ವಿದ‍್ಯಾಭಾರತಿ ಸ್ಪರ್ಧೆ: ಅಂಬಿಕಾ ವಿದ‍್ಯಾಲಯದ ವಿದ‍್ಯಾರ್ಥಿಗಳಿಗೆ ಬಹುಮಾನ

Ambika Vidyalaya: ಪುತ್ತೂರಿನ ಅಂಬಿಕಾ ವಿದ್ಯಾಲಯದ ಸಿಬಿಎಸ್‌ಇ ವಿದ್ಯಾರ್ಥಿಗಳು, ವಿದ‍್ಯಾಭಾರತಿ ಜಿಲ‍್ಲಾ ಮಟ್ಟದ ಅಥ‍್ಲೆಟಿಕ್ಸ್‌ ಸ್ಪರ್ಧೆಯಲ‍್ಲಿ ಹಲವು ಬಹುಮಾನಗಳನ್ನು ಗೆದ್ದುಕೊಂಡಿದೆ.

Jul 22, 2026 - 18:07
Jul 23, 2026 - 08:34
ವಿದ‍್ಯಾಭಾರತಿ ಸ್ಪರ್ಧೆ: ಅಂಬಿಕಾ ವಿದ‍್ಯಾಲಯದ ವಿದ‍್ಯಾರ್ಥಿಗಳಿಗೆ ಬಹುಮಾನ

ಪುತ‍್ತೂರು: ಬಪ್ಪಳಿಗೆಯ ಅಂಬಿಕಾ ವಿದ‍್ಯಾಲಯ (Ambika Vidyalaya) ಸಿಬಿಎಸ್‍ಇ ಸಂಸ‍್ಥೆಯ ವಿದ‍್ಯಾರ್ಥಿಗಳು, ವಿವೇಕಾನಂದ  ಪದವಿ ಪೂರ್ವ ಕಾಲೇಜಿನಲ‍್ಲಿ ಶುಕ್ರವಾರ ನಡೆದ ವಿದ‍್ಯಾಭಾರತಿ ಜಿಲ‍್ಲಾಮಟ್ಟದ ಅಥ‍್ಲೆಟಿಕ್ಸ್‌ ಸ್ಪರ್ಧೆಯಲ‍್ಲಿ ಹಲವು ಬಹುಮಾನಗಳನ‍್ನು ಜಯಿಸಿದ್ದಾರೆ.

ಕಿಶೋರ ವರ್ಗ: ಬಾಲಕಿಯರ ವಿಭಾಗದಲ‍್ಲಿ 10ನೇ ತರಗತಿಯ ಬಿ.ತ್ರಿಶಾ 40 ಮೀ ಹರ್ಡಲ್ಸ್‌ನಲ್ಲಿ ಪ್ರಥಮ, 10 ಮೀ ಹರ್ಡಲ್ಸ್‌ನಲ್ಲಿ ದ‍್ವಿತೀಯ ಹಾಗೂ 4x40 ಮೀ ರಿಲೇಯಲ‍್ಲಿ ಪ್ರಥಮ ಸ‍್ಥಾನವನ‍್ನು ಪಡೆದಿದ‍್ದಾರೆ. 

10ನೇ ತರಗತಿಯ ಆರುಷಿ ಎನ್ ಚಕ್ರ ಎಸೆತದಲ‍್ಲಿ ದ‍್ವಿತೀಯ, 10ನೇ ತರಗತಿಯ ಶ್ರದ‍್ಧಾ ಕೆ ಕಟ‍್ವಾಟ್ 4x40ಮೀ ರಿಲೇಯಲ‍್ಲಿ ಪ್ರಥಮ, 10ನೇ ತರಗತಿಯ ಅದಿತಿ ಎನ್ ಶೆಟ‍್ಟಿ, 4x40 ರಿಲೇಯಲ‍್ಲಿ ಪ್ರಥಮ ಹಾಗೂ 9ನೇ ತರಗತಿಯ ನಿಹಾರಿಕ ಕೆ.ಎಸ್ 4x40 ರಿಲೇಯಲ‍್ಲಿ ಪ್ರಥಮ ಸ‍್ಥಾನವನ‍್ನು ತಮ್ಮದಾಗಿಸಿಕೊಂಡಿದ್ದಾರೆ. 

ಬಾಲವರ್ಗ: ಬಾಲಕರ ವಿಭಾಗದಲ‍್ಲಿ 8ನೇ ತರಗತಿಯ ದೀಪಾಂಶ್ ಶೆಟ‍್ಟಿ 60ಮೀ ಓಟದ ಸ್ಪರ್ಧೆಯಲ‍್ಲಿ ದ‍್ವಿತೀಯ, 40ಮೀ ಓಟದ ಸ್ಪರ್ಧೆಯಲ‍್ಲಿ ತೃತೀಯ, 7ನೇ ತರಗತಿಯ ಆರಾಧ್ಯ ಗಣೇಶ್ ಎತ್ತರ ಜಿಗಿತದಲ‍್ಲಿ ದ‍್ವಿತೀಯ ಮತ್ತು ಗುಂಡು ಎಸೆತದಲ‍್ಲಿ ತೃತೀಯ ಸ‍್ಥಾನವನ‍್ನು ಪಡೆದಿದ‍್ದಾರೆ. ಬಾಲಕಿಯರ ವಿಭಾಗದಲ‍್ಲಿ  ಗ್ರಂಥನಾ ಎಂ ಎತ್ತರ ಜಿಗಿತದಲ‍್ಲಿ ತೃತೀಯ ಸ‍್ಥಾನವನ‍್ನು ತಮ್ಮದಾಗಿಸಿಕೊಂಡಿದ್ದಾರೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.