ಆ.16ಕ್ಕೆ ಪ್ರಥಮ ವರ್ಷದ 'ಪುತ್ತಿಲದ ಕೆಸರ್ದ ಗೊಬ್ಬು' ಆಯೋಜನೆ

Kesarda Gobbu-2026: ಇದೇ ಆಗಸ್ಟ್ 16 ಭಾನುವಾರದಂದು ಪುತ್ತಿಲ ನಡುಗುಡ್ಡೆ ಗದ್ದೆಯಲ್ಲಿ ಪ್ರಥಮ ವರ್ಷದ 'ಕೆಸರ್ದ ಗೊಬ್ಬು-2026' ಕ್ರೀಡಾಕೂಟ ಹಾಗೂ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

Aug 6, 2026 - 17:36
ಆ.16ಕ್ಕೆ ಪ್ರಥಮ ವರ್ಷದ 'ಪುತ್ತಿಲದ ಕೆಸರ್ದ ಗೊಬ್ಬು' ಆಯೋಜನೆ

ಪುತ್ತೂರು (ಮುಂಡೂರು): ಇದೇ ಆಗಸ್ಟ್ 16 ಭಾನುವಾರದಂದು ಪುತ್ತಿಲ ನಡುಗುಡ್ಡೆ ಗದ್ದೆಯಲ್ಲಿ ಪ್ರಥಮ ವರ್ಷದ 'ಕೆಸರ್ದ ಗೊಬ್ಬು-2026' ಕ್ರೀಡಾಕೂಟ ಹಾಗೂ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

'ಪುತ್ತಿಲ ಪರಿವಾರ ಸೇವಾ ಟ್ರಸ್ಟ್' ಆಶ್ರಯದಲ್ಲಿ ಈ ಕಾರ್ಯಕ್ರಮ ಜರುಗಲಿದೆ. ಅಂದು ಬೆಳಗ್ಗೆ 8 ಗಂಟೆಗೆ ಸಮಾರಂಭವು ಶುರುವಾಗಲಿದ್ದು, ನಿವೃತ್ತ ಯೋಧ  ಶ್ರೀರಂಗ ಶಾಸ್ತ್ರಿ ಮಣಿಲ ಅವರು ಉದ್ಘಾಟಿಸಲಿದ್ದಾರೆ. 

ಮುಖ್ಯ ಅತಿಥಿಗಳಾಗಿ ಪುತ್ತೂರಿನ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಜಯಂತ ನಡುಬೈಲು, ನಿವೃತ್ತ ಶಿಕ್ಷಕ ಹುಕ್ರ ಮಾಸ್ಟರ್, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಂಘಟನಾ ಕಾರ್ಯದರ್ಶಿ ಉಮೇಶ ಗೌಡ ಕೋಡಿಬೈಲು, ಪ್ರಧಾನ ಕಾರ್ಯದರ್ಶಿ ಪ್ರೇಮರಾಜ್ ಅರ್ಲಪದವು, ಮುಂಡೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಸಾವಿತ್ರಿ ರಮೇಶ್, ಮಾಜಿ ಸದಸ್ಯ ಬಾಲಕೃಷ್ಣ ಪೂಜಾರಿ ಕುರೆಮಜಲು, ಮಾಜಿ ಸದಸ್ಯೆ ಅರುಣಾ ಅನಿಲ್, ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಜಯರಾಮ ಪೂಜಾರಿ ಒತ್ತೆಮುಂಡೂರು, ಲಕ್ಷ್ಮೀಪ್ರಸಾದ್ ನರಿಮೊಗರು, ಮಂಗಳೂರಿನ ವೈದ್ಯಕೀಯ ಪ್ರತಿನಿಧಿ ಮಹೇಶ್ ಪಿ.ಕೆ ಈಶ್ವರಮಂಗಲ ಹಾಗೂ ಮುಂಡೂರು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷ ಬಾಲಚಂದ್ರ ಗೌಡ ಕಡ್ಯ ಭಾಗವಹಿಸಲಿದ್ದಾರೆ. 

ಸ್ಪರ್ಧೆಯ ವಿವರಗಳು: 

* 1 ರಿಂದ 5ನೇ ತರಗತಿ ಮಕ್ಕಳ ವಿಭಾಗ: ಓಟ, ಹಿಂದೆ ಓಟ, ಮಡಕೆ ಹೊಡೆಯುವುದು ಮತ್ತು ನಿಂಬೆ ಚಮಚ.

* 6 ರಿಂದ 10ನೇ ತರಗತಿ ಮಕ್ಕಳ ವಿಭಾಗ: ಓಟ, ಗೋಣಿ ಓಟ, ಹಿಂಬದಿ ಓಟ, ಮಡಕೆ ಹೊಡೆಯುವುದು, ಕಂಬಳ (3 ಜನ), ನಿಂಬೆ ಚಮಚ & ಅಪ್ಪಂಗಾಯಿ.

* ಪುರುಷರ ವಿಭಾಗ: ಓಟ, ಗೋಣಿ ಓಟ, ಹಗ್ಗ-ಜಗ್ಗಾಟ (ಓಪನ್ ಮಾದರಿ-7 ಜನ), ವಾಲಿಬಾಲ್ (6 ಜನರ ತಂಡ), ಹಾಳೆ ಎಳೆಯುವುದು, ಅಪ್ಪಂಗಾಯಿ ಹಾಗೂ ಅಡ್ಡ ಕಂಬ.
 
* ಮಹಿಳೆಯರ ವಿಭಾಗ: ಓಟ, ಹಗ್ಗ-ಜಗ್ಗಾಟ (ಓಪನ್ ಮಾದರಿ-7 ಜನ), ಥ್ರೋಬಾಲ್, ಹಾಳೆ ಎಳೆಯುವುದು, ನಿಂಬೆ ಚಮಚ ಮತ್ತು ಮಡಕೆ ಹೊಡೆಯುವುದು.

ವಿಶೇಷ ಆಕರ್ಷಣೆಗಳು:

ಸಾಮಾನ್ಯ ಜನರಿಗಾಗಿ 'ನಿಧಿ ಶೋಧ ಹುಡುಕಾಟ' ಸ್ಪರ್ಧೆ ಆಯೋಜಿಸಲಾಗಿದೆ. ದಂಪತಿಗಳಿಗೆ ಉಪ್ಪು ಮೂಟೆ ಓಟ ಹಾಗೂ ಹಾಳೆ ಎಳೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ನಿಧಿ ಶೋಧಕ್ಕೆ ಕಾವೇರಿಕಟ್ಟೆಯ 'ಗಾಯತ್ರಿ ಜ್ಯುವೆಲ್ಲರ್ಸ್'ನ ಸುಶಾಂತ್  ಆಚಾರ್ಯ ಮಹಾಲಿಂಗೇಶ್ವರ ದೇವರ ಬೆಳ್ಳಿಯ ಫೋಟೋವನ್ನು ಪ್ರಾಯೋಜಿಸಿದ್ದಾರೆ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

ಸಂಜಯ್ ಅಂಬೇಕರ್ ಟಿಜಿ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.