ದಿನ ಭವಿಷ್ಯ

11-08-2025

Aug 11, 2025 - 15:40
ದಿನ ಭವಿಷ್ಯ


                 ಜ್ಯೋತಿರ್ಮಯ.

ಅದೃಷ್ಟ ಸಂಖ್ಯೆ  2

೧. ಮೇಷ:
 ಸಪ್ತಾಹ  ಆರಂಭದ ದಿನ ಶುಭದಾಯಕ. ಹಿರಿಯರ ಆರೋಗ್ಯ ಉತ್ತಮ. ಪಾಲುದಾರಿಕೆ ವ್ಯವಹಾರ ಸುಗಮ. ದೂರದ ಬಂಧುಗಳ ಆಗಮನ. ವಿದ್ಯಾರ್ಥಿಗಳು ಏಕಾಗ್ರತೆಗೆ ಪ್ರಯತ್ನಿಸಲು ಸಕಾಲ. ಗಣಪತಿ ಅಥರ್ವಶೀರ್ಷ, ಆಂಜನೇಯ ಸ್ತೋತ್ರ, ಶನಿಮಹಾತ್ಮೆ  ಓದಿ.

೨. ವೃಷಭ:

 ಉದ್ಯೋಗ, ವ್ಯವಹಾರಗಳಲ್ಲಿ ನಿಧಾನ, ಆದರೆ ಸ್ಥಿರವಾದ ಪ್ರಗತಿ. ಮಿತ್ರರೊಡನೆ ಮನಸ್ತಾಪಕ್ಕೆ ಎಡೆಗೊಡದಿರಿ. ವೃತ್ತಿಸಂಬಂಧ ಸಣ್ಣ ಪ್ರವಾಸ ಸಂಭವ. ಮನೆಯಲ್ಲಿ ಅನುಕೂಲದ ವಾತಾವರಣ. ಮಕ್ಕಳ ವ್ಯಾಸಂಗದಲ್ಲಿ ಪ್ರಗತಿ. ಗಣೇಶ ಕವಚ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.


೩.ಮಿಥುನ:
 ಆರೋಗ್ಯದ ಕಡೆಗೆ ಗಮನವಿರಲಿ. ಕಾರ್ಯ ಮುಗಿಸಲು ಆತುರ ಬೇಡ. ಕಿರಿಯರ  ಭವಿಷ್ಯ ಚಿಂತನೆ. ಸಣ್ಣ ಉದ್ಯಮಿಗಳಿಗೆ ಪೂರಕ ವಾತಾವರಣ. ಅವಿವಾಹಿತರಿಗೆ ವಿವಾಹ ಯೋಗ ಸನ್ನಿಹಿತ. ಗಣೇಶ ಅಷ್ಟಕ, ರಾಮರಕ್ಷಾ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

೪.ಕರ್ಕಾಟಕ:

ಕಲೆ, ಸಾಹಿತ್ಯ ಸಾಧಕರಿಗೆ ಶುಭದಿನ. ಉದ್ಯೋಗ, ವ್ಯವಹಾರ ರಂಗದಲ್ಲಿ ಹೊಸ ಸಾಧ್ಯತೆ. ಹಿರಿಯರ ಆರೋಗ್ಯ ಸುಧಾರಣೆ. ಗೃಹಿಣಿಯರಿಗೆ ಮನೋಲ್ಲಾಸ. ಮಕ್ಕಳ  ಏಕಾಗ್ರತೆ  ವೃದ್ಧಿಗೆ ಪ್ರಯತ್ನ ಅಗತ್ಯ. ಗಣೇಶ ಪಂಚರತ್ನ, ಶಿವಪಂಚಾಕ್ಷರ ಸ್ತೋತ್ರ, ದೇವೀಸ್ತೋತ್ರ ಓದಿ.


೫.ಸಿಂಹ:

ವ್ಯವಹಾರ ಕ್ಷೇತ್ರದಲ್ಲಿ ಪ್ರಗತಿ. ನಿರಂತರ ಶ್ರಮದಿಂದ ಆಯಾಸ. ಕೃಷಿ ಕ್ಷೇತ್ರದಲ್ಲಿ  ಆಸಕ್ತರಿಗೆ ಶುಭ ಸಮಾಚಾರ. ಗೃಹಿಣಿಯರ ಆರೋಗ್ಯ ಗಮನಿಸಿ. ಅಧ್ಯಾಪನ ವೃತ್ತಿಯವರಿಗೆ  ಶ್ರಮ. ಗಣೇಶ ಸ್ತೋತ್ರ, ದಾರಿದ್ರ್ಯದಹನ ಶಿವಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.


೬. ಕನ್ಯಾ:

ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ‌ ಸ್ಥಿರ ವಾತಾವರಣ. ವಿಳಂಬಿತ ಕಾರ್ಯ ಪೂರ್ಣಗೊಳ್ಳುವ ಸಮಯ. ಧಾನ್ಯ ವ್ಯಾಪಾರಿಗಳಿಗೆ ಶುಭ. ಹಿರಿಯರು, ಮಹಿಳೆಯರು, ಮಕ್ಕಳಿಗೆ  ಲವಲವಿಕೆ. ಗಣಪತಿ ಅಥರ್ವಶೀರ್ಷ, ಶಿವಕವಚ, ಮಹಾಲಕ್ಷ್ಮಿ ಅಷ್ಟಕ ಓದಿ.

