ವಿಟ್ಲ: ಭಗವತಿ ಕ್ಷೇತ್ರದಲ್ಲಿ ಭರತನಾಟ್ಯ ಪ್ರದರ್ಶನ

Vitla: ಭಗವತಿ ಕ್ಷೇತ್ರದಲ್ಲಿ ಸಿಂಹಮಾಸದ ವಿಶೇಷ ಪೂಜೆ ಅಂಗವಾಗಿ, ಪುತ್ತೂರಿನ ವೈಷ್ಣವಿ ನಾಟ್ಯಾಲಯದ ವತಿಯಿಂದ ಏರ್ಪಡಿಸಿದ್ದ ರಜತ ನೃತ್ಯಾಂತರ್ಯಾನ ಸರಣಿಯ ಭಾಗವಾಗಿ 'ನೃತ್ಯಾರ್ಪಣಂ' ಭರತನಾಟ್ಯ ಪ್ರದರ್ಶನ ನಡೆಯಿತು.

Sep 20, 2026 - 16:36
Sep 20, 2026 - 16:38
ವಿಟ್ಲ: ಭಗವತಿ ಕ್ಷೇತ್ರದಲ್ಲಿ ಭರತನಾಟ್ಯ ಪ್ರದರ್ಶನ

ವಿಟ್ಲ: ಭಗವತಿ ಕ್ಷೇತ್ರದಲ್ಲಿ ಸಿಂಹಮಾಸದ ವಿಶೇಷ ಪೂಜೆ ಅಂಗವಾಗಿ, ಪುತ್ತೂರಿನ ವೈಷ್ಣವಿ ನಾಟ್ಯಾಲಯದ ವತಿಯಿಂದ ಏರ್ಪಡಿಸಿದ್ದ ರಜತ ನೃತ್ಯಾಂತರ್ಯಾನ ಸರಣಿಯ ಭಾಗವಾಗಿ 'ನೃತ್ಯಾರ್ಪಣಂ' ಭರತನಾಟ್ಯ ಪ್ರದರ್ಶನ ನಡೆಯಿತು. ಶಾಸ್ತ್ರೀಯ ನೃತ್ಯದ ಲಯ, ಭಾವ ಮತ್ತು ಅಭಿನಯದ ಸೊಬಗನ್ನು ಒಗ್ಗೂಡಿಸಿದ ಈ ಸಮಾರಂಭವು ಕಲಾಭಿಮಾನಿಗಳಿಗೆ ವಿಶೇಷ ರಸದೌತಣ ನೀಡಿತು.

ರಜತ ನೃತ್ಯಾತರ್ಯಾನದ ಗೌರವಾಧ್ಯಕ್ಷ, ಕೇಶವ ಪ್ರಸಾದ್ ಮುಳಿಯ, ಕಾರ್ಯಕ್ರಮವನ್ನು ಉದ್ಘಾಟಿಸಿದರು. ಭಗವತಿ ದೇವಸ್ಥಾನದ ವ್ಯವಸ್ಥಾಪಕ ಕೇಶವ ಆರ್.ವಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ & ಸಂಗೀತ ಗುರು ಸುಭಾಷ್ ಚಂದ್ರ ನಾಯಕ್ ಮತ್ತು ಸಂಗೀತ ವಿದುಷಿ ಪಾರ್ವತಿ ಗಣೇಶ್ ಭಟ್ ಹೊಸಮೂಲೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ವೈಷ್ಣವಿ ನಾಟ್ಯಾಲಯದ ನಿರ್ದೇಶಕಿ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ನಾಟ್ಯಾಲಯದ ಬೆಳವಣಿಗೆಯ ಪಯಣ, ಕಳೆದ 25 ವರ್ಷಗಳ ಕಲಾ ಸೇವೆ ಮತ್ತು ರಜತ ಸಂಭ್ರಮದ ಆಶಯಗಳನ್ನು ವಿವರಿಸಿದರು.

