Commonwealth Games-2026: ಇಂದಿನಿಂದ ಕಾಮನ್‌ವೆಲ್ತ್ ಕ್ರೀಡಾಕೂಟ.. ಭಾರತದ 126 ಕ್ರೀಡಾಪಟುಗಳು ಭಾಗಿ

Commonwealth Games-2026: ಇಂದಿನಿಂದ (ಜುಲೈ 23) ಸ್ಕಾಟ್‌ಲ್ಯಾಂಡ್‌ನ ಗ್ಲ್ಯಾಸ್ಗೋ ನಗರದಲ್ಲಿ 23ನೇ ಕಾಮನ್‌ವೆಲ್ತ್ ಕ್ರೀಡಾಕೂಟ-2026 ಶುರುವಾಗಲಿದೆ.

Jul 23, 2026 - 11:32
Jul 23, 2026 - 11:42
Commonwealth Games-2026: ಇಂದಿನಿಂದ ಕಾಮನ್‌ವೆಲ್ತ್ ಕ್ರೀಡಾಕೂಟ.. ಭಾರತದ 126 ಕ್ರೀಡಾಪಟುಗಳು ಭಾಗಿ

ಗ್ಲ್ಯಾಸ್ಗೋ: ಇಂದಿನಿಂದ (ಜುಲೈ 23) ಸ್ಕಾಟ್‌ಲ್ಯಾಂಡ್‌ನ ಗ್ಲ್ಯಾಸ್ಗೋ ನಗರದಲ್ಲಿ 23ನೇ ಕಾಮನ್‌ವೆಲ್ತ್ ಕ್ರೀಡಾಕೂಟ-2026 (Commonwealth Games-2026) ಶುರುವಾಗಲಿದೆ. ವೆಚ್ಚ ಕಡಿತ ಹಿನ್ನೆಲೆ, ಈ ಬಾರಿಯ ಕ್ರೀಡಾಕೂಟವನ್ನು ಬರೀ 10 ಕ್ರೀಡೆಗಳಿಗೆ (6 ಪ್ಯಾರಾ ಕ್ರೀಡೆಗಳು) ಸೀಮಿತಗೊಳಿಸಲಾಗಿದೆ. 

ಹಾಕಿ, ಕುಸ್ತಿ, ಟೇಬಲ್ ಟೆನಿಸ್, ಶೂಟಿಂಗ್ ಮತ್ತು ಬ್ಯಾಡ್ಮಿಂಟನ್‌ನಂತಹ ಜನಪ್ರಿಯ ಕ್ರೀಡೆಗಳನ್ನು ಕೈಬಿಡಲಾಗಿದೆ. ಅಥ್ಲೆಟಿಕ್ಸ್ ಹಾಗೂ ಪಾರಾ ಅಥ್ಲೆಟಿಕ್ಸ್ (ಟ್ರ್ಯಾಕ್, ಫೀಲ್ಡ್), ಸ್ವಿಮ್ಮಿಂಗ್ ಮತ್ತು ಪಾರಾ ಸ್ಮಿಮ್ಮಿಂಗ್, ವೇಟ್ ಲಿಫ್ಟಿಂಗ್ & ಪಾರಾ ವೇಟ್ ಲಿಫ್ಟಿಂಗ್, ಸೈಕ್ಲಿಂಗ್ ಹಾಗೂ ಪಾರಾ ಟ್ರ್ಯಾಕ್ ಸೈಕ್ಲಿಂಗ್, ಬಾಕ್ಸಿಂಗ್, ಜೂಡೋ, ನೆಟ್‌ಬಾಲ್, ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್, ಬೌಲ್ಸ್ ಮತ್ತು ಪಾರಾ ಬೌಲ್ಸ್, 3x3 ಬ್ಯಾಸ್ಕೆಟ್‌ಬಾಲ್ ಮತ್ತು 3x3 ವೀಲ್‌ಚೇರ್ ಬ್ಯಾಸ್ಕೆಟ್‌ಬಾಲ್‌ನ್ನು ಮಾತ್ರ ಆಡಿಸಲಾಗುತ್ತದೆ. 

