ವಿದ‍್ಯಾಭಾರತಿ ಸ್ಪರ್ಧೆ : ಅಂಬಿಕಾ ವಿದ‍್ಯಾಲಯದ ವಿದ‍್ಯಾರ್ಥಿಗಳಿಗೆ ಬಹುಮಾನ
ಪುತ್ತೂರಿನ ಅಂಬಿಕಾ ವಿದ್ಯಾಲಯದ ಸಿಬಿಎಸ್‌ಇ ವಿದ್ಯಾರ್ಥಿಗಳು ವಿದ‍್ಯಾಭಾರತಿ ಜಿಲ‍್ಲಾ ಮಟ್ಟದ ಅಥ‍್ಲೆಟಿಕ್ಸ್ ಸ್ಪರ್ಧೆಯಲ‍್ಲಿ ಹಲವು ಬಹುಮಾನಗಳನ್ನು ಗೆದ್ದುಕೊಂಡಿದೆ.
ಪುತ‍್ತೂರು : ಬಪ್ಪಳಿಗೆಯ ಅಂಬಿಕಾ ವಿದ‍್ಯಾಲಯ ಸಿಬಿಎಸ್‍ಇ(ambika vidyalaya) ಸಂಸ‍್ಥೆಯ ವಿದ‍್ಯಾರ್ಥಿಗಳು ಪುತ‍್ತೂರಿನ(putturu) ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ‍್ಲಿ ಶುಕ್ರವಾರ ನಡೆದ ವಿದ‍್ಯಾಭಾರತಿ ಜಿಲ‍್ಲಾಮಟ್ಟದ ಅಥ‍್ಲೆಟಿಕ್ಸ್ ಸ್ಪರ್ಧೆಯಲ‍್ಲಿ ಹಲವು ಬಹುಮಾನಗಳನ‍್ನು ತಮ್ಮದಾಗಿಸಿಕೊಂಡಿದ‍್ದಾರೆ.
ಕಿಶೋರ ವರ್ಗ ಬಾಲಕಿಯರ ವಿಭಾಗದಲ‍್ಲಿ ಹತ್ತನೇ ತರಗತಿಯ ಬಿ. ತ್ರಿಶಾ 40ಮೀ ಹರ್ಡಲ್ಸ್‌ನಲ್ಲಿ ಪ್ರಥಮ, 10ಮೀ ಹರ್ಡಲ್ಸ್‌ನಲ್ಲಿ ದ‍್ವಿತೀಯ ಹಾಗೂ 4x40 ಮೀ ರಿಲೇಯಲ‍್ಲಿ ಪ್ರಥಮ ಸ‍್ಥಾನವನ‍್ನು ಪಡೆದಿದ‍್ದಾರೆ. ಹತ್ತನೇ ತರಗತಿಯ ಆರುಷಿ ಎನ್. ಚಕ್ರ ಎಸೆತದಲ‍್ಲಿ ದ‍್ವಿತೀಯ, ಹತ್ತನೇ ತರಗತಿಯ ಶ್ರದ‍್ಧಾ ಕೆ. ಕಟ‍್ವಾಟ್ 4x40ಮೀ ರಿಲೇಯಲ‍್ಲಿ ಪ್ರಥಮ, ಹತ್ತನೇ ತರಗತಿಯ ಅದಿತಿ ಎನ್.ಶೆಟ‍್ಟಿ, 4x40 ರಿಲೇಯಲ‍್ಲಿ ಪ್ರಥಮ, ಒಂಬತ್ತನೇ ತರಗತಿಯ ನಿಹಾರಿಕ ಕೆ.ಎಸ್ 4x40 ರಿಲೇಯಲ‍್ಲಿ ಪ್ರಥಮ ಸ‍್ಥಾನವನ‍್ನು ಪಡೆದಿದ‍್ದಾರೆ.
ಬಾಲವರ್ಗ ಬಾಲಕರ ವಿಭಾಗದಲ‍್ಲಿ ಎಂಟನೇ ತರಗತಿಯ ದೀಪಾಂಶ್ ಶೆಟ‍್ಟಿ 60ಮೀ ಓಟದ ಸ್ಪರ್ಧೆಯಲ‍್ಲಿ ದ‍್ವಿತೀಯ, 40ಮೀ ಓಟದ ಸ್ಪರ್ಧೆಯಲ‍್ಲಿ ತೃತೀಯ, ಏಳನೇ ತರಗತಿಯ ಆರಾಧ್ಯ ಗಣೇಶ್ ಎತ್ತರ ಜಿಗಿತದಲ‍್ಲಿ ದ‍್ವಿತೀಯ ಹಾಗೂ ಗುಂಡು ಎಸೆತದಲ‍್ಲಿ ತೃತೀಯ ಸ‍್ಥಾನವನ‍್ನು ಪಡೆದಿದ‍್ದಾರೆ. ಬಾಲವರ್ಗ ಬಾಲಕಿಯರ ವಿಭಾಗದಲ‍್ಲಿ ಗ್ರಂಥನಾ ಎಂ. ಎತ್ತರ ಜಿಗಿತದಲ‍್ಲಿ ತೃತೀಯ ಸ‍್ಥಾನವನ‍್ನು ಪಡೆದಿದ‍್ದಾರೆ.