ದಿನ ಭವಿಷ್ಯ: ಯಾರಿಗೆ ಶುಭ?
Daily Horoscope: ಇಂದು (ಭಾನುವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.
ಮೇಷ:
ಒಂದರ ಮೇಲೊಂದು ಆನಂದದ ಘಟನೆ.. ವಿಶೇಷ ಸಾಧನೆ ಮಾಡಿದ ಹೆಗ್ಗಳಿಕೆ. ಸ್ವದೇಶದಲ್ಲೇ ಉಳಿದರೆ ಕ್ಷೇಮ. ಉದ್ಯಮದಲ್ಲಿ ನೌಕರರ ಸಮಸ್ಯೆ ನಿವಾರಣೆ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಆರೋಗ್ಯ, ಉತ್ಸಾಹ.ಗಣೇಶ ಕವಚ, ರಾಮರಕ್ಷಾ ಸ್ತೋತ್ರ, ಶನಿಮಹಾತ್ಮೆ ಓದಿ.
ವೃಷಭ:
ಜೀವನದಲ್ಲಿ ಹೊದಾಣಿಕೆ ಮುಖ್ಯ.. ಕೆಲಸಗಳು ಅರ್ಧದಲ್ಲಿ ನಿಲ್ಲದಂತೆ ನೋಡಿಕೊಳ್ಳಿ. ವ್ಯವಹಾರ ನಿಮಿತ್ತ ಪ್ರಯಾಣ ಅನಿವಾರ್ಯ. ಸಂಸಾರದಲ್ಲಿ ಎಲ್ಲರಿಗೂ ಸಮಾಧಾನದ ಅನುಭವ. ಸಣ್ಣ ಉದ್ಯಮಿಗಳಿಗೆ ಮತ್ತು ವ್ಯಾಪಾರಿಗಳಿಗೆ ಶುಭದಿನ. ಗಣಪತಿ ಅಥರ್ವಶೀರ್ಷ, ದತ್ತಪಂಜರ ಸ್ತೋತ್ರ, ರವಿಸ್ತೋತ್ರ ಓದಿ.
ಮಿಥುನ:
ಮಾತಿನಲ್ಲಿ ಸಂಯಮ ಇರಲಿ.. ಸೇವಾ ಹಿರಿತನಕ್ಕೆ ಮಾನ್ಯತೆ. ಉದ್ಯಮಗಳ ಆರ್ಥಿಕ ಸ್ಥಿತಿ ಸುಧಾರಣೆ. ಮಹಿಳೆಯರ ನೇತೃತ್ವದ ಗೃಹೋದ್ಯಮಗಳು ಪ್ರಗತಿಯಲ್ಲಿ. ವ್ಯವಹಾರ ನಿಮಿತ್ತ ಸಣ್ಣ ಪ್ರಯಾಣ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಆದಿತ್ಯ ಹೃದಯ ಓದಿ.
ಕರ್ಕಾಟಕ:
ಅರ್ಹತಾ ಪರೀಕ್ಷೆಯಲ್ಲಿ ಮೇಲುಗೈ.. ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ. ಕೃಷ್ಯುತ್ಪನ್ನ ಮಾರಾಟದಿಂದ ಲಾಭ. ಉದ್ಯೋಗ ಬೇಟೆಯ ಪ್ರಯತ್ನ ಸಫಲ. ಹಿರಿಯರು, ಗೃಹಿಣಿಯರು, ಮಕ್ಕಳ ಆರೋಗ್ಯ ಉತ್ತಮ.ಗಣೇಶ ದ್ವಾದಶನಾಮ ಸ್ತೋತ್ರ, ವಿಷ್ಣು ಸಹಸ್ರನಾಮ, ಮಹಿಷಮರ್ದಿನಿ ಸ್ತೋತ್ರ ಓದಿ.
ಸಿಂಹ:
ಕಾಣದ ಕೈಗಳ ಪ್ರಭಾವ.ಉತ್ಪನ್ನಗಳ ಜನಪ್ರಿಯತೆ ವೃದ್ಧಿ.. ಬಂಧು ಜನರೊಡನೆ ಸೌಹಾರ್ದಕೂಟ. ಗೃಹೋತ್ಪನ್ನ ಖಾದ್ಯಪದಾರ್ಥಗಳ ಮಾರಾಟದಿಂದ ಲಾಭ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ. ಗಣೇಶ ಅಷ್ಡಕ, ನರಸಿಂಹ ಕವಚ, ಲಕ್ಷ್ಮೀ ಸ್ತೋತ್ರ ಓದಿ.
ಕನ್ಯಾ:
ಜೀವನ ಪ್ರಬಾಹದಲ್ಲಿ ಹೊಸ ತಿರುವು.. ವಿದ್ಯುತ್ ಮತ್ತು ಎಲೆಕ್ಟ್ರಾನಿಕ್ಸ್ ವ್ಯಾಪಾರಿಗಳಿಗೆ ಉತ್ತಮ ಆದಾಯ. ಗೃಹೋತ್ಪನ್ನಗಳಿಗೆ ಬೇಡಿಕೆ ವೃದ್ಧಿ. ಉದ್ಯೋಗಾಸಕ್ತರಿಗೆ ಅವಕಾಶಗಳು ಗೋಚರ. ದೇವತಾ ಕಾರ್ಯಗಳಲ್ಲಿ ಪಾಲುಗೊಳ್ಳುವ ಆಸಕ್ತಿ. ಗಣೇಶ ಪಂಚರತ್ನ, ವೇದಸಾರ ಶಿವಸ್ತೋತ್ರ, ಅಷ್ಟಲಕ್ಷ್ಮೀ ಸ್ತೋತ್ರ ಓದಿ.
