ದಿನ ಭವಿಷ್ಯ: ಆಗಸ್ಟ್ 5, 2026.. ಯಾವ ರಾಶಿಗೆ ಶುಭ?
Daily Horoscope: ಇಂದು (ಬುಧವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.
ಮೇಷ:
ಜಗನ್ಮಾತೆಯ ಅನುಗ್ರಹದಿಂದ ಶುಭ ಉದ್ಯಮಗಳಿಗೆ ಒಳ್ಳೆಯ ಹೆಸರು.. ಪ್ರತಿಕೂಲ ಹವೆಯಲ್ಲಿ ಎಚ್ಚರ. ಪ್ರಕೃತಿಯ ಜೊತೆಯಲ್ಲಿ ಸಾಮರಸ್ಯದಿಂದ ಆನಂದ. ಸತ್ಪುರುಷರಿಗೆ ಸಹಾಯ ಮಾಡುವ ಅವಕಾಶ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.
ವೃಷಭ:
ಕಲ್ಪನೆ ಮತ್ತು ಅನುಷ್ಠಾನದಲ್ಲಿ ಸಮತೋಲನ.. ಉದ್ಯೋಗ ಸ್ಥಾನದಲ್ಲಿ ಸಹಕಾರ. ಗೃಹೋದ್ಯಮದ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಳ. ವೃತ್ತಿಪರರಿಗೆ ಸಮಯದ ಸವಾಲು. ದಂಪತಿಗಳ ನಡುವೆ ಅನುರಾಗ ವೃದ್ಧಿ. ಗಣಪತಿ ಅಥರ್ವಶೀರ್ಷ, ವೇದಸಾರ ಶಿವಸ್ತೋತ್ರ, ಅನ್ನಪೂರ್ಣಾ ಸ್ತೋತ್ರ ಓದಿ.
ಮಿಥುನ:
ಅವಕಾಶಗಳನ್ನು ಜತನದಿಂದ ಉಪಯೋಗಿಸಿಕೊಳ್ಳಿ.. ಉದ್ಯಮಿಗಳ ಪಾಲಿಗೆ ಒಳ್ಳೆಯ ದಿನ. ಕೆಲವರಿಗೆ ದೊಡ್ಡ ಮೊತ್ತದ ಲಾಭ. ಎಳೆಯರ ಮನೋವಿಕಾಸಕ್ಕೆ ಸೂಕ್ತ ಪ್ರಯತ್ನ ಪಾಲುದಾರಿಕೆಯಲ್ಲಿ ಪ್ರಾಮಾಣಿಕತೆಗೆ ಪ್ರಾಶಸ್ತ್ಯ ಇರಲಿ. ಗಣೇಶ ದ್ವಾದಶನಾಮ ಸ್ತೋತ್ರ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ,ಗುರುಸ್ತೋತ್ರ ಓದಿ.
ಕರ್ಕಾಟಕ:
ಉದ್ಯೋಗ ಸ್ಥಾನದಲ್ಲಿ ಸೌಹಾರ್ದ ವಾತಾವರಣ.. ಖಾದಿ ಉದ್ಯಮ ಬೆಳೆಸಲು ಆಸಕ್ತಿ. ಹಿರಿಯರ ಆರೋಗ್ಯ ಗಮನಿಸಿ. ಸದ್ಗ್ರಂಥ ವಾಚನದಲ್ಲಿ ಆಸಕ್ತಿ. ವ್ಯವಹಾರದ ಸಂಬಂಧ ಸಣ್ಣ ಪ್ರಯಾಣ.ಗಣೇಶ ಅಷ್ಟಕ, ಶಿವ ಸಹಸ್ರನಾಮ, ಕನಕಧಾರಾ ಸ್ತೋತ್ರ ಓದಿ.
ಸಿಂಹ:
ದೈವಾನುಗ್ರಹದಿಂದ ಯಶಸ್ಸು.. ಉದ್ಯೋಗ ಸ್ಥಾನದಲ್ಲಿ ಹೊಸ ಪ್ರಯೋಗಗಳಿಗೆ ಸಿದ್ಧತೆ. ವಸ್ತ್ರ, ಆಭರಣಾದಿ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ವ್ಯಾಪಾರ. ವಾಹನ ದುರಸ್ತಿಗಾರರಿಗೆ ಅಧಿಕ ಲಾಭ. ಪ್ರಕೃತಿ ರಕ್ಷಣೆಯ ಪ್ರಯತ್ನಗಳಲ್ಲಿ ಭಾಗಿ. ಗಣೇಶ ಕವಚ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
ಕನ್ಯಾ:
ಪ್ರಕೃತಿಗೆ ಸರಿಹೊಂದುವ ಉದ್ಯಮಗಳಿಗೆ ಅನುಕೂಲ. ಗೃಹೋಪಕರಣ ಖರೀದಿಗೆ ಧನವ್ಯಯ. ಹೊಲಿಗೆ ಕೆಲಸ ಬಲ್ಲವರಿಗೆ ಉದ್ಯೋಗಾವಕಾಶ.
ರಕ್ಷಣಾ ವಿಭಾಗಗಳಲ್ಲಿ ಸೇವೆ ಸಲ್ಲಿಸುವವರಿಗೆ ಶುಭ. ಉದರದ ಆರೋಗ್ಯದ ಕಡೆಗೆ ಗಮನ ಇರಲಿ.ಗಣೇಶ ಕವಚ, ಶಿವ ಕವಚ, ಹನುಮಾನ್ ಚಾಲೀಸಾ ಓದಿ.
