ಪುತ್ತೂರು: ಫಿಲೋ ಕೆಸರ್ದ ಗೊಬ್ಬು ಕಾರ್ಯಕ್ರಮ ಆಯೋಜನೆ

Puttur St Philomena College: ವಿದ್ಯಾರ್ಥಿಗಳಲ್ಲಿ ಕೃಷಿ ಪರಂಪರೆ & ಮಣ್ಣಿನೊಂದಿಗೆ ನಂಟು ಬೆಳೆಸುವ ಸಲುವಾಗಿ ಅಳಕೆಮಜಲಿನಲ್ಲಿ ಈಚೆಗೆ 'ಫಿಲೋ ಕೆಸರ್ದ ಗೊಬ್ಬು' ಆಯೋಜಿಸಲಾಗಿತ್ತು.

Aug 13, 2026 - 14:17
Aug 13, 2026 - 14:18
ಪುತ್ತೂರು: ಫಿಲೋ ಕೆಸರ್ದ ಗೊಬ್ಬು ಕಾರ್ಯಕ್ರಮ ಆಯೋಜನೆ

ಪುತ್ತೂರು: ವಿದ್ಯಾರ್ಥಿಗಳಲ್ಲಿ ಕೃಷಿ ಪರಂಪರೆ & ಮಣ್ಣಿನೊಂದಿಗೆ ನಂಟು ಬೆಳೆಸುವ ಸಲುವಾಗಿ ಅಳಕೆಮಜಲಿನಲ್ಲಿ ಈಚೆಗೆ 'ಫಿಲೋ ಕೆಸರ್ದ ಗೊಬ್ಬು' ಆಯೋಜಿಸಲಾಗಿತ್ತು.

ಸಂತ ಫಿಲೋಮಿನಾ ಕಾಲೇಜು ಮಾನವಿಕ ವಿಭಾಗದ ವತಿಯಿಂದ ಈ ವಿಶಿಷ್ಟ ಕಾರ್ಯಕ್ರಮವನ್ನು ನಡೆಸಲಾಯಿತು.

ಕಾಲೇಜಿನ ಪ್ರಾಂಶುಪಾಲ ವಂ.ಡಾ.ಆಂಟನಿ ಪ್ರಕಾಶ್ ಮೊಂತೆರೊ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಕೃಷಿಯನ್ನು ಉಳಿಸಿ-ಬೆಳೆಸುವ ಅಗತ್ಯ, ಮಣ್ಣಿನೊಂದಿಗೆ ಮಾನವನಿಗಿರುವ ಅವಿನಾಭಾವ ಸಂಬಂಧ ಮತ್ತು ಸಮುದಾಯದ ಬಾಂಧವ್ಯವನ್ನು ಗಟ್ಟಿಗೊಳಿಸುವಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ತರವಾದ ಪಾತ್ರ ವಹಿಸುತ್ತವೆ ಎಂದು ವಿವರಿಸಿದರು. 

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರಗತಿಪರ ಕೃಷಿಕ ಚಿದಾನಂದ ಗೌಡ ಮಾತನಾಡಿದರು. ವಿದ್ಯಾರ್ಥಿಗಳಿಗೆ ಕೃಷಿ ಜೀವನದ ಅನುಭವವನ್ನು ನೇರವಾಗಿ ಪರಿಚಯಿಸವಲ್ಲಿ ಈ 'ಕೆಸರ್ದ ಗೊಬ್ಬು' ತುಂಬಾ ಅಗತ್ಯವಾಗಿದೆ ಎಂದರು. 

ಮಾನವಿಕ ವಿಭಾಗದ ಡೀನ್ ಹಾಗೂ ಶೈಕ್ಷಣಿಕ ರಿಜಿಸ್ಟ್ರಾರ್ ಡಾ.ನಾರ್ಬರ್ಟ್ ಮಸ್ಕರೇನಸ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಾನವಿಕ ವಿಭಾಗದ ಬೋಧಕ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮವು ವೈಷ್ಣವಿ ಮತ್ತು ತಂಡದ ಪ್ರಾರ್ಥನೆಯೊಂದಿಗೆ ಶುರುವಾಯಿತು. ದ್ವಿತೀಯ ಬಿಎ. ವಿದ್ಯಾರ್ಥಿ ಸಮರ್ಥ್ ಸ್ವಾಗತಿಸಿದರು. ತೃತೀಯ ಬಿಎ ವಿದ್ಯಾರ್ಥಿನಿ ಕೃತಿಕಾ ನಿರೂಪಿಸಿದರು. ದ್ವಿತೀಯ ಬಿಎ ವಿದ್ಯಾರ್ಥಿನಿ ಕೃತಿ ವಂದನಾರ್ಪಣೆ ಮಾಡಿದರು.

ವಿದ್ಯಾರ್ಥಿಗಳು ಕೆಸರಿನಲ್ಲಿ ಇಳಿದು ಕೃಷಿ ಚಟುವಟಿಕೆಗಳ ಅನುಭವವನ್ನು ಪಡೆದುಕೊಂಡರು.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.