IND vs ZIM: ಇಂದು ಭಾರತ Vs ಜಿಂಬಾಬ್ವೆ.. ಎರಡನೇ ಪಂದ್ಯ

IND vs ZIM: ಭಾರತವು ಜಿಂಬಾಬ್ವೆ ಪ್ರವಾಸದಲ್ಲಿದ್ದು, 3 ಪಂದ್ಯಗಳ ಟಿ20 ಸರಣಿಯನ್ನು ಆಡುತ್ತಿದೆ. ಹರಾರೆ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ಇಂದು (ಶನಿವಾರ) ಎರಡನೇ ಟಿ-20 ಪಂದ್ಯ ಆಯೋಜನೆಗೊಂಡಿದೆ.

Jul 25, 2026 - 09:52
IND vs ZIM: ಇಂದು ಭಾರತ Vs ಜಿಂಬಾಬ್ವೆ.. ಎರಡನೇ ಪಂದ್ಯ

ಭಾರತವು  ಜಿಂಬಾಬ್ವೆ ಪ್ರವಾಸದಲ್ಲಿದ್ದು, 3 ಪಂದ್ಯಗಳ ಟಿ20 ಸರಣಿಯನ್ನು ಆಡುತ್ತಿದೆ. ಹರಾರೆ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ಇಂದು (ಶನಿವಾರ) ಎರಡನೇ ಟಿ-20 ಪಂದ್ಯ ಆಯೋಜನೆಗೊಂಡಿದ್ದು, ಸಂಜೆ 4:30ಕ್ಕೆ ಶುರುವಾಗಲಿದೆ. 

ಈ ಪಂದ್ಯದ ಗೆಲುವಿನೊಂದಿಗೆ ಭಾರತವು ಸರಣಿ ಜಯಿಸುವ ವಿಶ್ವಾಸದಲ್ಲಿದೆ. ಗುರುವಾರ ನಡೆದ ಮೊದಲ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಬಳಗ ಗೆದ್ದು ಬೀಗಿದ್ದು, 1-0 ಮುನ್ನಡೆ ಕಾಯ್ದುಕೊಂಡಿದೆ. ಯುವ ಆಟಗಾರ ವೈಭವ್ ಸೂರ್ಯವಂಶಿ ಅಬ್ಬರಿಸುತ್ತಿದ್ದು, ಇದು ತಂಡಕ್ಕೆ ನೆರವಾಗಿದೆ. ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ಕೂಡ ಉತ್ತಮ ಫಾರ್ಮ್‌ನಲ್ಲಿದ್ದಾರೆ. 

ಎರಡನೇ ಪಂದ್ಯ.. ಸಂಭಾವ್ಯ ಪ್ಲೇಯಿಂಗ್ 11:

ಭಾರತ: ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಶ್ರೇಯಸ್ ಐಯ್ಯರ್ (ನಾಯಕ), ತಿಲಕ್ ವರ್ಮ, ರಿಂಕು ಸಿಂಗ್, ಶಿವಂ ದುಬೆ, ರವಿ ಬಿಷ್ಣೋಯಿ, ಪ್ರಿನ್ಸ್ ಯಾದವ್, ಅಶೋಕ್ ಶರ್ಮಾ ಮತ್ತು ಮಾಯಾಂಕ್ ಯಾದವ್.

ಜಿಂಬಾಬ್ವೆ: ಬ್ರಾಯನ್ ಬೆನೆಟ್, ಬೆನ್ ಕರನ್, ಡಿಯೋನ್ ಮೈಯರ್ಸ್, ಸಿಕಂದ‌ರ್ ರಜಾ (ನಾಯಕ), ರಯಾನ್ ಬರ್ಲ್, ವೆಸ್ಲಿ ಮಾಧೆವೆರೆ, ತಸಿವನಾಶೆ ಮರುಮಣಿ, ಬ್ರಾಡ್ ಇವಾನ್ಸ್, ನೆಲ್ಮನ್ ನ್ಯಾಮ್‌ಹುರಿ, ರಿಚಾರ್ಡ್ ಎನ್ಗವಾರ ಹಾಗೂ ಬ್ಲೆಸಿಂಗ್ ಮುಝರಾಬಾನಿ. 

ಮೊದಲ ಪಂದ್ಯದ ಫಲಿತಾಂಶ: ಮೊದಲು ಬ್ಯಾಟ್ ಮಾಡಿದ್ದ ಜಿಂಬಾಬ್ವೆ, ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 125 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಭಾರತ ಕೇವಲ 13.2 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 126 ರನ್ ಬಾರಿಸಿ, ಗೆಲವು ಸಾಧಿಸಿತ್ತು.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.