ತುಲಾ:
ಚುರುಕಿನ ಕಾರ್ಯಾಚರಣೆಯಿಂದ ಕಾರ್ಯ ಸಾಧನೆ.. ಕಸೂತಿ, ಕರಕೌಶಲದ ಕೆಲಸಗಳನ್ನು ಬಲ್ಲವರಿಗೆ ಬೇಡಿಕೆ. ಮಕ್ಕಳ ಬಹುಮುಖ ಪ್ರತಿಭೆ ಬೆಳವಣಿಗೆಗೆ ಪ್ರೋತ್ಸಾಹ. ಆರಾಧನಾ ಸ್ಥಾನಕ್ಕೆ ಭೇಟಿಯಿಂದ ಹರ್ಷ. ಸಾಹಿತ್ಯ ಅಧ್ಯಯನ, ಸಂಗೀತ ಶ್ರವಣಕ್ಕೆ ಸಮಯ.ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಭುಜಂಗ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
ವೃಶ್ಚಿಕ:
ಭವಿಷ್ಯದ ಕುರಿತು ಭಯ ಬೇಡ.. ಹವ್ಯಾಸಗಳನ್ನು ಬೆಳೆಸಿಕೊಳ್ಳಲು ಸಮಯಾನುಕೂಲ. ಗೃಹೋದ್ಯಮ ಉತ್ಪನ್ನಗಳಿಗೆ ಹೊಸ ಗಿರಾಕಿಗಳು. ಉದ್ಯೋಗ ಅರಸುವ ಶಿಕ್ಷಿತರಿಗೆ ಮಾರ್ಗದರ್ಶನ. ಲೌಕಿಕ-ಆಧ್ಯಾತ್ಮಿಕ ಜೀವನ ಸಮನ್ವಯ. ಸಂಕಷ್ಟನಾಶನ ಗಣೇಶ ಸ್ತೋತ್ರ, ದಾರಿದ್ರ್ಯದಹನ ಶಿವಸ್ತೋತ್ರ, ನವಗ್ರಹ ಸ್ತೋತ್ರ ಓದಿ.
ಧನು:
ಅಶಕ್ತರ ಸೇವೆಯಿಂದ ಆನಂದ.. ಉದ್ಯೋಗಸ್ಥರ ನಡುವೆ ಪರಸ್ಪರ ಸಹಕಾರ. ಸಣ್ಣ ಪ್ರಮಾಣದ ಗೃಹೋದ್ಯಮ ಪ್ರಗತಿಯಲ್ಲಿ. ಕರಕುಶಲ ಸಾಮಗ್ರಿ ತಯಾರಕರಿಗೆ ಪ್ರೋತ್ಸಾಹ. ಕಲಿತ ವಿದ್ಯೆ ಪ್ರಯೋಗಿಸಲು ಅವಕಾಶ. ಗಣೇಶ ಕವಚ, ದತ್ತಪಂಜರ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.
ಮಕರ:
ಒಡೆದ ಮನಸ್ಸುಗಳನ್ನು ಬೆಸೆಯುವ ಪ್ರಯತ್ನ.. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ. ಮಕ್ಕಳ ಜ್ಞಾನವೃದ್ಧಿಗೆ ವಿಶೇಷ ಪ್ರಯತ್ನ. ಅಸಹಾಯಕರಿಗೆ ನೆರವಾಗುವ ಅವಕಾಶ. ಒಡಹುಟ್ಟುಗಳ ಸಹಾಯದಿಂದ ಕ್ಷೇಮ ಪ್ರಾಪ್ತಿ. ಗಣೇಶ ಕವಚ, ರಾಮರಕ್ಷಾ ಸ್ತೋತ್ರ, ದೇವೀಕವಚ ಓದಿ.
ಕುಂಭ:
ಕಾರ್ಯಕ್ಷೇತ್ರದಿಂದ ಇನ್ನಷ್ಟು ಸೇವೆ ಅಪೇಕ್ಷೆ.. ಉದ್ಯೋಗಸ್ಥರಿಗೆ ಹೊಸ ವಿಭಾಗದಲ್ಲಿ ಯಶಸ್ಸು. ವೃತ್ತಿರಂಗದ ಮಿತ್ರರಿಂದ ಸಹಾಯಕ್ಕೆ ಕೋರಿಕೆ. ಗ್ರಾಹಕರ ವಿಶ್ವಾಸ ಉಳಿಸುವ ಪ್ರಯತ್ನ. ಉದ್ಯೋಗಾಸಕ್ತರಿಗೆ ಅವಕಾಶ ಗೋಚರ. ಗಣೇಶ ದ್ವಾದಶನಾಮ ಸ್ತೋತ್ರ, ಸುಬ್ರಹ್ಮಣ್ಯ ಭುಜಂಗ ಸ್ತೋತ್ರ, ಶನಿಮಹಾತ್ಮೆ ಓದಿ.
ಮೀನ:
ಕೊಂಚ ಸಡಿಲಾದ ಕೆಲಸಗಳ ಒತ್ತಡ. ಪ್ರಭಾವಿ ವ್ಯಕ್ತಿಯ ನೆರವಿನ ಭರವಸೆ. ಭೂಮಿ ಖರೀದಿ-ಮಾರಾಟ ವ್ಯವಹಾರದಲ್ಲಿ ಶುಭ. ಗುರುಸಮಾನ ವ್ಯಕ್ತಿಯ ಆಗಮನ. ಬಂಧುವರ್ಗದ ಶುಭ ಸಮಾರಂಭದಲ್ಲಿ ಭಾಗಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.