತಿ: ಕನಿಷ್ಠ 18 ವರ್ಷ ಹಾಗೂ ಗರಿಷ್ಠ 33 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ನಿಯಮಾನುಸಾರ ಸಡಿಲಿಕೆಯನ್ನು ನೀಡಲಾಗಿದೆ. 

ಸಂಬಳ: ಟೆಕ್ನಿಷಿಯನ್ ಗ್ರೇಡ್-I ಹುದ್ದೆಗೆ ರೂ.29,200 ಮತ್ತು ಟೆಕ್ನಿಷಿಯನ್ ಗ್ರೇಡ್-III ಹುದ್ದೆಗೆ ರೂ.19,900 ಮೂಲ ವೇತನ ಕೊಡಲಾಗುತ್ತದೆ.

ಅರ್ಜಿ ಶುಲ್ಕ: ಸಾಮಾನ್ಯ/ ಒಬಿಸಿ ಅಭ್ಯರ್ಥಿಗಳಿಗೆ ರೂ.500 ಹಾಗೂ ಎಸ್‌ಸಿ, ಎಸ್‌ಟಿ, ಮಾಜಿ ಸೈನಿಕರು, ಮಹಿಳಾ ಅಭ್ಯರ್ಥಿಗಳಿಗೆ ರೂ.250 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ https://www.rrbapply.gov.inಗೆ ಸಂಪರ್ಕಿಸಿರಿ.