Nandini Price Hike: ರಾಜ್ಯದಲ್ಲಿ ನಂದಿನಿ ತುಪ್ಪ, ಬೆಣ್ಣೆ ಬೆಲೆ ಏರಿಕೆ
Nandini Ghee Price Hike: ರಾಜ್ಯದಲ್ಲಿ ನಂದಿನಿ ತುಪ್ಪ ಹಾಗೂ ಬೆಣ್ಣೆ ಬೆಲೆಯನ್ನು ಏಕಾಏಕಿ ಏರಿಕೆ ಮಾಡಲಾಗಿದ್ದು, ಗ್ರಾಹಕರಿಗೆ ಬಿಗ್ ಶಾಕ್ ಎದುರಾಗಿದೆ.
ಬೆಂಗಳೂರು: ಕೆಲವು ದಿನಗಳ ಹಿಂದಷ್ಟೇ ತುಪ್ಪ ಸೇರಿದಂತೆ ನಂದಿನಿ (Nandini) ಉತ್ಪನ್ನಗಳ ದರ ಇಳಿಕೆ ಮಾಡಿದ್ದ ಕೆಎಂಎಫ್ (KMF), ಇದೀಗ ಮತ್ತೆ ದಿಢೀರ್ ಆಗಿ ತುಪ್ಪ (Ghee) ಹಾಗೂ ಬೆಣ್ಣೆ (Butter) ದರವನ್ನು ಏರಿಕೆ ಮಾಡಿದೆ.
ಅದರಂತೆ ಒಂದು ಕೆಜಿ ನಂದಿನಿ ತುಪ್ಪಕ್ಕೆ ರೂ.15 ಏರಿಕೆಯಾಗಿದ್ದರೆ, ಬೆಣ್ಣೆ ದರವು ಕೆಜಿಗೆ ಬರೋಬ್ಬರಿ ರೂ.22 ಏರಿಕೆ ಮಾಡಲಾಗಿದೆ. ಹೊಸ ದರವು ಶುಕ್ರವಾರದಿಂದಲೇ (ಜುಲೈ24) ಜಾರಿಗೆ ಬರಲಿದ್ದು, ಆ ಮೂಲಕ ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್ ನೀಡಿದೆ. ಪರಿಷ್ಕೃತ ದರ ಪ್ರಕಾರ, ರೂ.700 ಇದ್ದ ಒಂದು ಕೆಜಿ ತುಪ್ಪ ರೂ.715ಕ್ಕೆ ಹಾಗೂ ರೂ.610 ಇದ್ದ ಒಂದು ಕೆಜಿ ಬೆಣ್ಣೆ ರೂ.660ಕ್ಕೆ ಏರಿಕೆಯಾಗಿದೆ.
ತುಪ್ಪ ಮತ್ತು ಬೆಣ್ಣೆ ಬೆಲೆ ಏರಿಕೆಯಾಗಿರುವುದರಿಂದ ಇದರ ನೇರ ಪರಿಣಾಮ ಗ್ರಾಹಕರಿಗೆ ತಟ್ಟುವುದರಲ್ಲಿ ಅನುಮಾನವಿಲ್ಲ. ಮತ್ತೊಂದೆಡೆ, ಹೋಟೆಲ್ ಉದ್ಯಮವು ತುಪ್ಪ ಹಾಗೂ ಬೆಣ್ಣೆ ಬೆಲೆ ಏರಿಕೆ ನೇರ ಪರಿಣಾಮಗಳನ್ನು ಎದುರಿಸಲಿದೆ. ಇದರಿಂದ ಹೋಟೆಲ್‌ಗಳಲ್ಲಿಯೂ ತಿಂಡಿ-ತಿನಿಸುಗಳ ಬೆಲೆ ಏರಿಕೆ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.