ತುಲಾ:
ಒಳ್ಳೆಯ ಹೆಸರು ಉಳಿಸಿಕೊಳ್ಳುವ ಪ್ರಯತ್ನ.. ನೌಕರ ವರ್ಗದ ಉತ್ತಮ ಸಹಕಾರ. ದೈವಾನುಗ್ರಹ ಪ್ರಾಪ್ತಿಗೆ ಸಾಧನೆ ಮುಂದುವರಿಕೆ. ಸಂಸಾರದಲ್ಲಿ ಸಾಮರಸ್ಯದ ವಾತಾವರಣ. ಕೇಟರಿಂಗ್ ವ್ಯವಹಾರಸ್ಥರು ಎಚ್ಚರ.ಗಣೇಶ ಕವಚ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ದತ್ತಾತ್ರೇಯ ಸ್ತೋತ್ರ ಓದಿ.
ವೃಶ್ಚಿಕ:
ತಡೆಯಿಲ್ಲದೆ ಸಾಗುವ ಜೀವನ ಪ್ರವಾಹ.. ಸ್ವಂತ ಉದ್ಯಮದ ತೃಪ್ತಿಕರ ಬೆಳವಣಿಗೆ.ಪರಿಸರ ನೈರ್ಮಲ್ಯ ರಕ್ಷಣೆಯಲ್ಲಿ ಭಾಗಿ. ಹೂವು, ಹಣ್ಣು ವ್ಯಾಪಾರಿಗಳಿಗೆ ಲಾಭ. ಹಿರಿಯರು, ಮಹಿಳೆಯರು ಮತ್ತು ಮಕ್ಕಳಿಗೆ ಉಲ್ಲಾಸದ ವಾತಾವರಣ. ಸಂಕಷ್ಟನಾಶನ ಗಣೇಶ ಸ್ತೋತ್ರ, ರಾಮರಕ್ಷಾ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
ಧನು:
ವಿಘ್ನಕಾರಕರ ಕಾಟದಿಂದ ಮುಕ್ತಿ.. ಉದ್ಯೋಗ ಸ್ಥಾನದಲ್ಲಿ ಪರಿಶ್ರಮಕ್ಕೆ ಗೌರವ. ಸ್ವಂತ ಉದ್ಯಮ ಕ್ರಮವಾಗಿ ಅಭಿವೃದ್ಧಿ. ದೇವತಾರ್ಚನೆಯಿಂದ ನೆಮ್ಮದಿ ಪ್ರಾಪ್ತಿ. ಕೃಷಿ ಕ್ಷೇತ್ರದ ಪ್ರಯೋಗಗಳಲ್ಲಿ ಮುನ್ನಡೆ. ಗಣೇಶ ಪಂಚರತ್ನ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ದೇವೀಸ್ತೋತ್ರ ಓದಿ.
ಮಕರ:
ಸಾಂಸಾರಿಕ ತಾಪತ್ರಯಗಳಿಂದ ಬಿಡುಗಡೆ.. ಉದ್ಯೋಗ ಕ್ಷೇತ್ರದ ಒತ್ತಡ ನಿವಾರಣೆ. ಹೊಸ ಉದ್ಯೋಗ ಅರಸುವವರಿಗೆ ಅವಕಾಶಗಳು ಗೋಚರ. ಮಕ್ಕಳ ವಿದ್ಯಾಭ್ಯಾಸದತ್ತ ಗಮನ. ಸಂಸಾರದಲ್ಲಿ ಎಲ್ಲರ ಆರೋಗ್ಯ ಉತ್ತಮ. ಗಣಪತಿ ಅಥರ್ವಶೀರ್ಷ, ಶಿವಪಂಚಾಕ್ಷರ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
ಕುಂಭ:
ಜನಸೇವಾ ಕಾರ್ಯಗಳಿಂದ ಮುಕ್ತಿ.. ಉದ್ಯೋಗದಲ್ಲಿ ಶ್ಲಾಘನಾರ್ಹ ಸಾಧನೆ. ಮನೆಯಲ್ಲಿ ದೇವತಾ ಕಾರ್ಯ. ವಿವಾಹಾಸಕ್ತರಿಗೆ ಯೋಗ್ಯ ಸಂಬಂಧ ಒದಗುವ ನಿರೀಕ್ಷೆ. ಗೃಹಿಣಿಯರ ಸ್ವಾವಲಂಬನೆ ಯೋಜನೆ ಪ್ರಗತಿ. ಗಣಪತಿ ಅಥರ್ವಶೀರ್ಷ, ಶಿವಪಂಚಾಕ್ಷರ ಸ್ತೋತ್ರ, ಶನಿಮಹಾತ್ಮೆ ಓದಿ.
ಮೀನ:
ಅರ್ಧಕ್ಕೆ ನಿಂತಿದ್ದ ಕಾರ್ಯ ಪೂರ್ಣ.. ಉದ್ಯೋಗದಲ್ಲಿ ಯಶಸ್ಸು. ಸರಕಾರಿ ಅಧಿಕಾರಿಗಳ ಸಹಕಾರ. ವೃತ್ತಿ ಕ್ಷೇತ್ರದಲ್ಲಿ ಕೀರ್ತಿ ವರ್ಧನೆ. ಅನುಭವಿಗಳ ಮಾರ್ಗದರ್ಶನದಿಂದ ಜಯ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.