ಕುಕ್ಕೆ ದೇಗುಲದಲ್ಲೇ ಸೇವೆ ನೆರವೇರಿಸಿದರೆ ಮಾತ್ರ ಪೂರ್ಣ ಫಲ: ಮಧ್ಯವರ್ತಿಗಳ ಬಗ್ಗೆ ಭಕ್ತರಿಗೆ ಎಚ್ಚರಿಕೆ

Kukke Subrahmanya Temple: ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ 'ಕುಕ್ಕೆ ಸುಬ್ರಹ್ಮಣ್ಯ ದೇಗುಲ'ದಲ್ಲಿ ನಡೆಯುವ ಸರ್ಪ ಸಂಸ್ಕಾರ, ನಾಗ ಪ್ರತಿಷ್ಠೆ & ಆಶ್ಲೇಷ ಬಲಿ ಸೇರಿದಂತೆ ನಾಗದೋಷಕ್ಕೆ ಸಂಬಂಧಿಸಿದ ಎಲ್ಲಾ ಸೇವೆಗಳನ್ನು ಶ್ರೀ ಕ್ಷೇತ್ರದ ಆವರಣದಲ್ಲಿಯೇ ನೆರವೇರಿಸಿದರೆ, ಮಾತ್ರ ಪೂರ್ಣ ಫಲ ಸಿಗುತ್ತದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

Aug 3, 2026 - 10:58
Aug 3, 2026 - 11:04
ಕುಕ್ಕೆ ದೇಗುಲದಲ್ಲೇ ಸೇವೆ ನೆರವೇರಿಸಿದರೆ ಮಾತ್ರ ಪೂರ್ಣ ಫಲ: ಮಧ್ಯವರ್ತಿಗಳ ಬಗ್ಗೆ ಭಕ್ತರಿಗೆ ಎಚ್ಚರಿಕೆ

ಸುಬ್ರಹ್ಮಣ್ಯ: ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ 'ಕುಕ್ಕೆ ಸುಬ್ರಹ್ಮಣ್ಯ ದೇಗುಲ'ದಲ್ಲಿ ನಡೆಯುವ ಸರ್ಪ ಸಂಸ್ಕಾರ, ನಾಗ ಪ್ರತಿಷ್ಠೆ & ಆಶ್ಲೇಷ ಬಲಿ ಸೇರಿದಂತೆ ನಾಗದೋಷಕ್ಕೆ ಸಂಬಂಧಿಸಿದ ಎಲ್ಲಾ ಸೇವೆಗಳನ್ನು ಶ್ರೀ ಕ್ಷೇತ್ರದ ಆವರಣದಲ್ಲಿಯೇ ನೆರವೇರಿಸಿದರೆ, ಮಾತ್ರ ಪೂರ್ಣ ಫಲ ಸಿಗುತ್ತದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಕೆಲವು ಮಧ್ಯವರ್ತಿಗಳು, ಭಕ್ತರನ್ನು ದಾರಿ ತಪ್ಪಿಸಿ ಖಾಸಗಿ ವಸತಿ ಗೃಹಗಳು, ಹೊರಗಿನ ಸಣ್ಣ ಮಠ-ಮಂದಿರಗಳು, ಪುರೋಹಿತರ ಮನೆಗಳು ಅಥವಾ ಇತರೆ ಖಾಸಗಿ ಸ್ಥಳಗಳಲ್ಲಿ ಈ ಸೇವೆಗಳನ್ನು ಮಾಡಿಸುತ್ತಿದ್ದಾರೆ. ಅಂತಹ ಖಾಸಗಿ ಸ್ಥಳಗಳಲ್ಲಿ ನೆರವೇರಿಸಿದರೆ ದೋಷ ಪರಿಹಾರವಾಗುವುದಿಲ್ಲ. ಯಾವುದೇ ಪ್ರತಿಫಲವೂ ದೊರಕುವುದಿಲ್ಲ ಎಂದು ಹೇಳಿದೆ.

ನಾಗದೋಷ ಪರಿಹಾರಕ್ಕೆ ದೇಶದಲ್ಲೇ ಕುಕ್ಕೆ ಕ್ಷೇತ್ರ ಪ್ರಸಿದ್ಧಿ ಪಡೆದಿದೆ. ಸಂತಾನ ಭಾಗ್ಯ, ಕಾಳಸರ್ಪ ದೋಷ, ಸರ್ಪಶಾಪ ನಿವಾರಣೆಗಾಗಿ ಸಾವಿರಾರು ಭಕ್ತರು ಪ್ರತಿದಿನ ಇಲ್ಲಿಗೆ ಆಗಮಿಸುತ್ತಾರೆ. ಈ ಹಿನ್ನೆಲೆ, ಭಕ್ತರಲ್ಲಿ ಉಂಟಾಗಿದ್ದ ಗೊಂದಲ ನಿವಾರಿಸಲು ಆಡಳಿತ ಮಂಡಳಿಯು ಈ ಸ್ಪಷ್ಟನೆ ನೀಡಿದೆ.

ದೇವಸ್ಥಾನದ ವತಿಯಿಂದ ಈ ಸೇವೆಗಳನ್ನು ನೆರವೇರಿಸಲು ಯಾವುದೇ ಮಧ್ಯವರ್ತಿಗಳನ್ನು ನೇಮಕ ಮಾಡಿಲ್ಲ. ಹಲವು ವರ್ಷಗಳಿಂದ ಭಕ್ತರು ಸರ್ಪ ಸಂಸ್ಕಾರ ಸೇವೆಯನ್ನು ದೇಗುಲದಲ್ಲೇ ನಡೆಸಿಕೊಂಡು ಬರುತ್ತಿದ್ದಾರೆ. ಭಕ್ತರ ಅನುಕೂಲಕ್ಕಾಗಿ ಆನ್‌ಲೈನ್‌ನಲ್ಲಿ ಸೇವೆಗಳನ್ನು ಮುಂಚಿತವಾಗಿ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ. ದೇವಸ್ಥಾನದ ಅಧಿಕೃತ ವೆಬ್‌ಸೈಟ್ ಮೂಲಕವೇ ಬುಕ್ ಮಾಡಬೇಕು ಎಂದು ತಿಳಿಸಿದೆ.

ಇತ್ತೀಚೆಗೆ ಖಾಸಗಿ ಸ್ಥಳಗಳಲ್ಲಿ ನಡೆಯುವ ಸರ್ಪ ಸಂಸ್ಕಾರ, ನಾಗ ಪ್ರತಿಷ್ಠೆ, ಇತರೆ ಹೋಮಗಳು ಹಾಗೂ ಆಶ್ಲೇಷ ಬಲಿ ಸೇವೆಗಳನ್ನು ಮಧ್ಯವರ್ತಿಗಳ ಮೂಲಕ ನಂಬಿ ಮೋಸ ಹೋಗಿ, ದುಡ್ಡು ಕಳೆದುಕೊಂಡ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಹೀಗಾಗಿ ಭಕ್ತರು ಎಚ್ಚರದಿಂದಿರಬೇಕು. ಮಧ್ಯವರ್ತಿಗಳ ಮಾತಿಗೆ ಮರುಳಾಗಬಾರದು. ಅಧಿಕೃತ ಕೌಂಟರ್‌ನಲ್ಲಿ ಮಾತ್ರ ಹಣ ಪಾವತಿಸಿ ರಶೀದಿ ಪಡೆಯಬೇಕು ಎಂದು ಆಡಳಿತ ಮಂಡಳಿ ಕೋರಿದೆ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.