Today Gold Price: ಇಂದು ಬಂಗಾರದ ಬೆಲೆ ಏರಿಕೆ

Today Gold Price: ಚಿನಿವಾರ ಪೇಟೆಯಲ್ಲಿ ಇಂದು (ಗುರುವಾರ) ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ.

Jul 23, 2026 - 12:04
Jul 24, 2026 - 11:16
Today Gold Price: ಇಂದು ಬಂಗಾರದ ಬೆಲೆ ಏರಿಕೆ

ಬೆಂಗಳೂರು: ಸದ್ಯ ಆಷಾಡ ಮಾಸವಿದ್ದು, ನಿರೀಕ್ಷೆಯಂತೆ ಆಭರಣದ ಬೆಲೆ ಇಳಿಕೆಯಾಗಬೇಕಿತ್ತು. ಆದರೀಗ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಇದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಚಿನಿವಾರ ಪೇಟೆಯಲ್ಲಿ ಇಂದು (ಗುರುವಾರ) ಚಿನ್ನದ ಬೆಲೆ ಏರಿಕೆಯಾಗಿದ್ದು, ಪ್ಲಾಟಿನಂ ದರವು ಅತ್ಯಲ್ಪ ಇಳಿಕೆಯಾಗಿದೆ. ಆದಾಗ್ಯೂ ಬೆಳ್ಳಿ ದರವು ಸ್ಥಿರವಾಗಿದೆ. 

ರಾಜ್ಯದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.770 ಹೆಚ್ಚಳವಾಗಿ ರೂ.1,47,280 ಆಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ರೂ.700 ಏರಿಕೆಯಾಗಿ ರೂ.1,35,000ಕ್ಕೆ ತಲುಪಿದೆ. 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.580 ಹೆಚ್ಚಳವಾಗಿ ರೂ.1,10,460 ಆಗಿದೆ.

ಅದೇ ರೀತಿಯಲ್ಲಿ 10 ಗ್ರಾಂ ಪ್ಲಾಟಿನಂ ಬೆಲೆ ಕೇವಲ ರೂ.80 ಇಳಿಕೆಯಾಗಿ ರೂ.51,290ಕ್ಕೆ ಬಂದಿದ್ದು, 1 ಕೆಜಿ ಬೆಳ್ಳಿ ರೂ.2,40,000 ದರದಲ್ಲಿ ಮಾರಾಟವಾಗುತ್ತಿದೆ. ಹೀಗಾಗಿ, ಖರೀದಿದಾರರು ಸ್ವಲ್ಪ ಮಟ್ಟಿಗೆ ನಿರಾಳರಾಗಿದ್ದಾರೆ. 

ಷೇರುಪೇಟೆ ಆರಂಭಿಕ ವಹಿವಾಟು ಕುಸಿತ:

ಭಾರತದ ಷೇರುಪೇಟೆ ಆರಂಭಿಕ ವಹಿವಾಟು ಇಂದು ಕುಸಿತವಾಗಿದೆ. ಸೆನ್ಸೆಕ್ಸ್ 314.62 ಅಂಕಗಳು ಅಥವಾ ಶೇಕಡ 0.41% ಇಳಿಕೆಯಾಗಿ 76,440.43 ಅಂಕಗಳಿಗೆ ತಲುಪಿದೆ. ನಿಫ್ಟಿ 82.50 ಅಂಕಗಳು ಅಥವಾ ಶೇಕಡ 0.34% ಕುಸಿದು 23,913.75 ಅಂಕಗಳಲ್ಲಿ ವಹಿವಾಟು 
ಮುಂದುವರಿದಿದೆ. 

ಈ ಕಂಪನಿ ಷೇರುಗಳು ಲಾಭ - ನಷ್ಟ:

ಎಟರ್ನಲ್, ಟಾಟಾ ಕನ್ಸ್ಯೂಮರ್, ಒಎನ್‌ಜಿಸಿ, ಬಜಾಜ್ ಆಟೋ ಹಾಗೂ ಕೋಲ್ ಇಂಡಿಯಾ ಕಂಪನಿಗಳು ಷೇರುಗಳು ಲಾಭದಲ್ಲಿವೆ. ಡಾ.ರೆಡ್ಡೀಸ್ ಲ್ಯಾಬ್ಸ್, ಇಂಟರ್‌ಗ್ಲೋಬ್ ಏವಿಯೇಷನ್, ಇನ್ಫೋಸಿಸ್ ಮತ್ತು ಟಾಟಾ ಸ್ಟೀಲ್ ಕಂಪನಿಗಳು ಷೇರುಗಳು ನಷ್ಟದಲ್ಲಿವೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.