ಡ್ರಗ್ಸ್ ವ್ಯಸನಿಗಳಿಗೆ ಹೆಚ್.ಐ.ವಿ ತಪಾಸಣೆ: ಜಿಲ್ಲಾಧಿಕಾರಿ ಸೂಚನೆ

Apr 22, 2026 - 18:27
ಡ್ರಗ್ಸ್ ವ್ಯಸನಿಗಳಿಗೆ  ಹೆಚ್.ಐ.ವಿ ತಪಾಸಣೆ: ಜಿಲ್ಲಾಧಿಕಾರಿ ಸೂಚನೆ

ಮಂಗಳೂರು, ಎ.22(ಕ.ವಾ):- ಮಾದಕ ವಸ್ತು ವ್ಯಸನಿಗಳಿಗೆ ಹೆಚ್.ಐ.ವಿ ರೋಗದ ಬಗ್ಗೆ ಪರೀಕ್ಷೆ ನಡೆಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ದರ್ಶನ್ ಹೆಚ್ ವಿ ಸೂಚಿಸಿದ್ದಾರೆ.
    ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮಿಷನ್  ಏಡ್ಸ್ ಸುರಕ್ಷಾ ಅಭಿಯಾನದ ಗುರಿಗಳನ್ನು ಜಿಲ್ಲಾಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುμÁ್ಠನಗೊಳಿಸುವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
  ಜಿಲ್ಲೆಯಲ್ಲಿ ಡ್ರಗ್ಸ್ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗಿದ್ದು, ಈ ನಿಟ್ಟಿನಲ್ಲಿ ಮಿಷನ್  ಏಡ್ಸ್ ಅಭಿಯಾನದಡಿ  ಅಗತ್ಯ ಕ್ರಮ ಕೈಗೊಳ್ಳಲು ಅವರು ಸೂಚಿಸಿದರು.
   ಜಿಲ್ಲೆಯ ಎಲ್ಲಾ ಖಾಸಗಿ ಕ್ಲಿನಿಕ್, ನಸಿರ್ಂಗ್ ಹೋಂ, ಆಸ್ಪತ್ರೆಗಳು ಹೆಚ್.ಐ.ವಿ ಪ್ರಕರಣಗಳ ಬಗ್ಗೆ   ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಪ್ರಮುಖ ಜನಸಂದಣಿ  ಘಟಕ, ಕೈಗಾರಿಕೆಗಳು,  ವಲಸೆ ಕಾರ್ಮಿಕರಲ್ಲಿ ಹೆಚ್.ಐ.ವಿ  ತಪಾಸಣೆ ಬಗ್ಗೆ ಸಹಕರಿಸಲು ಸಂಬಂಧಿಸಿದ ಇಲಾಖೆಗೆ ಸೂಚಿಸಲಾಗುವುದು ಎಂದು  ಜಿಲ್ಲಾಧಿಕಾರಿಗಳು ತಿಳಿಸಿದರು.
  ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ  ಡಾ. ಖತೀಜಾ ದಿಲ್‍ಶಾದ್  ಮಾತನಾಡಿ, ಮಿಷನ್  ಏಡ್ಸ್ ಸುರಕ್ಷಾ ಅಭಿಯಾನದಡಿ,  ಹೆಚ್.ಐ.ವಿ ಬಾಧಿತರ ಪೈಕಿ ಶೇಕಡ 95 ರಷ್ಟು ಮಂದಿಗೆ ತಮ್ಮ  ಹೆಚ್.ಐ.ವಿ  ಸ್ಥಿತಿಯ ಬಗ್ಗೆ ಅರಿವು ಮೂಡಿಸುವುದು, ಸೂಕ್ತ ಚಿಕಿತ್ಸೆ ಪಡೆದು ಮತ್ತು ವೈರಸ್ ನಿಯಂತ್ರಿಸುವುದು ಆದ್ಯತೆಯಾಗಿರುತ್ತದೆ.  ಜಿಲ್ಲೆಯಲ್ಲಿ ಮಾರ್ಚ್ ಅಂತ್ಯದವರೆಗೆ ಹೆಚ್.ಐ.ವಿ ಭಾಧಿತರಲ್ಲಿ ಶೇ. 85.23 ರಷ್ಟು ಮಂದಿ ಚಿಕಿತ್ಸೆ ಪಡೆದಿರುತ್ತಾರೆ ಎಂದರು.
   ಜಿಲ್ಲೆಯಲ್ಲಿ 21 ಕೌನ್ಸಿಲಿಂಗ್ ಮತ್ತು ಪರೀಕ್ಷಾ ಕೇಂದ್ರಗಳು, 9 ಎ.ಆರ್.ಟಿ ಕೇಂದ್ರಗಳು  ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಜಿಲ್ಲೆಯಲ್ಲಿ  4663 ಹೆಚ್.ಐ.ವಿ   ಸಕ್ರಿಯ  ಪ್ರಕರಣಗಳು   ಇವೆ. ಕಳೆದ ವರ್ಷ ಜಿಲ್ಲೆಯಲ್ಲಿ 84893  ಹೆಚ್.ಐ.ವಿ ಪರೀಕ್ಷೆ  ಮಾಡಲಾಗಿದ್ದು, ಈ ಪೈಕಿ 293  ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಇದುವರೆಗೆ ಜಿಲ್ಲೆಯಲ್ಲಿ ಹೆಚ್.ಐ.ವಿ ಯಿಂದ 2972 ಮರಣ ಪ್ರಕರಣಗಳು ವರದಿಯಾಗಿದೆ ಎಂದು ತಿಳಿಸಿದರು.  
    ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಜೈಬುನ್ನೀಸ, ದ.ಕ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ  ಜಯಲಕ್ಷ್ಮಿ ರಾಯಕೋಡ್ , ಅಪರ ಜಿಲ್ಲಾಧಿಕಾರಿ ರಾಜು ಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಆರ್. ತಿಮ್ಮಯ್ಯ,  ಉಪಸ್ಥಿತರಿದ್ದರು.