ಪುತ್ತೂರು: ಇಲ್ಲಿನ ಅಕ್ಷಯ ಕಾಲೇಜಿನಲ್ಲಿ 'ಒಣಂ ಹಬ್ಬ'ವನ್ನು ಬಹಳ ಸಂಭ್ರಮ - ಸಡಗರದಿಂದ ಆಚರಿಸಲಾಯಿತು. ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಜಯಂತ್ ನಡುಬೈಲ್ ಅವರು, ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
'ಒಣಂ ಕೇರಳದ ಹಬ್ಬವಾದರು, ಗಡಿನಾಡಿನ ನಾವೆಲ್ಲರೂ ಸೌಹಾರ್ದದಿಂದ ಆಚರಿಸುತ್ತೇವೆ. ದೇಶದ ಐಕ್ಯತೆಯನ್ನು ಬಲಪಡಿಸಲು ಗಡಿನಾಡಿನ ಹಬ್ಬಗಳನ್ನು ಆಚರಣೆ ಮಾಡುವುದು ಸೂಕ್ತ. ಸೌಹಾರ್ದಯುತ ಜೀವನ ಶೈಲಿ, ನಮ್ಮ ಬದುಕಿಗೆ ಮೆರುಗನ್ನು ನೀಡುತ್ತದೆ. ಅಖಂಡ ಭಾರತ ಸಂಕಲ್ಪವನ್ನು ನಾವು ಯಥಾವತ್ತಾಗಿ ಕಾಪಾಡಿಕೊಂಡು ಬರಬೇಕು' ಎನ್ನುತ್ತಾ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ವೇದಿಕೆಯಲ್ಲಿ ಕಾಲೇಜಿನ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕಿ ಕಲಾವತಿ ಜಯಂತ್, ಕಾರ್ಯದರ್ಶಿ ಡಾ ಅಕ್ಷಯ್, ಪದವಿ ಕಾಲೇಜಿನ ಪ್ರಾಂಶುಪಾಲ ಸಂಪತ್ ಕೆ ಪಕ್ಕಳ, ಆಡಳಿತಾಧಿಕಾರಿ ಡಾ.ಅರ್ಪಿತ್ ಟಿ.ಎ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಅಭಿಲಾಷ್ ಕ್ಷತ್ರಿಯ, ಐಕ್ಯೂಎಸಿ ಸಂಯೋಜಕಿ ರಶ್ಮಿ ಕೆ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಅಶೋಕ ರೈ, ಒಣಂ ಕಾರ್ಯಕ್ರಮದ ಸಂಯೋಜಕಿ ಅನನ್ಯ ಭಟ್, ಲಲಿತ ಕಲಾ ಸಂಘದ ಸಂಯೋಜಕಿ ರಶ್ಮಿತಾ ಎಸ್, ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಸೂರ್ಯ ಹಾಗೂ ಉಪಾಧ್ಯಕ್ಷೆ ರಕ್ಷಾ ಹಾಜರಿದ್ದರು.
ಹಬ್ಬದ ಆಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ 'ಚೆಂಡೆ ಮೇಳಂ' ವಿಶೇಷ ಆಕರ್ಷಣೆಯಾಗಿತ್ತು. ಎಲ್ಲರ ಗಮನವನ್ನು ಸೆಳೆಯಿತು. ಜೊತೆಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಪೂಕಳಂ ಸ್ಪರ್ಧೆಯ ವಿಜೇತರು:
ಪ್ರಥಮ: ಆಂತರಿಕ ವಿನ್ಯಾಸ ವಿಭಾಗ
ದ್ವಿತೀಯ: ಕಲಾ ವಿಭಾಗ
ತೃತೀಯ: ಫ್ಯಾಷನ್ ಡಿಸೈನ್ ವಿಭಾಗ
ಹಗ್ಗ ಜಗ್ಗಾಟ ಸ್ಪರ್ಧೆಯ ವಿಜೇತರು:
ಪ್ರಥಮ: ವಾಣಿಜ್ಯ ವಿಭಾಗ
ದ್ವಿತೀಯ: ಬಿಸಿಎ ವಿಭಾಗ
ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ನವನೀತ ಪ್ರಾಸ್ತಾವಿಕವಾಗಿ ಮಾತನಾಡಿದರು. ತೃತೀಯ ಬಿಕಾಂ ವಿದ್ಯಾರ್ಥಿನಿ ಅರ್ಚನಾ ಸ್ವಾಗತಿಸಿದರು. ತೃತೀಯ ಬಿಎ ವಿದ್ಯಾರ್ಥಿ ಹರಿಪ್ರಸಾದ್ ವಂದಿಸಿದರು. ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ವರ್ಷ ಮಲಯಾಳಂನಲ್ಲಿ ನಿರೂಪಿಸಿದರು.