ಪುತ್ತೂರು: ರಸ್ತೆ ಸರಿಪಡಿಸುವಂತೆ ಪುತ್ತಿಲ ಪರಿವಾರದಿಂದ ಮನವಿ

Puttur: ಇಲ್ಲಿನ ಪುರುಷರಕಟ್ಟೆ-ಶಾಂತಿಗೋಡು-ಆನಡ್ಕ ಸಂಪರ್ಕ ರಸ್ತೆಯು ಮಾಯಂಗಲದಿಂದ ಕೂಡುರಸ್ತೆವರೆಗೆ ಸಂಪೂರ್ಣವಾಗಿ ಹದಗೆಟ್ಟಿದೆ. ಈ ರಸ್ತೆಯನ್ನು ಅತಿ ಶೀಘ್ರದಲ್ಲಿ ಸರಿಪಡಿಸಬೇಕೆಂದು, ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ರನ್ನು ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಹಾಗೂ ಪದಾಧಿಕಾರಿಗಳು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

Jul 24, 2026 - 15:24
Jul 24, 2026 - 15:26
ಪುತ್ತೂರು: ರಸ್ತೆ ಸರಿಪಡಿಸುವಂತೆ ಪುತ್ತಿಲ ಪರಿವಾರದಿಂದ ಮನವಿ

ಪುತ್ತೂರು: ಇಲ್ಲಿನ ಪುರುಷರಕಟ್ಟೆ-ಶಾಂತಿಗೋಡು-ಆನಡ್ಕ ಸಂಪರ್ಕ ರಸ್ತೆಯು ಮಾಯಂಗಲದಿಂದ ಕೂಡುರಸ್ತೆವರೆಗೆ ಸಂಪೂರ್ಣವಾಗಿ ಹದಗೆಟ್ಟಿದೆ. ವಾಹನ ಸಂಚಾರಕ್ಕೆ ಯೋಗ್ಯವಲ್ಲದ ರೀತಿಯಲ್ಲಿದೆ. 

ಈ ರಸ್ತೆಯನ್ನು ಅತಿ ಶೀಘ್ರದಲ್ಲಿ ಸರಿಪಡಿಸಬೇಕೆಂದು, ಗುರುವಾರ (ಜು.23) ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ರನ್ನು ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಹಾಗೂ ಪದಾಧಿಕಾರಿಗಳು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

ಈ ವೇಳೆ ಟ್ರಸ್ಟಿನ ಪದಾಧಿಕಾರಿ ಉಮೇಶ್ ಕೋಡಿಬೈಲು, ಅನಿಲ್ ತೆಂಕಿಲ, ವಿಶ್ವನಾಥ ಬಲ್ಯಾಯ, ಜಯರಾಮ ಪೂಜಾರಿ, ಲಕ್ಷ್ಮೀಪ್ರಸಾದ್ ಆನಾಜೆ, ಅವಿನಾಶ್ ಪುರುಷರಕಟ್ಟೆ ಹಾಗೂ ರಾಕೇಶ್ ಓಜಾಲ ಇದ್ದರು.

ತಕ್ಷಣ ಮನವಿಗೆ ಸ್ಪಂದಿಸಿದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ಗ್ರಾಮದ ಪಿಡಿಒಗೆ ಹದಗೆಟ್ಟ ರಸ್ತೆ ಸ್ಥಳಕ್ಕೆ ಕಳುಹಿಸಿದ್ದಾರೆ. ಪುತ್ತಿಲ ಪರಿವಾರ ನಿಯೋಗ ಮತ್ತು ಗ್ರಾಮಸ್ಥರು ರಸ್ತೆಯನ್ನು ಕೂಡಲೇ ಸಂಚಾರಕ್ಕೆ ಯೋಗ್ಯವಾಗಿಸಬೇಕೆಂದು ಒತ್ತಾಯಿಸಿದ್ದಾರೆ. ಅವರು, ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.