ಅಕ್ಷಯ ಕಾಲೇಜು: ಚಾರ್ಟೆಡ್ ಅಕೌಂಟೆಂಟ್ ಕುರಿತು ಕಾರ್ಯಾಗಾರ

Akshaya College: ಅಕ್ಷಯ ಕಾಲೇಜಿನಲ್ಲಿ ಈಚೆಗೆ ವಿದ್ಯಾರ್ಥಿಗಳಿಗಾಗಿ 'ಸಿಎ ಜರ್ನಿ ಫ್ರಮ್ ಅಸ್ಪಿರಂಟ್ ಟು ಅಚೀವರ್ಸ್' ಎಂಬ ವಿಷಯದ ಕುರಿತು ವಿಶೇಷ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.

Sep 24, 2026 - 16:30
ಅಕ್ಷಯ ಕಾಲೇಜು: ಚಾರ್ಟೆಡ್ ಅಕೌಂಟೆಂಟ್ ಕುರಿತು ಕಾರ್ಯಾಗಾರ

ಪುತ್ತೂರು: ಇಲ್ಲಿನ ಅಕ್ಷಯ ಕಾಲೇಜಿನ ಇನ್ವಿಕ್ತಾ ಕಾಮರ್ಸ್ ಅಸೋಸಿಯೇಷನ್ & ಐಕ್ಯೂಎಸಿ ವತಿಯಿಂದ, ಈಚೆಗೆ ವಿದ್ಯಾರ್ಥಿಗಳಿಗಾಗಿ 'ಸಿಎ ಜರ್ನಿ ಫ್ರಮ್ ಅಸ್ಪಿರಂಟ್ ಟು ಅಚೀವರ್ಸ್' ಎಂಬ ವಿಷಯದ ಕುರಿತು ವಿಶೇಷ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.

ಸಂಪನ್ಮೂಲ ವ್ಯಕ್ತಿಯಾಗಿ ಸಂತ ಫಿಲೋಮಿನಾ ಪಿಯು ಕಾಲೇಜಿನ ವಾಣಿಜ್ಯ ವಿಭಾಗ ಉಪನ್ಯಾಸಕ ರಾಹುಲ್ ಅವರು ಭಾಗವಹಿಸಿದ್ದರು. ತಮ್ಮ ಉಪನ್ಯಾಸದಲ್ಲಿ ಸಿಎ ಕೋರ್ಸ್‌ಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. 

ಈ ಕೋರ್ಸ್ ವಿದ್ಯಾರ್ಥಿಗಳ ಜ್ಞಾನ, ಕೌಶಲ್ಯ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವುದರೊಂದಿಗೆ, ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯಲು ಸಹಕಾರಿಯಾಗಿದೆ ಎಂದು ಹೇಳಿದರು. 

ಅಕ್ಷಯ ಕಾಲೇಜಿನ ಪ್ರಾಂಶುಪಾಲ ಸಂಪತ್ ಕೆ ಪಕ್ಕಳ, ಆಡಳಿತಾಧಿಕಾರಿ ಡಾ.ಅರ್ಪಿತ್ ಟಿ. ಎ, ಐಕ್ಯೂಎಸಿ ಸಂಯೋಜಕಿ ರಶ್ಮಿ ಕೆ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪಾವನಾ, ಅಸೋಸಿಯೇಷನ್ ಸಂಯೋಜಕಿ ಯಕ್ಷಿತಾ, ಇನ್ವಿಕ್ತಾ ಕಾಮರ್ಸ್ ಅಸೋಸಿಯೇಷನ್ ಹವಿಷ್ ಶೆಟ್ಟಿ ಹಾಜರಿದ್ದರು.

ಪ್ರಥಮ ಬಿಕಾಂ ವಿದ್ಯಾರ್ಥಿನಿ ಶ್ರೇಯಶ್ರೀ ಸ್ವಾಗತಿಸಿದರು. ಎಂ.ಎಸ್.ಹರಿಪ್ರಿಯಾ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ನಂತರ ಸಂಪನ್ಮೂಲ ವ್ಯಕ್ತಿಯನ್ನು ಶಾಲು ಹೊದಿಸಿ, ಗೌರವಿಸಲಾಯಿತು. ಜಿನ್ಸಿ ನಿರೂಪಿಸಿದರು. ಸಹನಾ ವಂದಿಸಿದರು.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.