ಈ ವೇಳೆ ಭಗವತಿ ದೇಗುಲದ ವ್ಯವಸ್ಥಾಪಕ ಕೇಶವ ಆರ್.ವಿ, ಸಂಗೀತ ವಿದುಷಿ ಪಾರ್ವತಿ ಗಣೇಶ್ ಭಟ್ ಮತ್ತು ಲಲಿತಾ ಅವರನ್ನು ವೈಷ್ಣವಿ ನಾಟ್ಯಾಲಯದದಿಂದ ಗೌರವಿಸಿ, ಸನ್ಮಾನಿಸಲಾಯಿತು.

ಭರತನಾಟ್ಯದ ವೈಭವ:

ಸಭಾ ಕಾರ್ಯಕ್ರಮದ ಬಳಿಕ ನಡೆದ 'ನೃತ್ಯಾರ್ಪಣಂ' ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವೈಷ್ಣವಿ ನಾಟ್ಯಾಲಯದ ವಿಟ್ಲ ಶಾಖೆಯ ವಿದ್ಯಾರ್ಥಿಗಳು ಭರತನಾಟ್ಯದ ವಿವಿಧ ಪ್ರಸ್ತುತಿಗಳನ್ನು ಲಯಬದ್ಧ ಮತ್ತು ಭಾವಪೂರ್ಣವಾಗಿ ಪ್ರದರ್ಶಿಸಿದರು. ನೃತ್ಯದ ಅಂಗಿಕಾಭಿನಯ, ಹಸ್ತಮುದ್ರೆಗಳು, ಮುಖಭಾವ, ತಾಳ ಹಾಗೂ ಸಂಗೀತದ ಸಮನ್ವಯದ ಮೂಲಕ ವಿದ್ಯಾರ್ಥಿಗಳು ತಮ್ಮ ಕಲಾ ಪ್ರತಿಭೆಯನ್ನು ಅನಾವರಣಗೊಳಿಸಿದರು.

ಪ್ರತಿಯೊಂದು ಪ್ರಸ್ತುತಿಯಲ್ಲೂ ವಿದ್ಯಾರ್ಥಿಗಳ ಶಿಸ್ತುಬದ್ಧ ಅಭ್ಯಾಸ ಮತ್ತು ಗುರುಗಳ ಮಾರ್ಗದರ್ಶನ ಸ್ಪಷ್ಟವಾಗಿ ಗೋಚರಿಸಿತು. ಶಾಸ್ತ್ರೀಯ ನೃತ್ಯದ ಸೌಂದರ್ಯವನ್ನು ಆಸ್ವಾದಿಸಿದ ಪ್ರೇಕ್ಷಕರು ವಿದ್ಯಾರ್ಥಿಗಳ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಅನುಭವಿ ಕಲಾವಿದರ ಸಂಗೀತ ಸಹಕಾರ: 

ನೃತ್ಯ ಪ್ರದರ್ಶನಕ್ಕೆ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ನಟುವಾಂಗ, ವಿದ್ವಾನ್ ವಿಷ್ಣು ಭಟ್ ವೆಳಿಕ್ಕೋತ್ ಮತ್ತು ವಸಂತ ಕುಮಾರ ಗೋಸಾಡ ಗಾಯನದಲ್ಲಿ ಸಹಕರಿಸಿದರು. ರಾಜೀವ ಗೋಪಾಲ ವೆಳ್ಳಿಕ್ಕೋತ್, ಮೃದಂಗ, ರಾಜಗೋಪಾಲ ಕಾಞಂಗಾಡ್ ಕೊಳಲು ಹಾಗೂ ಶಶಾಂಕ ಬಿ.ಸಿ.ರೋಡ್ ರಿದಂನಲ್ಲಿ ಸಹಕರಿಸಿದರು. ಇದು ನೃತ್ಯ ಪ್ರದರ್ಶನಕ್ಕೆ ಮತ್ತಷ್ಟು ಮೆರುಗು ತಂದಿತು.

ತುಳಸಿ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಚಂಪಾ ವಿಟ್ಲ ವಂದಿಸಿದರು.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

ಸಂಜಯ್ ಅಂಬೇಕರ್ ಟಿಜಿ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.