Chess: ವಿವೇಕಾನಂದ ಕಾಲೇಜಿಗೆ ವಿವಿ ಮಟ್ಟದ ಚೆಸ್ ಪ್ರಶಸ್ತಿ

Chess: ಮಂಗಳೂರು ವಿವಿ ಮಟ್ಟದ ಅಂತರ ಕಾಲೇಜು ಚೆಸ್ ಪಂದ್ಯಾವಳಿಯ ಮಹಿಳೆಯರ ವಿಭಾಗದಲ್ಲಿ, ವಿವೇಕಾನಂದ ಮಹಾವಿದ್ಯಾಲಯ ಪ್ರಶಸ್ತಿಯನ್ನು ಪಡೆದಿದೆ.

Sep 22, 2026 - 11:58
Chess: ವಿವೇಕಾನಂದ ಕಾಲೇಜಿಗೆ ವಿವಿ ಮಟ್ಟದ ಚೆಸ್ ಪ್ರಶಸ್ತಿ

ಪುತ್ತೂರು: ಉಡುಪಿಯ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಆಶ್ರಯದಲ್ಲಿ ನಡೆದ ಮಂಗಳೂರು ವಿವಿ ಮಟ್ಟದ ಅಂತರ ಕಾಲೇಜು ಚೆಸ್ ಪಂದ್ಯಾವಳಿಯ ಮಹಿಳೆಯರ ವಿಭಾಗದಲ್ಲಿ, ವಿವೇಕಾನಂದ ಮಹಾವಿದ್ಯಾಲಯ ಪ್ರಶಸ್ತಿಯನ್ನು ಪಡೆದಿದೆ.  

ತೃತೀಯ ಬಿಎಸ್ಸಿ ವಿದ್ಯಾರ್ಥಿನಿ ಸಾಧನಾ ಕೆ ಉತ್ತಮ 3ನೇ ಚೆಸ್ ಬೋರ್ಡ್ ಆಟಗಾರ್ತಿ ಪ್ರಶಸ್ತಿ ಹಾಗೂ ತೃತೀಯ ಬಿಎಸ್ಸಿ ವಿದ್ಯಾರ್ಥಿನಿ ವಿದ್ಯಾಲಕ್ಷ್ಮಿ ಉತ್ತಮ 4ನೇ ಚೆಸ್ ಬೋರ್ಡ್ ಆಟಗಾರ್ತಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. 

ಹಾಗೆಯೇ ತೃತೀಯ ಬಿಎಸ್ಸಿ ವಿದ್ಯಾರ್ಥಿನಿ ನಿಶಾ ಆರ್.ಎಸ್, ತೃತೀಯ ಬಿಎಸ್ಸಿ ವಿದ್ಯಾರ್ಥಿನಿ ಸಹನಾ ಕೆ ಹಾಗೂ ದ್ವಿತೀಯ ಬಿಎಸ್ಸಿ ಶ್ರೀಜನ್ಯ ಜಿ ಕಾಲೇಜಿನ ತಂಡವನ್ನು ಪ್ರತಿನಿಧಿಸಿದ್ದರು. ವಿವಿ ವ್ಯಾಪ್ತಿಯ 27 ಕಾಲೇಜುಗಳು ಭಾಗವಹಿಸಿದ್ದ ಈ ಪಂದ್ಯಾವಳಿಯಲ್ಲಿ 5 ಸುತ್ತುಗಳಲ್ಲಿ 8 ಮ್ಯಾಚ್ ಅಂಕ ಗಳಿಸುವುದರೊಂದಿಗೆ, ಪ್ರಶಸ್ತಿಯನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ. 

ವಿದ್ಯಾರ್ಥಿನಿಯರ ಈ ಸಾಧನೆಗೆ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ಅಭಿನಂದಿಸಿದ್ದಾರೆ.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.