ಬನ್ನಂಜೆ ಗೋವಿಂದಾಚಾರ್ಯರ 'ನವತಿ ಸಂಭ್ರಮ' ಸಮಾರೋಪಕ್ಕೆ ಭವ್ಯ ಚಾಲನೆ

Bannanje Govindacharya Navati Sambaram: ಬೆಂಗಳೂರಿನ ಗಾಯನ ಸಮಾಜದಲ್ಲಿ ಇಂದು ನಾಡಿನ ಖ್ಯಾತ ವಿದ್ವಾಂಸ, ವಾಗ್ಮಿ ಹಾಗೂ ವೈದಿಕ-ಸಾಂಸ್ಕೃತಿಕ ಕ್ಷೇತ್ರದ ಸಾಧಕ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ 'ನವತಿ ಸಂಭ್ರಮ'ದ ಸಮಾರೋಪ ಸಮಾರಂಭವು ಅತ್ಯಂತ ವೈಭವದಿಂದ ಆರಂಭಗೊಂಡಿತು.

Aug 2, 2026 - 10:48
Aug 2, 2026 - 10:49
ಬನ್ನಂಜೆ ಗೋವಿಂದಾಚಾರ್ಯರ 'ನವತಿ ಸಂಭ್ರಮ' ಸಮಾರೋಪಕ್ಕೆ ಭವ್ಯ ಚಾಲನೆ

ಬೆಂಗಳೂರು: ಗಾಯನ ಸಮಾಜದಲ್ಲಿ ಇಂದು (ಭಾನುವಾರ), ನಾಡಿನ ಖ್ಯಾತ ವಿದ್ವಾಂಸ, ವಾಗ್ಮಿ ಹಾಗೂ ವೈದಿಕ-ಸಾಂಸ್ಕೃತಿಕ ಕ್ಷೇತ್ರದ ಸಾಧಕ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ 'ನವತಿ ಸಂಭ್ರಮ'ದ ಸಮಾರೋಪ ಸಮಾರಂಭವು ಅತ್ಯಂತ ವೈಭವದಿಂದ ಆರಂಭಗೊಂಡಿತು.

ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರ ತೀರ್ಥ ಶ್ರೀಪಾದರು, ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವ್ಯಾಸರಾಯ, ಸುತ್ತೂರು ಮತ್ತು ತರಳಬಾಳು ಮಠಾಧೀಶರು ಸೇರಿದಂತೆ ವಿವಿಧ ಮಠಗಳ ಪೀಠಾಧಿಪತಿಗಳು ಉಪಸ್ಥಿತರಿದ್ದು, ಈ  ಸಮಾರಂಭಕ್ಕೆ ದಿವ್ಯ ಮೆರುಗು ನೀಡಿದರು.

ನಾಡಿನ ಖ್ಯಾತ ವಿದ್ವಾಂಸ ಡಾ.ಬ್ರಹ್ಮಣ್ಯಾಚಾರ್ಯರು, ವಿದ್ಯಾಭೂಷಣರು ಸೇರಿದಂತೆ ಅನೇಕ ಪಂಡಿತರು, ಸಂಶೋಧಕರು, ಸಾಹಿತ್ಯಾಸಕ್ತರು ಮತ್ತು ಗಣ್ಯರು ಭಾಗವಹಿಸಿದ್ದು, ಬನ್ನಂಜೆ ಗೋವಿಂದಾಚಾರ್ಯರ ಅಪೂರ್ವ ಪಾಂಡಿತ್ಯ, ಭಾರತೀಯ ಸಂಸ್ಕೃತಿ, ವೇದಾಂತ, ಸಾಹಿತ್ಯ ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ಅವರು ಸಲ್ಲಿಸಿರುವ ಅಮೂಲ್ಯ ಕೊಡುಗೆಯನ್ನು ಸ್ಮರಿಸಿ ಗೌರವ ಸಲ್ಲಿಸಿದರು.

ಮೂರು ದಿನಗಳ ಕಾಲ ನಡೆಯಲಿರುವ ಈ ಸಮಾರೋಪೋತ್ಸವದಲ್ಲಿ, ವಿಶೇಷ ಉಪನ್ಯಾಸಗಳು, ವಿಚಾರಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಬನ್ನಂಜೆ ಗೋವಿಂದಾಚಾರ್ಯರ ಜೀವನ, ಸಾಧನೆ ಹಾಗೂ ವೈಚಾರಿಕ ಕೊಡುಗೆಗಳನ್ನು ಅನಾವರಣಗೊಳಿಸುವ ವಿವಿಧ ಕಾರ್ಯಕ್ರಮಗಳು ಏರ್ಪಡಿಸಲಾಗಿದೆ.

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ ಭಕ್ತರು, ಅಭಿಮಾನಿಗಳು, ವಿದ್ವಾಂಸರು ಮತ್ತು ಸಾರ್ವಜನಿಕರ ಉತ್ಸಾಹಭರಿತ ಭಾಗವಹಿಸುವಿಕೆಯಿಂದ, ಸಮಾರಂಭವು ಅತ್ಯಂತ ಅರ್ಥಪೂರ್ಣ ಹಾಗೂ ವೈಭವಯುತವಾಗಿ ಶುರುವಾಗಿದೆ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.