ಕೆಯ್ಯೂರಿನಲ್ಲಿ ಸೆ.27ಕ್ಕೆ ಮೊಸರು ಕುಡಿಕೆ ಉತ್ಸವ
Keyyur: ಸೆ.27 ರಂದು ಶ್ರೀದೇವಿ ಮೈದಾನದಲ್ಲಿ ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನಾಚರಣೆ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವವನ್ನು ಆಯೋಜಿಸಲಾಗಿದೆ.
ಕೆಯ್ಯೂರು: ವಿಶ್ವ ಹಿಂದೂ ಪರಿಷತ್ - ಬಜರಂಗದಳ ಪುತ್ತೂರು ಗ್ರಾಮಾಂತರ ಪ್ರಖಂಡದ ದುರ್ಗಾ ಶಾಖೆ ಕೆಯ್ಯೂರು ವತಿಯಿಂದ, ಸೆ.27 ರಂದು ಶ್ರೀದೇವಿ ಮೈದಾನದಲ್ಲಿ ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನಾಚರಣೆ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವವನ್ನು ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮವು ಪ್ರಾರಂಭವಾಗಲಿದೆ. ಶಾಲಾ ಮಕ್ಕಳಿಗಾಗಿ ಗೋಣಿಚೀಲ ಓಟ, ಒಂಟಿಕಾಲು ಓಟ, ಲಿಂಬೆ-ಚಮಚ ಓಟ ಮತ್ತು ಸಂಗೀತ ಕುರ್ಚಿ ಸೇರಿದಂತೆ ವಿವಿಧ ಸ್ಪರ್ಧೆಗಳು ಜರುಗಲಿವೆ.
ಮಹಿಳೆಯರಿಗಾಗಿ ಹಗ್ಗ-ಜಗ್ಗಾಟ, ಡರ್ಚ್ ಬಾಲ್, ಲಿಂಬೆ-ಚಮಚ ಓಟ, ಸಂಗೀತ ಕುರ್ಚಿ ಹಾಗೂ ಮೊಸರು ಕುಡಿಕೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಪುರುಷರಿಗಾಗಿ ಕಬಡ್ಡಿ, ಹಗ್ಗ-ಜಗ್ಗಾಟ, ಬಾಟಲಿಗೆ ನೀರು ತುಂಬಿಸುವುದು, ವಾಲಿಬಾಲ್, ಮೊಸರು ಕುಡಿಕೆ ಮತ್ತು ಗುಂಡು ಎಸೆತ ಸ್ಪರ್ಧೆಗಳು ನಡೆಯಲಿವೆ.
ಬೆಳಗ್ಗೆ 9.30 ರೊಳಗೆ ವಾಲಿಬಾಲ್ & ಕಬಡ್ಡಿ ಪಂದ್ಯಗಳು ಹಾಗೂ 11.30 ರೊಳಗೆ ಇತರೆ ಸ್ಪರ್ಧೆಗಳಿಗೆ ನೋಂದಣಿ ಮಾಡಿಕೊಳ್ಳುವಂತೆ ಸಂಘಟಕರು ತಿಳಿಸಿದ್ದಾರೆ.
ಉಜಿರೆಯ ಮಂದಾರ ಕಲಾವಿದರಿಂದ ರಾತ್ರಿ 7 ಗಂಟೆಗೆ ಸೂಪರ್ ಹಿಟ್ ತುಳು ಭಕ್ತಿ ಪ್ರಧಾನ ಹಾಸ್ಯ ನಾಟಕ 'ಮಾಯೊದ ತುಡರ್' ಪ್ರದರ್ಶನಗೊಳ್ಳಲಿದೆ.
ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಬಾಂಧವರು ಮತ್ತು ಕಲಾಭಿಮಾನಿಗಳು ಭಾಗವಹಿಸುವಂತೆ ಸಂಘಟಕರು ಕೋರಿದ್ದಾರೆ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.