ಶಿವಮೊಗ್ಗ ದಸರಾ: ದಿಕ್ಕಾಪಾಲಾಗಿ ಓಡಿದ ಅಂಬಾರಿ ಹೊತ್ತ ಸೋಮಣ್ಣ ಆನೆ!

Shivamogga: ದಸರಾ ಜಂಬೂ ಸವಾರಿ ವೇಳೆ, ಬೆಳ್ಳಿಯ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ಬೆದರಿದ್ದು, ದಿಕ್ಕಾಪಾಲಾಗಿ ಓಡಿದೆ.

Oct 21, 2026 - 18:30
Oct 21, 2026 - 18:38
ಶಿವಮೊಗ್ಗ ದಸರಾ: ದಿಕ್ಕಾಪಾಲಾಗಿ ಓಡಿದ ಅಂಬಾರಿ ಹೊತ್ತ ಸೋಮಣ್ಣ ಆನೆ!

ಶಿವಮೊಗ್ಗ: ಇಲ್ಲಿ ದಸರಾ ಜಂಬೂ ಸವಾರಿ ವೇಳೆ ಅವಘಡ ಸಂಭವಿಸಿದೆ. ಮೆರವಣಿಗೆ ಆರಂಭವಾದ ಕೆಲವೇ ನಿಮಿಷಗಳಲ್ಲಿ, ಬೆಳ್ಳಿಯ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ಬೆದರಿದ್ದು, ದಿಕ್ಕಾಪಾಲಾಗಿ ಓಡಿದೆ. 

ಸ್ಥಳೀಯ ಶಾಸಕ ಚನ್ನಬಸಪ್ಪ ಚಾಮುಂಡೇಶ್ವರಿ ತಾಯಿಗೆ ಪುಷ್ಪಾರ್ಚನೆ ಮಾಡಿ, ಜಂಬೂ ಸವಾರಿಗೆ ಚಾಲನೆ ನೀಡಿದರು. ಕೋಟೆ ಆಂಜನೇಯ ಸ್ವಾಮಿ ದೇಗುಲ ದಾಟುತ್ತಿದ್ದಂತೆ ಸೋಮಣ್ಣ ಆನೆ ಗಾಬರಿಗೊಂಡು, ಓಡಿ ಹೋಗಿದೆ. ಆನೆ ಮೇಲಿದ್ದ ಅಂಬಾರಿಯು ಕೆಳಗೆ ಬಿದ್ದಿದೆ.

ಆನೆಯ ಅಬ್ಬರಕ್ಕೆ ಕಾರು ಜಖಂಗೊಂಡಿದ್ದು, ಜನರು ಕೂಡ ಭಯದಿಂದ ಕಾಲು ಕಿತ್ತಿದ್ದಾರೆ. ಆನೆಯನ್ನು ನಿಯಂತ್ರಿಸಲು ಮಾವುತರು, ಕಾವಾಡಿಗರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. 

ಈ ವೇಳೆ ಸೋಮಣ್ಣ ಆನೆ ಮೇಲಿದ್ದ ಮಾವುತ ಕೆಳಗೆ ಬಿದ್ದು ಗಾಯಗೊಂಡಿದ್ದಾನೆ ಎನ್ನಲಾಗಿದೆ. ಪಶುವೈದ್ಯಕೀಯ ಅಧಿಕಾರಿಗಳು, ಆನೆಗೆ ಮಂಪರು ಬರುವಂತೆ ಮಾಡಿ, ಹತೋಟಿಗೆ ತೆಗೆದುಕೊಂಡಿದ್ದಾರೆ. ಈ ಹಿನ್ನೆಲೆ, ಜಂಬೂ ಸವಾರಿ ಮೆರವಣಿಗೆಯನ್ನು ಅರ್ಧದಲ್ಲೇ ಮೊಟಕುಗೊಳಿಸಬೇಕಾಯಿತು.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.