ಈ ಕ್ರೀಡಾಕೂಟದಲ್ಲಿ 74 ದೇಶಗಳ 3000 ಅಥ್ಲೀಟ್‌ಗಳು ಭಾಗವಹಿಸಲಿದ್ದಾರೆ. ಭಾರತ ಪರವಾಗಿ 126 ಕ್ರೀಡಾಪಟುಗಳು ಕಣಕ್ಕೆ ಇಳಿಯುತ್ತಿದ್ದಾರೆ. ರಾತ್ರಿ 10:30ಕ್ಕೆ (ಭಾರತೀಯ ಕಾಲಮಾನ) ಅಧಿಕೃತ ಉದ್ಘಾಟನಾ ಸಮಾರಂಭ ಜರುಗಲಿದ್ದು, ಒಲಿಂಪಿಕ್ ಪದಕ ವಿಜೇತ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಹಾಗೂ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ನೇತೃತ್ವದಲ್ಲಿ ಭಾರತ ತಂಡವು ಪರೇಡ್‌ನಲ್ಲಿ ಪಾಲ್ಗೊಳ್ಳಲಿದೆ.

ಆಗಸ್ಟ್ 2 ರಂದು ಸಮಾರೋಪ ಸಮಾರಂಭ ಆಯೋಜಿಸಲಾಗಿದೆ. ಅಂದು 2030ರ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಅಧಿಕೃತ ಆತಿಥ್ಯ ಭಾರತಕ್ಕೆ ಧ್ವಜವನ್ನು ಹಸ್ತಾಂತರಿಸಲಾಗುತ್ತದೆ. ಗುಜರಾತ್‌ನ ಅಹಮದಾಬಾದ್‌ನಲ್ಲಿ ಈ ಕ್ರೀಡಾಕೂಡವು ನಡೆಯಲಿದೆ. 

ಕ್ರೀಡಾಕೂಟದಲ್ಲಿ ಭಾಗವಹಿಸುವ ಕನ್ನಡಿಗರು ಯಾರು?

ಕರ್ನಾಟಕದ 8 ಸ್ಪರ್ಧಿಗಳು ಈ ಕ್ರೀಡಾಕೂಟದಲ್ಲಿ ಆಡುವರು. ಸ್ವಿಮ್ಮರ್ ಶ್ರೀಹರಿ ನಟರಾಜ್‌, ಅನೀಶ್‌ ಗೌಡ, ಅಥ್ಲೀಟ್ ಯಶಸ್‌ ಪಿ, ಲೋಕೇಶ್‌ ಸತ್ಯನಾಥನ್‌, ಪ್ಯಾರಾ ಸ್ವಿಮ್ಮರ್ ಸಾತ್ವಿಕ್‌ ಪಾಟೀಲ್‌, ಪ್ಯಾರಾ ಬಾಸ್ಕೆಟ್‌ಬಾಲ್‌ ಆಟಗಾರ್ತಿ ಲಕ್ಷ್ಮಿ ರಾಯಪ್ಪ ಹಾಗೂ ಪ್ಯಾರಾ ಅಥ್ಲೀಟ್‌ ಶಿಲ್ಪಾ ಕೆ.ಎಸ್‌ ಭಾವಹಿಸುತ್ತಿದ್ದಾರೆ.

ಕಾಮನ್‌ವೆಲ್ತ್ ಹಿನ್ನೆಲೆ:

ಕಾಮನ್‌ವೆಲ್ತ್ ಕ್ರೀಡಾಕೂಟವು ಒಲಿಂಪಿಕ್ಸ್ ಮತ್ತು ಏಷ್ಯನ್ ಗೇಮ್ಸ್‌ ಬಳಿಕ, ವಿಶ್ವದ 3ನೇ ಅತಿ ದೊಡ್ಡ ಕ್ರೀಡಾಕೂಟವಾಗಿದೆ. ಈ ಹಿಂದೆ ಬ್ರಿಟಿಷ್ ಸಾಮ್ರಾಜ್ಯದ ಆಳ್ವಿಕೆಗೆ ಒಳಪಟ್ಟ ಹಾಗೂ ಸದ್ಯ ಕಾಮನ್‌ವೆಲ್ತ್ ಒಕ್ಕೂಟದಲ್ಲಿರುವ ದೇಶಗಳು ಈ ಕೂಟದಲ್ಲಿ ಭಾಗವಹಿಸುತ್ತವೆ. 1930ರಲ್ಲಿ ಕೆನಡಾದ ಹ್ಯಾಮಿಲ್ಟನ್ ನಗರದಲ್ಲಿ ಮೊದಲ ಕ್ರೀಡಾಕೂಟ ನಡೆಯಿತು. 11 ದೇಶಗಳ ಸುಮಾರು 400 ಕ್ರೀಡಾಪಟುಗಳು ಪಾಲ್ಗೊಂಡಿದ್ದರು.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.