೭. ತುಲಾ:
ಬಹುದಿನಗಳ ಅಪೇಕ್ಷೆ ಈಡೇರಿಕೆ. ತೃಪ್ತಿಯಿಂದ ಕಾಲುಚಾಚಿ  ಕೂರುವ ಸಮಯ ಅಲ್ಲ. ದಂಪತಿಗಳ ನಡುವೆ ಹೊಂದಾಣಿಕೆ. ಅಧಿಕಾರಿ ವರ್ಗಕ್ಕೆ ಹೆಚ್ಚು ಹೊಣೆಗಾರಿಕೆ. ಮಕ್ಕಳಿಂದ ಸಂತಸ.ಗಣಪತಿ ಅಥರ್ವಶೀರ್ಷ, ಶಿವಸಹಸ್ರನಾಮ, ಶನಿಸ್ತೋತ್ರ ಓದಿ.


೮.ವೃಶ್ಚಿಕ:

ಅನ್ಯಾಯಕ್ಕೆ ಪ್ರತಿ ಅನ್ಯಾಯ ಬೇಡ. ತಾಳ್ಮೆಯಿಂದ ಹಿರಿಯರ ಒಲವು, ಪ್ರೋತ್ಸಾಹ ಲಭ್ಯ. ದಕ್ಷಿಣ ದಿಕ್ಕಿನಲ್ಲಿ ಪಯಣ  ಸಂಭವ. ಹಿರಿಯರ ಆರೋಗ್ಯ  ಉತ್ತಮ. ಆವಶ್ಯಕತೆಗೆ ಸರಿಯಾಗಿ ನೆರೆಯವರ ಸಹಕಾರ. ಗಣೇಶ ಕವಚ, ದಕ್ಷಿಣಾಮೂರ್ತಿ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

೯.ಧನು:

ಅನಿರೀಕ್ಷಿತ ಧನಾಗಮ. ದಾಂಪತ್ಯ ಜೀವನದಲ್ಲಿ ತೃಪ್ತಿ. ಹಿರಿಯರ ಅಪೇಕ್ಷೆ  ಅರಿತು ನಡೆಯುವುದರಿಂದ. ಶ್ರೇಯಸ್ಸು. ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ. ಮಕ್ಕಳಲ್ಲಿ ಏಕಾಗ್ರತೆ ಬೆಳೆಸಲು ಪ್ರಯತ್ನ. ಗಣೇಶ ಪಂಚರತ್ಕ, ಕನಕಧಾರಾ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

೧೦.ಮಕರ:

ನೂತನ ವಸ್ತು ಖರೀದಿ  ಯೋಜನೆ. ಹೊಸ ಅವಕಾಶಗಳ ಶೋಧನೆ. ಸಹೋದ್ಯೋಗಿಗಳಿಂದ ಸಹಕಾರ. ಸಾಂಸಾರಿಕ ಬಿಕ್ಕಟ್ಟು ದೂರ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಸ್ಥಿರ. ವ್ಯವಹಾರ ಸಂಬಂಧ ದಕ್ಷಿಣಕ್ಕೆ ಪ್ರಯಾಣ. ಗಣಪತಿ ಅಥರ್ವಶೀರ್ಷ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಶನಿಸ್ತೋತ್ರ ಓದಿ.


೧೧. ಕುಂಭ:

ಸಂಚಿತ ಧನ ಸದ್ವಿನಿಯೋಗ. ಸಮಾಜದಲ್ಲಿ ಗೌರವ ವೃದ್ಧಿ.  ವೃತ್ತಿಪರರಿಗೆ ಸಾಮಾಜಿಕರ ಶ್ಲಾಘನೆ. ಅನಾರೋಗ್ಯದ ನಿಮಿತ್ತ ವೈದ್ಯರ ಭೇಟಿ ಸಂಭವ. ಮಾನಸಿಕ  ದುಗುಡ ದೂರ. ದೂರದ ಬಂಧುಗಳ ಆಗಮನ. ಗಣೇಶ ಕವಚ, ಸುಬ್ರಹ್ಮಣ್ಯ ಸ್ತೋತ್ರ, ಶನಿಮಹಾತ್ಮೆ  ಓದಿ.

೧೨. ಮೀನ: ‌
 
ಉದ್ಯೋಗ, ವ್ಯವಹಾರದಲ್ಲಿ ತೃಪ್ತಿ. ಹಣಕಾಸು ವ್ಯವಹಾರ ಸ್ಥಿರ. ಹಳೆಯ ಗೆಳೆಯರ ಭೇಟಿ. ಗೃಹೋಪಯೋಗಿ ಸಾಮಗ್ರಿ ಖರೀದಿ. ದಂಪತಿಗಳ ನಡುವೆ ಅನುರಾಗ ವೃದ್ಧಿ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ  ಓದಿ.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.