Puttur: ಸಂತ ಫೀಲೋಮಿನಾ ಕಾಲೇಜಿನಲ್ಲಿ 'ಯಕ್ಷಾಮೃತ' ಉದ್ಘಾಟನೆ

Puttur: ಇಲ್ಲಿನ ಸಂತ ಫೀಲೋಮಿನಾ ಕಾಲೇಜಿನ ಪಿಜಿ ಸಭಾಂಗಣದಲ್ಲಿ 'ಯಕ್ಷಾಮೃತ' 40 ಗಂಟೆಗಳ ಧೃಡಪತ್ರ ಶಿಕ್ಷಣ ಶಿಬಿರವನ್ನು ಉದ್ಘಾಟಿಸಲಾಯಿತು.

Jul 25, 2026 - 16:05
Puttur: ಸಂತ ಫೀಲೋಮಿನಾ ಕಾಲೇಜಿನಲ್ಲಿ 'ಯಕ್ಷಾಮೃತ' ಉದ್ಘಾಟನೆ

ಪುತ್ತೂರು: ಇಲ್ಲಿನ ಸಂತ ಫೀಲೋಮಿನಾ ಕಾಲೇಜಿನ ಪಿಜಿ ಸಭಾಂಗಣದಲ್ಲಿ 'ಯಕ್ಷಾಮೃತ' 40 ಗಂಟೆಗಳ ಧೃಡಪತ್ರ ಶಿಕ್ಷಣ ಶಿಬಿರವನ್ನು ಉದ್ಘಾಟಿಸಲಾಯಿತು. ಯಕ್ಷ ಕಲಾಕೇಂದ್ರ ಹಾಗೂ ದೇಶಭಕ್ತ ಎನ್.ಎಸ್ ಕಿಲ್ಲೆ ಪ್ರತಿಷ್ಠಾನ ಸಹಯೋಗದಲ್ಲಿ ಈ ತರಬೇತಿ ಶಿಬಿರ ಆಯೋಜಿಸಲಾಗಿದೆ. 

'ಯಕ್ಷಾಮೃತ ಧೃಡಪತ್ರ ಶಿಕ್ಷಣ' ಶಿಬಿರದಲ್ಲಿ ವಿದ್ಯಾರ್ಥಿಗಳನ್ನು ಯಕ್ಷಗಾನ ಕಲೆಯಲ್ಲಿ ವೃತ್ತಿಪರ ಪ್ರದರ್ಶನ ನೀಡುವ ಮಟ್ಟದಲ್ಲಿ ಹಣಿಗೊಳಿಸಲಾಗುತ್ತದೆ. ಲಿಖಿತ ಹಾಗೂ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಿ, ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಿ, ಪ್ರದರ್ಶನಕ್ಕೆ ಸಿದ್ಧಗೊಳಿಸಲಾಗುತ್ತದೆ.

ಈ ಶಿಬಿರಕ್ಕೆ ಯಕ್ಷಧ್ರುವ ಯಕ್ಷ ಶಿಕ್ಷಣದ  ಪ್ರಧಾನ ಸಂಚಾಲಕ ವಾಸುದೇವ ಐತಾಳ್ ಪಣಂಬೂರು, ಚಾಲನೆ ನೀಡಿದರು. ಆ ಬಳಿಕ ಯಕ್ಷಗಾನ ಪ್ರದರ್ಶನ ಕಲೆಯ ಶೈಕ್ಷಣಿಕ ವಿಸ್ತರತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ರೇ. ಡಾ.ಆಂಟನಿ ಪ್ರಕಾಶ್ ಮೋಂತೇರೊ ಮಾತನಾಡಿ, ಪ್ರಸ್ತುತ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ ಹಾಗೂ ಕಲಾತ್ಮಕತೆ ಇಲ್ಲವಾಗಿದೆ. ಕಲೆಗಳ ಆಸ್ವಾದನೆಯ ಆಸಕ್ತಿಯು ಕಡಿಮೆಯಾಗಿದೆ. ಯಕ್ಷ ಕಲಾ ಕೇಂದ್ರವು ನಮ್ಮ ನೆಲದ ಕಲೆಗಳ ಪ್ರಸರಣ ಹಾಗೂ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದರು. 

ಯಕ್ಷ ಕಲಾ ಕೇಂದ್ರ ಸಂಯೋಜಕ ಪ್ರಶಾಂತ್ ರೈ ಸ್ವಾಗತಿಸಿದರು. ಯಕ್ಷಾಮೃತ ಸಂಯೋಜಕಿ ಸುರಕ್ಷಾ ರೈ ವಂದಿಸಿದರು. ಯಕ್ಷಕಲಾ ಕೇಂದ್ರ ವಿದ್ಯಾರ್ಥಿ ಸನ್ನಿಧಿ ರೈ ಪ್ರಾರ್ಥಿಸಿದರು. ಯಕ್ಷಾಮೃತ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.