ದಿನ ಭವಿಷ್ಯ: ಯಾವ ರಾಶಿಗೆ ಏನು ಶುಭ ಫಲ?

Daily Horoscope: ಇಂದು (ಶುಕ್ರವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.

Aug 14, 2026 - 09:27
Aug 14, 2026 - 09:27
ದಿನ ಭವಿಷ್ಯ: ಯಾವ ರಾಶಿಗೆ ಏನು ಶುಭ ಫಲ?

ಮೇಷ:

ವಿಶೇಷ ಸಂದರ್ಭಗಳಲ್ಲಿ ವಿಜಯ.. ಉದ್ಯೋಗ ಸ್ಥಾನದಲ್ಲಿ ಸ್ವಲ್ಪ ಅನುಕೂಲ. ಹೋಟೆಲ್ ಉದ್ಯಮಿಗಳಿಗೆ ಬಹಳಷ್ಟು ನೆಮ್ಮದಿ. ದೂರ ದೇಶದಲ್ಲಿರುವ ಮಕ್ಕಳಿಂದ ಸಂತೋಷದ ಸಮಾಚಾರ. ಮಹಿಳೆಯರ  ಉದ್ಯಮಗಳಿಗೆ ಕೀರ್ತಿ, ಗಣೇಶ ಕವಚ, ಶಿವಪಂಚಾಕ್ಷರ ಸ್ತೋತ್ರ, ಶನಿಮಹಾತ್ಮೆ ಓದಿ.


ವೃಷಭ:

ಕೆಲಸ ಕಾರ್ಯಗಳು ನಿರಾತಂಕ.. ಉದ್ಯೋಗಸ್ಥರಿಂದ ಹೊಸ ಅವಕಾಶಗಳ ಸದುಪಯೋಗ. ಖಾದಿಯ ಸಿದ್ಧ ಉಡುಪು ಹಾಗೂ ವಸ್ತ್ರ ವ್ಯಾಪಾರಿಗಳಿಗೆ ಹೇರಳ ಲಾಭ. ನರ್ಸಿಂಗ್ ಶಿಕ್ಷಣ  ಪಡೆದವರಿಗೆ ಉದ್ಯೋಗಾವಕಾಶ. ದೀರ್ಘಕಾಲದ  ವೈಮನಸ್ಸು ಮುಗಿದು ