ಅನಘ - ದಶಮಾನ ಸಂಭ್ರಮ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

Anagha: ಅನಘ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆಯ ಅಂಗವಾಗಿ, ಸಂಸ್ಥೆಯ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು.

Sep 23, 2026 - 16:15
ಅನಘ - ದಶಮಾನ ಸಂಭ್ರಮ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಬೆಂಗಳೂರು: ಅನಘ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆಯ ಅಂಗವಾಗಿ, ಸಂಸ್ಥೆಯ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿ, ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಾದ ಶ್ರಾವ್ಯ ಎಸ್, ಸುಧೇಕ್ಷ ಎಂ, ಸೌಮ್ಯ ಎಸ್ ಮಿಲಾಯ್ ಮತ್ತು ಚಿನ್ಮಯಿ ಕಿರಣ್ ಅವರನ್ನು ಪುರಸ್ಕರಿಸಲಾಯಿತು.

ಪಿಯುಸಿ  ವಿದ್ಯಾರ್ಥಿಗಳಾದ ವರ್ಷಿಣಿ ಗೌಡ ಹೆಚ್, ಪ್ರೀತಂ ಎಸ್, ಲಿಖಿತ ಬಿ, ಜಯಶ್ರೀ ಎಸ್, ಆಕಾಶ್ ಸಿ, ಹಿಮಾಂಶು ಕೆಂದೋಲೆ ಹಾಗೂ ಯಶಸ್ವಿನಿ ಅವರನ್ನು ಗೌರವಿಸಲಾಯಿತು.

ಈ ವೇಳೆ ಸಂಸ್ಥೆಯ ಅಧ್ಯಕ್ಷ ಅಡಿಕೆ ವೆಂಕಟೇಶುಲು ಮಾತನಾಡಿದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಸಂಸ್ಥೆ ಕಳೆದ 10 ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಇದರಿಂದ ಸಾರ್ಥಕತೆಯನ್ನು ಕಾಣಲಾಗಿದೆ ಎಂದು ಹೇಳಿದರು.

ಸಂಸ್ಥೆಯ ಬೆನ್ನೆಲುಬಾಗಿರುವ ಸದಸ್ಯರು ಮತ್ತು ಷೇರುದಾರರ ಮಕ್ಕಳ ಸಾಧನೆಯನ್ನು ಗುರುತಿಸುವುದರೊಂದಿಗೆ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಮೂಲಕ ಇತರೆ ಸಂಸ್ಥೆಗಳಿಗೂ ಮಾದರಿಯಾಗುವ ಉದ್ದೇಶವನ್ನು ಹೊಂದಲಾಗಿದೆ ಎಂದರು. 

ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಶ್ರೀನಾಥ್ ಬಾಬು ಹೆಚ್.ಆರ್, ನಿರ್ದೇಶಕರಾದ ಸಂಜಯ್ ಜೋಷಿ, ಮಹೇಶ್ ಎಸ್.ಎನ್, ಡಾ.ಪ್ರಫುಲ್ಲಾ ತುಮಾಟಿ, ಪಿ.ಬಿ.ಕಾರ್ಯಪ್ಪ, ವಿಮಲ್ ಮಾಲು, ಐ.ಜಿ.ಪಾಟೀಲ್, ಲತಾ ವಿ ಅಡಿಕೆ, ರಜನಿ ಎಸ್ ಜೋಷಿ, ರಾಧಿಕಾ ಶ್ರೀನಾಥ್ ಮತ್ತು ಸ್ಮಿತಾ ಜಿ ಗಾಯಕ್ವಾಡ್ ಉಪಸ್ಥಿತರಿದ್ದರು.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.