Realme: ಇಂದಿನಿಂದ ಹೊಸ ರಿಯಲ್‌ಮಿ ನಾರ್ಜೊ 100ಎಕ್ಸ್ 5G ಫೋನ್‌ ಸೇಲ್ ಶುರು

Realme Narzo 100x 5G: ಹೊಸ ರಿಯಲ್‌ಮಿ ನಾರ್ಜೊ 100ಎಕ್ಸ್ 5ಜಿ ಸ್ಮಾರ್ಟ್‌ಫೋನ್‌ ಮಾರಾಟವು ಇಂದಿನಿಂದ ಶುರುವಾಗಿದೆ.

Jul 22, 2026 - 13:36
Realme: ಇಂದಿನಿಂದ ಹೊಸ ರಿಯಲ್‌ಮಿ ನಾರ್ಜೊ 100ಎಕ್ಸ್ 5G ಫೋನ್‌ ಸೇಲ್ ಶುರು

ಹೊಸ ರಿಯಲ್‌ಮಿ ನಾರ್ಜೊ 100ಎಕ್ಸ್ 5ಜಿ (Realme Narzo 100x 5G) ಸ್ಮಾರ್ಟ್‌ಫೋನ್‌ ಮಾರಾಟವು ಇಂದಿನಿಂದ (ಜುಲೈ 22)  ಶುರುವಾಗಿದೆ. ಅಮೆಜಾನ್ ಹಾಗೂ ರಿಯಲ್‌ಮಿ ಪ್ಲಾಟ್‌ಫಾರ್ಮ್‌ನಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ. 

ಇದು 4GB RAM + 64GB, 6GB + 128GB ಮತ್ತು 6GB + 256GB ಇಂಟರ್ನಲ್ ಸ್ಟೋರೇಜ್‌ನ್ನು ಹೊಂದಿದೆ. ಕ್ರಮವಾಗಿ ರೂ.20,999, ರೂ.22,999 ಹಾಗೂ ರೂ.24,999 ಬೆಲೆಯನ್ನು ಒಳಗೊಂಡಿದೆ.

ಈ ಫೋನ್‌ 8,000mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದಿದೆ. ಒಮ್ಮೆ ಚಾರ್ಜ್‌ ಮಾಡಿದರೆ 3 ದಿನಗಳವರೆಗೆ ಬಾಳಿಕೆ ಬರುತ್ತದೆ. 45W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಜೊತೆಗಿದು 144Hz ರಿಫ್ರೆಶ್ ರೇಟ್ & 1200 ನಿಟ್ಸ್ ಪೀಕ್ ಬ್ರೈಟ್‌ನೆಸ್ ಹೊಂದಿರುವ 6.8-ಇಂಚಿನ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಆಂಡ್ರಾಯ್ಡ್ 16 ಆಧಾರಿತ ರಿಯಲ್‌ಮಿ UI 7.0 ಆಪರೇಟಿಂಗ್ ಸಿಸ್ಟಮ್‌ನ್ನು ಒಳಗೊಂಡಿದೆ. 

ಹಾಗೆಯೇ ಮೀಡಿಯಾ ಟೆಕ್ ಡೈಮೆನ್ಸಿಟಿ 6300 5G ಪ್ರೊಸೆಸರ್‌ನ್ನು ಪಡೆದಿದೆ. 50MP ಮುಖ್ಯ ಕ್ಯಾಮೆರಾ ಹಾಗೂ 8MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಫ್ಲ್ಯಾಶ್ ಆರೆಂಜ್ ಮತ್ತು ಮಿಡ್‌ನೈಟ್ ಬ್ಲ್ಯಾಕ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.