Priyanka Upendra: ಹೊಸ ಅವತಾರದಲ್ಲಿ ಪ್ರಿಯಾಂಕಾ ಉಪೇಂದ್ರ.. ಆಗಸ್ಟ್‌ನಲ್ಲಿ 'ಡಿಟೆಕ್ಟಿವ್ ತೀಕ್ಷ್ಣ' ಬಿಡುಗಡೆ

Priyanka Upendra: ಖ್ಯಾತ ನಟಿ ಪ್ರಿಯಾಂಕಾ ಉಪೇಂದ್ರ ನಟನೆಯ 50ನೇ ಸಿನಿಮಾ 'ಡಿಟೆಕ್ಟಿವ್ ತೀಕ್ಷ್ಣ' ಬಿಡುಗಡೆಯಾಗಲು ಸಿದ್ದಗೊಂಡಿದೆ.

Jul 26, 2026 - 19:20
Jul 27, 2026 - 06:54
Priyanka Upendra: ಹೊಸ ಅವತಾರದಲ್ಲಿ ಪ್ರಿಯಾಂಕಾ ಉಪೇಂದ್ರ.. ಆಗಸ್ಟ್‌ನಲ್ಲಿ 'ಡಿಟೆಕ್ಟಿವ್ ತೀಕ್ಷ್ಣ' ಬಿಡುಗಡೆ

ಖ್ಯಾತ ನಟಿ ಪ್ರಿಯಾಂಕಾ ಉಪೇಂದ್ರ (Priyanka Upendra), ಅಭಿನಯದ 50ನೇ ಸಿನಿಮಾ ಡಿಟೆಕ್ಟಿವ್ ತೀಕ್ಷ್ಣ (Detective Teekshana) ಬಿಡುಗಡೆಯಾಗಲು ಸಿದ್ದಗೊಂಡಿದೆ. ಇದೇ ಆಗಸ್ಟ್‌ 7 ರಂದು ರಿಲೀಸ್ ಆಗಲಿದೆ. 

ಇದೊಂದು  ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಪ್ರಿಯಾಂಕಾ ಉಪೇಂದ್ರ ಚಾಣಾಕ್ಷ ಡಿಟೆಕ್ಟಿವ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ನಿಗೂಢ ಪ್ರಕರಣ ಭೇದಿಸುವ ಸುತ್ತ ಕಥೆಯನ್ನು ಹೆಣೆಯಾಲಾಗಿದೆ. ತ್ರಿವಿಕ್ರಮ ರಘು ಆಕ್ಷನ್ ಕಟ್ ಹೇಳಿದ್ದಾರೆ. ಕನ್ನಡ, ತೆಲುಗು, ಮಲಯಾಳಂ ಹಾಗೂ ತಮಿಳು ಭಾಷೆಗಳಲ್ಲಿ ಏಕಕಾಲದಲ್ಲಿ ರಿಲೀಸ್ ಆಗುವುದು ಬಹುತೇಕ ಖಚಿತವಾಗಿದೆ.

ಈ ಸಿನಿಮಾವನ್ನು ಈವೆಂಟ್ ಲಿಂಕ್ಸ್ ಎಂಟರ್‌ಟೇನ್ಮೆಂಟ್‌ ಬ್ಯಾನರ್‌ನಡಿ ನಿರ್ಮಿಸಲಾಗಿದೆ. ಮುನಿಪ್ರಸನ್ನ, ಜಿ.ಮುನಿ ವೆಂಕಟ್ ಚರಣ್ ಹಾಗೂ ಪುರುಷೋತ್ತಮ್ ಬಿ.ಕೊಯ್ಯೂರು ಜಂಟಿಯಾಗಿ ಬಂಡವಾಳ ಹೂಡಿದ್ದಾರೆ. 

ಮನು ದಾಸಪ್ಪ ಕ್ಯಾಮೆರಾ ವರ್ಕ್ ಮಾಡಿದ್ದು, ಪೆದ್ದಪಲ್ಲಿ ರೋಹಿತ್ ಸಂಗೀತ ಸಂಯೋಜಿಸಿದ್ದಾರೆ. ರುದ್ರ ಕೌಶಿಕ್ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.  

ವಿಜಯ್ ಸೂರ್ಯ, ಅವಿನಾಶ್, ಮಂಜುನಾಥ್ ಹೆಗಡೆ, ಕೆ.ಎಸ್.ಶ್ರೀಧರ್, ಅರುಣಾ ಬಾಲರಾಜ್, ಮುನಿ ವೆಂಕಟ್ ಚರಣ್, ಬರಗಿ ವಿಕ್ರಮ್ ರೆಡ್ಡಿ, ವೆನ್ಸಿಟಾ ಡಯಾಸ್ ಹಾಗೂ ರೋಬೋ ಗಣೇಶನ್ ಮುಖ್ಯಭೂಮಿಕೆಯಲ್ಲಿದ್ದಾರೆ.