Today Gold Price: ಇಂದು ಆಭರಣದ ಬೆಲೆ ಇಳಿಕೆ
Today Gold Price: ಚಿನಿವಾರ ಪೇಟೆಯಲ್ಲಿ ಇಂದು (ಶುಕ್ರವಾರ) ಚಿನ್ನ ಹಾಗೂ ಬೆಳ್ಳಿ ದರವು ಇಳಿಕೆಯಾಗಿದೆ. ಆದಾಗ್ಯೂ ಪ್ಲಾಟಿನಂ ಬೆಲೆ ಮಾತ್ರ ಸ್ಥಿರವಾಗಿದೆ.
ಬೆಂಗಳೂರು: ಆಭರಣ ಪ್ರಿಯರು ನಿಟ್ಟುಸಿರು ಬಿಟ್ಟಿದ್ದಾರೆ. ಚಿನಿವಾರ ಪೇಟೆಯಲ್ಲಿ ಇಂದು (ಶುಕ್ರವಾರ) ಚಿನ್ನ ಹಾಗೂ ಬೆಳ್ಳಿ ದರವು ಇಳಿಕೆಯಾಗಿದೆ. ಆದಾಗ್ಯೂ ಪ್ಲಾಟಿನಂ ಬೆಲೆ ಮಾತ್ರ ಸ್ಥಿರವಾಗಿದೆ.
ರಾಜ್ಯದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.1,850 ಇಳಿಕೆಯಾಗಿ ರೂ.1,44,330 ಆಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ರೂ.1,700 ಕಡಿಮೆಯಾಗಿ ರೂ.1,32,300ಕ್ಕೆ ತಲುಪಿದೆ. 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.1,390 ಇಳಿಕೆಯಾಗಿ ರೂ.1,08,250 ಆಗಿದೆ. 1 ಕೆಜಿ ಬೆಳ್ಳಿ ಬೆಲೆ ರೂ.5,000 ಕಡಿಮೆಯಾಗಿ ರೂ.2,35,000ಕ್ಕೆ ಬಂದಿದೆ. 10 ಗ್ರಾಂ ಪ್ಲಾಟಿನಂ ರೂ.51,290 ದರದಲ್ಲಿ ಮಾರಾಟವಾಗುತ್ತಿದೆ.
ನವದೆಹಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ರೂ.1,850 ಕಡಿಮೆಯಾಗಿ ರೂ.1,44,480 ಆಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.1,700 ಇಳಿಕೆಯಾಗಿ ರೂ.1,32,420ಕ್ಕೆ ಬಂದಿದೆ. 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ರೂ.1,390 ಕಡಿಮೆಯಾಗಿ ರೂ.1,08,400 ಆಗಿದೆ. 1 ಕೆಜಿ ಬೆಳ್ಳಿ ದರ ರೂ.5,000 ಇಳಿಕೆಯಾಗಿ ರೂ.2,35,000ಕ್ಕೆ ತಲುಪಿದೆ. 10 ಗ್ರಾಂ ಪ್ಲಾಟಿನಂನ್ನು ರೂ.51,290 ಬೆಲೆಯಲ್ಲಿ ಮಾರಲಾಗುತ್ತಿದೆ.
ಮುಂಬೈನಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.1,850 ಇಳಿಕೆಯಾಗಿ ರೂ.1,44,330 ಆಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ರೂ.1,700 ಕಡಿಮೆಯಾಗಿ ರೂ.1,32,300ಕ್ಕೆ ತಲುಪಿದೆ. 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.1,390 ಇಳಿಕೆಯಾಗಿ ರೂ.1,08,250 ಆಗಿದೆ. 1 ಕೆಜಿ ಬೆಳ್ಳಿ ಬೆಲೆ ರೂ.5,000 ಕಡಿಮೆಯಾಗಿ ರೂ.2,35,000ಕ್ಕೆ ಬಂದಿದೆ. 10 ಗ್ರಾಂ ಪ್ಲಾಟಿನಂ ರೂ.51,290 ದರದಲ್ಲಿ ಮಾರಾಟವಾಗುತ್ತಿದೆ.
ಷೇರುಪೇಟೆ ಆರಂಭಿಕ ವಹಿವಾಟು ಕುಸಿತ:
ಇಂದು ಷೇರುಪೇಟೆ ಆರಂಭಿಕ ವಹಿವಾಟು ನಕಾರತ್ಮಕವಾಗಿದೆ. ಸೆನ್ಸೆಕ್ಸ್ 751.18 ಅಂಕಗಳು ಇಳಿಕೆಯಾಗಿ 75,640.21 ಅಂಕಗಳಿಗೆ ತಲುಪಿದೆ. ನಿಫ್ಟಿ 211.85 ಅಂಕಗಳು ಕುಸಿದು 23,657.75 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ.
ಹೆಚ್‌ಸಿಎಲ್ ಟೆಕ್, ಟಿಸಿಎಸ್ ಹಾಗೂ ಸನ್ ಫಾರ್ಮಾ ಷೇರುಗಳು ಲಾಭದಲ್ಲಿವೆ. ಬಜಾಜ್ ಫೈನಾನ್ಸ್, ಭಾರ್ತಿ ಏರ್‌ಟೆಲ್, ಇಂಡಿಗೊ, ಎಟರ್ನಲ್ ಹಾಗೂ ಅಲ್ಟ್ರಾಟೆಕ್ ಸಿಮೆಂಟ್ ಷೇರುಗಳು ನಷ್ಟದಲ್ಲಿವೆ.
Source Link: Goodreturns