ದಿನ ಭವಿಷ್ಯ

21-09-2025

Sep 22, 2025 - 16:30
ದಿನ ಭವಿಷ್ಯ

                   ಜ್ಯೋತಿರ್ಮಯ.

ಅದೃಷ್ಟ ಸಂಖ್ಯೆ  3

೧. ಮೇಷ:
 ಉದ್ವೇಗ ಕಡಿಮೆಯಾದಷ್ಟು  ಬದುಕು ನಿರಾಳ. ವಾಹನ ಚಾಲನೆಯಲ್ಲಿ ಎಚ್ಚರ. ಅಪರೂಪದ ಬಂಧುಗಳ ಭೇಟಿ. ಮಹಾಲಯ ಅಮಾವಾಸ್ಯೆಯ ಪರ್ವದಿನದ ಕಾರ್ಯದಲ್ಲಿ ಭಾಗಿ ಗಣೇಶ ದ್ವಾದಶನಾಮ ಸ್ತೋತ್ರ, ರಾಮರಕ್ಷಾ ಸ್ತೋತ್ರ, ಶನಿಮಹಾತ್ಮೆ ಓದಿ.


೨. ವೃಷಭ:
  ಕಾರ್ಯಗಳು  ನಿರೀಕ್ಷೆಗಿಂತ ಹೆಚ್ಚು ಸುಲಭ. ಮನೆಯಲ್ಲಿ ಸಮಾಧಾನದ ವಾತಾವರಣ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ. ಗೃಹೋತ್ಪನ್ನ ಖಾದ್ಯ ಪದಾರ್ಥಗಳ ಮಾರಾಟ ಹೆಚ್ಚಳ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.


೩ಮಿಥುನ:
ವ್ಯಾವಹಾರಿಕ ದೃಷ್ಟಿಯಿಂದ ಶುಭಕಾಲ. ಶಾರೀರಿಕ ತೊಂದರೆಗಳಿಂದ ಮುಕ್ತಿ. ಉದ್ಯೋಗಸ್ಥರಿಗೆ  ವಿರಾಮದಿಂದಾಗಿ  ನೆಮ್ಮದಿ. ವ್ಯವಹಾರಸ್ಥರಿಗೆ ಲಾಭ ತರುವ  ದಿನ. ದೃಢವಾದ  ಆತ್ಮವಿಶ್ವಾಸದಿಂದ  ಕಾರ್ಯಜಯ. ಗಣೇಶ ಕವಚ, ಶಿವ ಸಹಸ್ರನಾಮ, ಅನ್ನಪೂರ್ಣಾ ಸ್ತೋತ್ರ ಓದಿ.


೪. ಕರ್ಕಾಟಕ:

ಒಟ್ಟಿನಲ್ಲಿ ಶುಭಫಲಗಳೇ ಅಧಿಕ. ಉದ್ಯೋಗಸ್ಥರಿಗೆ   ನೆಮ್ಮದಿಯ ವಾತಾವರಣ. ಪಾಲುದಾರಿಕೆ ವ್ಯವಹಾರ ಮುನ್ನಡೆ. ಕಟ್ಟಡ ನಿರ್ಮಾಣ-ಮಾರಾಟ  ವ್ಯವಹಾರಸ್ಥರಿಗೆ   ಉತ್ತಮ ಲಾಭ. ರಾತ್ರಿ ಪ್ರಯಾಣ ಮಾಡದಿರಿ. ಗಣೇಶ ಪಂಚರತ್ನ, ಸುಬ್ರಹ್ಮಣ್ಯ ಕವಚ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

೫.ಸಿಂಹ:
ಆನಂದವನ್ನು ಉದಾರವಾಗಿ. ಹಂಚಿಕೊಳ್ಳಿ ಸ್ವಯಂ ಉದ್ಯೋಗಸ್ಥರಿಗೆ ಲಕ್ಷ್ಮೀ ಕಟಾಕ್ಷ. ಉಡುಪು ತಯಾರಿ ಉದ್ದಿಮೆಯವರಿಗೆ ಅಪಾರ ಲಾಭ. ಗೃಹಿಣಿಯರ ಸ್ವಾವಲಂಬನೆ ಯತ್ನಕ್ಕೆ  ಯಶಸ್ಸು. ಹತ್ತಿರದ  ಶಿವ ಪಾರ್ವತಿ ಕ್ಷೇತ್ರಕ್ಕೆ ಭೇಟಿ. ಗಣೇಶ ಅಷ್ಟಕ, ದಕ್ಷಿಣಾಮೂರ್ತಿ ಸ್ತೋತ್ರ, ಗುರುಸ್ತೋತ್ರ ಓದಿ.

