ಕೋಲಾರ & ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಸಂಪುಟದಲ್ಲಿ ಪ್ರಾತಿನಿಧ್ಯವಿಲ್ಲ: JDS ಟೀಕೆ
JDS: ಸಿಎಂ ಡಿಕೆಶಿ ಕ್ಯಾಬಿನೆಟ್‌ಗೆ ಸೋಮವಾರ ಹೊಸ 20 ಸಚಿವರು ಸೇರ್ಪಡೆಗೊಂಡಿದ್ದಾರೆ. ಆದರೆ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ಯಾರೊಬ್ಬರು ಸಂಪುಟಕ್ಕೆ ಸೇರಿಲ್ಲ. ಇದನ್ನು ರಾಜ್ಯ ಜೆಡಿಎಸ್ ಘಟಕ ಟೀಕಿಸಿದೆ.
ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D.K.Shivakumar), ಕ್ಯಾಬಿನೆಟ್‌ಗೆ ಸೋಮವಾರ ಹೊಸ 20 ಸಚಿವರು ಸೇರ್ಪಡೆಗೊಂಡಿದ್ದಾರೆ. ಆದರೆ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ಯಾರೊಬ್ಬರು ಸಂಪುಟಕ್ಕೆ ಸೇರಿಲ್ಲ. ಇದನ್ನು ರಾಜ್ಯ ಜೆಡಿಎಸ್ ಘಟಕ ಟೀಕಿಸಿದೆ.
ಈ ಬಗ್ಗೆ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ. ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಜನತೆ ಕಾಂಗ್ರೆಸ್ ಪಕ್ಷವನ್ನು ಕೈಹಿಡಿದಿದ್ದಕ್ಕೆ ಸಿಕ್ಕ ಉಡುಗೊರೆ ಏನು? ತ್ಯಾಜ್ಯ ಮಿಶ್ರಿತ ಕಲುಷಿತ ನೀರು! ಜನರ ದಾಹ ತೀರಿಸುವ ಬದಲು, ವಿಷವುಣಿಸಿ ಅವರ ಬದುಕನ್ನು ನರಕ ಮಾಡಿದ್ದೇ ಕಾಂಗ್ರೆಸ್ ಸರ್ಕಾರದ ಸಾಧನೆ. ಇದು ಬಯಲುಸೀಮೆಯ ಜಿಲ್ಲೆಯ ಜನರಿಗೆ ಮಾಡಿದ ಅತಿದೊಡ್ಡ ದ್ರೋಹ ಎಂದು ಹೇಳಿದೆ.
ಜನರಿಗೆ ಕಲುಷಿತ ನೀರು ಕೊಟ್ಟಿದ್ದು ಸಾಲದೆಂಬಂತೆ, ಈಗ ನೂತನ ಸಚಿವ ಸಂಪುಟದಲ್ಲಿ ಉಭಯ ಜಿಲ್ಲೆಗಳ ಶಾಸಕರಿಗೆ ಪ್ರಾತಿನಿಧ್ಯವನ್ನೇ ನೀಡದೆ ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಚುನಾವಣೆಯಲ್ಲಿ ಮತ ಕೇಳಲು ಮಾತ್ರ ಈ ಜಿಲ್ಲೆಗಳು ಬೇಕು, ಆದರೆ ಅಧಿಕಾರ ಹಂಚಿಕೆಯಲ್ಲಿ ಮಾತ್ರ ಈ ಮಲತಾಯಿ ಧೋರಣೆ ಏಕೆ? ಎಂದು ಪ್ರಶ್ನಿಸಿದೆ.
ಸಂಪುಟದಲ್ಲಿ ಪ್ರಾತಿನಿಧ್ಯ ನೀಡದಿರುವುದು ಕೇವಲ ಶಾಸಕರಿಗಲ್ಲ. ಬದಲಾಗಿ ಇಡೀ ಜಿಲ್ಲೆಯ ಜನಾದೇಶಕ್ಕೆ ಮಾಡಿದ ಘೋರ ಅಪಮಾನ. ಬಯಲುಸೀಮೆಯ ಜನರನ್ನು ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ 2028ಕ್ಕೆ ಮತದಾರರು ತಕ್ಕ ಪಾಠ ಕಲಿಸುತ್ತಾರೆ ಎಂದು ತಿಳಿಸಿದೆ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.