Indian School of Leadership: ಭವಿಷ್ಯದ ನಾಯಕರನ್ನು ರೂಪಿಸುವ ಐಎಸ್ಎಲ್ ಕ್ಯಾಂಪಸ್‌ಗೆ ಭೂಮಿಪೂಜೆ

Indian School of Leadership: ಇಂಡಿಯನ್ ಸ್ಕೂಲ್ ಆಫ್ ಲೀಡರ್‌ಶಿಪ್​ನ ಯಲಹಂಕ ಕ್ಯಾಂಪಸ್‌ಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಲಾಯಿತು.

Sep 20, 2026 - 19:43
Sep 20, 2026 - 19:43
Indian School of Leadership: ಭವಿಷ್ಯದ ನಾಯಕರನ್ನು ರೂಪಿಸುವ ಐಎಸ್ಎಲ್ ಕ್ಯಾಂಪಸ್‌ಗೆ ಭೂಮಿಪೂಜೆ

ಬೆಂಗಳೂರು: ನಾಯಕತ್ವ, ಮೌಲ್ಯಾಧಾರಿತ ಉದ್ಯಮಶೀಲತೆ, ತಂತ್ರಜ್ಞಾನ & ಮಾನವೀಯ ಮೌಲ್ಯಗಳನ್ನು ಒಳಗೊಂಡ ಸಮಗ್ರ ಶಿಕ್ಷಣದ ಮೂಲಕ ಭವಿಷ್ಯದ ನಾಯಕರನ್ನು ರೂಪಿಸುವ ಉದ್ದೇಶವಿರುವ ಇಂಡಿಯನ್ ಸ್ಕೂಲ್ ಆಫ್ ಲೀಡರ್‌ಶಿಪ್​ನ (Indian School of Leadership - ISL) ನೂತನ ಯಲಹಂಕ ಕ್ಯಾಂಪಸ್‌ಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಲಾಯಿತು.

ಸಂಸ್ಥೆಯ ದೃಷ್ಟಿಕೋನದಲ್ಲಿ ನಿಜವಾದ ಶಿಕ್ಷಣವೆಂದರೆ ಕೇವಲ ಅಂಕಗಳು ಹಾಗೂ ಪಠ್ಯಪುಸ್ತಕಗಳ ಜ್ಞಾನಕ್ಕೆ ಸೀಮಿತವಾಗದೆ, ವಿದ್ಯಾರ್ಥಿಗಳಲ್ಲಿ ಸಾಮರ್ಥ್ಯ, ಚಾರಿತ್ರ್ಯ ಮತ್ತು ಸೃಜನಶೀಲತೆ - ಈ ಮೂರು ಗುಣಗಳನ್ನು ಒಟ್ಟಾಗಿ ಬೆಳೆಸುವ ಶಿಕ್ಷಣವಾಗಬೇಕು ಎಂಬುದಾಗಿದೆ. ಈ ಉದ್ದೇಶದೊಂದಿಗೆ, ನಾಳಿನ ಸಮಾಜ ಮತ್ತು ದೇಶವನ್ನು ಮುನ್ನಡೆಸಬಲ್ಲ ನಾಯಕತ್ವ ಗುಣಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವತ್ತ ಸಂಸ್ಥೆ ಗಮನಹರಿಸಿದೆ.

ಭೂಮಿಪೂಜೆ ಸಮಾರಂಭದಲ್ಲಿ ಮಾತನಾಡಿದ ಸಂಸ್ಥೆಯ ಪ್ರತಿನಿಧಿಗಳು 'ಇಂದು ನಾವು ಕೇವಲ ಒಂದು ಕಟ್ಟಡದ ಭೂಮಿಪೂಜೆ ಅಷ್ಟೇ ಮಾಡುತ್ತಿಲ್ಲ. ಜೀವನವನ್ನು ರೂಪಿಸುವ, ಚಾರಿತ್ರ್ಯವನ್ನು ನಿರ್ಮಿಸುವ ಹಾಗೂ ನಾಳಿನ ಭಾರತಕ್ಕೆ ಬದಲಾವಣೆಯನ್ನು ತರುವ ಒಂದು ಸಂಸ್ಥೆಗೆ ಅಡಿಪಾಯ ಹಾಕುತ್ತಿದ್ದೇವೆ' ಎಂದು ಅಭಿಪ್ರಾಯಪಟ್ಟರು.

ಭಾರತೀಯ ಮೌಲ್ಯಗಳಿಂದ ಸ್ಫೂರ್ತಿ ಪಡೆದು, ಬದಲಾಗುತ್ತಿರುವ ಜಗತ್ತಿನ ಅಗತ್ಯಗಳಿಗೆ ತಕ್ಕಂತೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವುದು ಈ ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ. ಪ್ರಕೃತಿಯ ನಡುವೆ ಕಲಿಕೆ, ಕೃತಕ ಬುದ್ಧಿಮತ್ತೆ (AI), ರೊಬೋಟಿಕ್ಸ್, ಯೋಗ-ಧ್ಯಾನ, ನಾಯಕತ್ವ ತರಬೇತಿ ಹಾಗೂ ಮೌಲ್ಯಾಧಾರಿತ ಉದ್ಯಮಶೀಲತೆಗೆ ವಿಶೇಷ ಒತ್ತು ನೀಡಲಾಗುತ್ತಿದೆ.

ವಿಶ್ವನಾಥ್ ಮೂರ್ತಿ, ಲತಾ ಕೃಷ್ಣ ಮೋಹನ್, ರಾಘವ ಕಶ್ಯಪ, ಹರೀಶ್ ಹಾಗೂ ಶ್ರೀಧರ್ ಸುಬ್ರಮಣಿಯನ್ ಅವರ ಸಹಭಾಗಿತ್ವದಲ್ಲಿ ಈ ಸಂಸ್ಥೆಯು ರೂಪುಗೊಂಡಿದೆ. ಯಲಹಂಕದಲ್ಲಿ ನೂತನ ಕ್ಯಾಂಪಸ್ ನಿರ್ಮಾಣದ ಜೊತೆಗೆ, ಬನ್ನೇರುಘಟ್ಟ ಕ್ಯಾಂಪಸ್ ಕೂಡ ಮುಂದಿನ ಶೈಕ್ಷಣಿಕ ವರ್ಷಕ್ಕೆ ಸಿದ್ಧಗೊಳ್ಳುತ್ತಿದೆ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

ಸಂಜಯ್ ಅಂಬೇಕರ್ ಟಿಜಿ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.