೬. ಕನ್ಯಾ:
ಎಲ್ಲವನ್ನೂ ಸಾಧ್ಯಗೊಳಿಸುವ ದೈವಾನುಗ್ರಹಕ್ಕಾಗಿ‌ ಪ್ರಾರ್ಥನೆ ಅನಿರೀಕ್ಷಿತ ಮೂಲದಿಂದ  ಧನಪ್ರಾಪ್ತಿ.   ಸಹೋದ್ಯೋಗಿಯ ಮನೆಯ ಪಿತೃಕಾರ್ಯದಲ್ಲಿ ಭಾಗಿ. ಉದ್ಯೋಗಾಪೇಕ್ಷಿಗಳಿಗೆ ಯೋಗ್ಯ ಅವಕಾಶ ಗೋಚರ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಗಣೇಶ ಕವಚ, ರಾಮ ಭುಜಂಗ ಪ್ರಯಾತ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

೭. ತುಲಾ:
 ದಿನವೂ ನೆನಪಿಸುವ ಗೆಳೆಯನ ಆಗಮನ. ನಾಳೆಯ ಕೆಲಸ ಕಾರ್ಯಗಳ ತಯಾರಿ.  ನಿವೇಶನ, ಮನೆ ಖರೀದಿ- ಮಾರಾಟಗಾರರಿಗೆ ಅನುಕೂಲ. ಹಣ್ಣು, ತರಕಾರಿ ವ್ಯಾಪಾರ ತೃಪ್ತಿಕರ.  ಹಿರಿಯರಿಗೆ ಉಲ್ಲಾಸದ ವಾತಾವರಣ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಹನುಮಾನ್ ಚಾಲೀಸಾ ಓದಿ.


೮.ವೃಶ್ಚಿಕ:

  ನಾಳೆ ಆರಂಭವಾಗುವ ನವರಾತ್ರಿ ಹಬ್ಬಕ್ಕೆ ತಯಾರಿ. ಆಸ್ತಿ, ಮನೆ ದಳ್ಳಾಳಿಗಳಿಗೆ ಅನುಕೂಲ. ಲೇವಾದೇವಿ ವ್ಯವಹಾರಸ್ಥರಿಗೆ  ಸಾಮಾನ್ಯ ಲಾಭ.  ವಿದೇಶದಲ್ಲಿರುವ ಮಕ್ಕಳೊಂದಿಗೆ ಮಾತುಕತೆ. ಗಣೇಶ ಅಷ್ಟಕ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಆದಿತ್ಯ ಹೃದಯ ಓದಿ.

೯.ಧನು:
 ವಿರಾಮದ ದಿನವಾದರೂ ನಾಳೆಯ ಕಾರ್ಯಗಳ ತಯಾರಿ. ಅ ಹೊಂದಾಣಿಕೆ, ನಿಷ್ಠೆಗಳಿಂದ  ಕಾರ್ಯಸಾಧನೆ. ದಕ್ಷತೆ, ಪರಿಪೂರ್ಣತೆಗೆ ಸಾರ್ವತ್ರಿಕ ಪ್ರಶಂಸೆ. ದೇವತಾರ್ಚನೆಯಲ್ಲಿ ಆಸಕ್ತಿ. ವ್ಯವಹಾರ ಸಂಬಂಧ ಪ್ರಯಾಣ ಮುಂದೂಡಿಕೆ. ಗಣೇಶ ಪಂಚರತ್ನ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.


೧೦.ಮಕರ:
ಶೀಘ್ರಕೋಪ, ಆತಂಕಗಳನ್ನು ಬಿಟ್ಟಷ್ಟೂ ಕ್ಷೇಮ. ವೃತ್ತಿಪರರಿಗೆ ವಾರದ ವಿರಾಮ ಇಲ್ಲದೆ ದುಡಿಮೆ. ಪಾಲುದಾರಿಕೆ ವ್ಯವಹಾರದಲ್ಲಿ ಮುನ್ನಡೆ.  ಕೆಲವು ವರ್ಗಗಳ ವ್ಯಾಪಾರಿಗಳಿಗೆ ಅಧಿಕ ಲಾಭ.ಹೆಚ್ಚಿನವರಿಗೆ ಮಿಶ್ರಫಲ ಕೊಡುವ ದಿನ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಸ್ತೋತ್ರ ಓದಿ.


೧೧. ಕುಂಭ:
ಒಬ್ಬರ ಪಾಲಿಗೇ ಹೆಚ್ಚು ಜವಾಬ್ದಾರಿಗಳು ಬರುವ ಸಾಧ್ಯತೆ. ಸಾಮಾಜಿಕ ಚಟುವಟಿಕೆಗಳ ಒತ್ತಡ.  ಉದ್ಯೋಗ ರಂಗದಲ್ಲಿ ಹೆಚ್ಚು ಯಶಸ್ಸು. ಅವಿಶ್ರಾಂತ  ಚಟುವಟಿಕೆಗಳಿಂದ ಆಯಾಸ.  ಗೃಹಿಣಿಯರ ಉದ್ಯಮಗಳ ಜನಪ್ರಿಯತೆ ವೃದ್ಧಿ. ಗಣೇಶ ಕವಚ, ಶಿವಕವಚ,ಶನಿಮಹಾತ್ಮೆ  ಓದಿ.

೧೨. ಮೀನ:
ಇನ್ನಷ್ಟು ಹೊಣೆಗಾರಿಕೆಗಳಿಗೆ ಸಿದ್ಧರಾಗಿರಿ. ಕಾರ್ಯಕ್ಷೇತ್ರದಲ್ಲಿ ಪ್ರಯತ್ನಕ್ಕೆ ತಕ್ಕ ಫಲ. ಹಿರಿಯರ ಆರೋಗ್ಯದ ಕಡೆ ಗಮನವಿರಲಿ. ವಸ್ತ್ರ, ಶೋಕಿಸಾಮಗ್ರಿ ವ್ಯಾಪಾರಿಗಳಿಗೆ ಅನುಕೂಲ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ  ಓದಿ.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.