ಪಟ್ಟೆ ಬಡಗನ್ನೂರು: ಶ್ರೀ ಕೃಷ್ಣ ಲೀಲಾ ಕಾರ್ಯಕ್ರಮದ ಸಮಾಲೋಚನಾ ಸಭೆ
Patte Badagannur: ಇಲ್ಲಿನ ಶ್ರೀ ಕೃಷ್ಣ ವಿದ್ಯಾ ಸಂಸ್ಥೆಯಲ್ಲಿ ಸೆ.5 ರಂದು ನಡೆಯುವ 'ಶ್ರೀ ಕೃಷ್ಣ ಲೀಲಾ ಉತ್ಸವ'ದ ಕುರಿತ ಸಮಾಲೋಚನಾ ಸಭೆಯು ಭಾನುವಾರ ನಡೆಯಿತು.
ಪುತ್ತೂರು (ಪಟ್ಟೆ ಬಡಗನ್ನೂರು): ಇಲ್ಲಿನ ಶ್ರೀ ಕೃಷ್ಣ ವಿದ್ಯಾ ಸಂಸ್ಥೆಯಲ್ಲಿ, ಸೆ.5 ರಂದು ನಡೆಯುವ 'ಶ್ರೀ ಕೃಷ್ಣ ಲೀಲಾ ಉತ್ಸವ'ದ ಕುರಿತ ಸಮಾಲೋಚನಾ ಸಭೆಯು ಭಾನುವಾರ ನಡೆಯಿತು.
ಸಂಸ್ಥೆಯ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಿತು. ಅವರು ಮಾತನಾಡಿ, 'ಇದು ಕೇವಲ ಶಾಲಾ ಕಾರ್ಯಕ್ರಮವಲ್ಲ. ನಮ್ಮ ಊರಿನ ಸಮಾರಂಭ. ಎಲ್ಲರೂ ಸಂಪೂರ್ಣ ಸಹಕಾರ ನೀಡಬೇಕು' ಎಂದು ಹೇಳಿದರು.

ಈ ಸಭೆಯಲ್ಲಿ ಸಂಸ್ಥೆಯ ನಿರ್ದೇಶಕ ಗಣರಾಜ ಕುಂಬ್ಳೆ, ಸಂಚಾಲಕ ಶ್ರೀ ವಿಘ್ನೇಶ್ ಹಿರಣ್ಯ ಹಾಗೂ ಪ್ರೌಢಶಾಲಾ ಎಸ್‌ಡಿಎಸ್‌ಸಿ ಅಧ್ಯಕ್ಷ ಲಿಂಗಪ್ಪ ಗೌಡ ಮೂಡಿಕೆ ಇದ್ದರು.
ವಿವಿಧ ಉಪ ಸಮಿತಿಗಳ ಸಂಚಾಲಕರನ್ನು ನೇಮಿಸಲಾಯಿತು. ಸಭೆಯಲ್ಲಿ ಪಟ್ಟೆಯ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಸರ್ವ ಸದಸ್ಯರು, ಸಾಮಾಜಿಕ ಕಾರ್ಯಕರ್ತರು, ಶಾಲಾ ಮುಖ್ಯ ಶಿಕ್ಷಕರು ಹಾಗೂ ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿಘ್ನೇಶ್ ಹಿರಣ್ಯರು ಸ್ವಾಗತಿಸಿ, ಧನ್ಯವಾದಗಳನ್ನು ಅರ್ಪಿಸಿದರು. ಸಂಸ್ಥೆಯ ಶಿಕ್ಷಕರು ಸಹಕರಿಸಿದರು.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.