ಪಟ್ಟೆ ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳು: ನಕಾಭಿಯಾನ - ರಾಮಧಾನ್ಯ ಚರಿತೆ ಗಮಕ
Puttur: ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳು ಹಾಗೂ ಕನಕದಾಸ ಅಧ್ಯಯನ ಪೀಠ ಮಂಗಳೂರು ವಿವಿ ಸಹಯೋಗದಲ್ಲಿ, 'ರಾಮಧಾನ್ಯ ಚರಿತೆ ಗಮಕ' ಏರ್ಪಡಿಸಲಾಗಿತ್ತು.
ಪುತ್ತೂರು (ಪಟ್ಟೆ ಬಡನ್ನೂರು): ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳು ಹಾಗೂ ಮಂಗಳೂರು ವಿವಿಯ ಕನಕದಾಸ ಅಧ್ಯಯನ ಪೀಠ ಸಹಯೋಗದಲ್ಲಿ, ರಾಮಧಾನ್ಯ ಚರಿತೆ ಗಮಕ ಆಯೋಜಿಸಲಾಗಿತ್ತು.
ಪಟ್ಟೆ ವಿದ್ಯಾ ಸಂಸ್ಥೆಯ ಸಭಾಭವನದಲ್ಲಿ ಈ ಕಾರ್ಯಕ್ರಮವು ಜರುಗಿತು. ಸಂಸ್ಥೆಯ ನಿರ್ದೇಶಕಿ ಅಶ್ವಿನಿ ಮಾತಾಜಿ ಅವರು, ದೀಪ ಬೆಳಗಿಸಿ ಉದ್ಘಾಟಿಸಿದರು.
ಮಂಗಳೂರು ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಕನಕದಾಸ ಅಧ್ಯಯನ ಪೀಠದ ಸಂಯೋಜಕರಾಗಿರುವ ಡಾ.ಧನಂಜಯ ಕುಂಬ್ಳೆ ಆಶಯ ನುಡಿಗಳನ್ನು ಆಡಿದರು. 'ಹಿರಿಯರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ, ನಮ್ಮ ಜೀವನವು ಪಾವನವಾಗುತ್ತದೆ. ಭಕ್ತಿಯಿಂದ ದೇವರನ್ನು ಬೇಡಿದಾಗ ನಮ್ಮ ಅಹಂಕಾರವನ್ನು ಕರಗಿಸಿಕೊಳ್ಳಬಹುದು. ಒಟ್ಟಾಗಿ ಸಮಾನತೆಯಿಂದ ಬಾಳಬೇಕೆಂದು ಕನಕದಾಸರ ಆಶಯ' ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಪಟ್ಟೆ ವಿದ್ಯಾ ಸಂಸ್ಥೆಗಳ ನಿರ್ದೇಶಕ, ನಿವೃತ್ತ ಪ್ರಾಂಶುಪಾಲ & ಕಲಾವಿದರು ಆದ ಗಣರಾಜ ಕುಂಬ್ಳೆ ಅವರು ಗಮಕ ವ್ಯಾಖ್ಯಾನವನ್ನು ಮಾಡಿದರು. ಗಮಕ ವಾಚಕರಾಗಿ ಮೂಡುಬಿದಿರೆ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ರಾಮ ಪ್ರಸಾದ್ ಕಾಂಚೋಡು ಭಾಗವಹಿಸಿದ್ದರು.
ಪಟ್ಟೆ ವಿದ್ಯಾಸಂಸ್ಥೆಗಳ ನಿರ್ದೇಶಕ ಜಿ.ಪರಮೇಶ್ವರ್ ಭಟ್, ಸಂಸ್ಥೆಗಳ ಸಂಚಾಲಕ ವಿಘ್ನೇಶ್ ಹಿರಣ್ಯ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸುಮನಾ ಮಾತಾಜಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ರಾಜಗೋಪಾಲ್ ಎನ್ ಉಪಸ್ಥಿತರಿದ್ದರು.

ರಾಜಗೋಪಾಲ್ ಎನ್ ಸ್ವಾಗತಿಸಿದರು. ಪ್ರೌಢಶಾಲಾ ಶಿಕ್ಷಕ ವಿಶ್ವನಾಥ ಬೊಳ್ಳಾಡಿ ವಂದಿಸಿದರು. ಜ್ಯೋತಿ ಕುಮಾರಿ ಕಾರ್ಯಕ್ರಮವನ್ನು ನಿರೂಪಿಸಿದರು.
ಈ ಕಾರ್ಯಕ್ರಮದಲ್ಲಿ ಕನಕದಾಸ ಅಧ್ಯಯನ ಪೀಠ ಮಂಗಳೂರು ವಿವಿ ಸಿಬ್ಬಂದಿಗಳಾದ ಕಿರಣ್, ಸರಿತಾ ವಿದ್ಯಾರ್ಥಿಗಳಾದ ಸ್ನೇಹ, ನೇತ್ರಾವತಿ, ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.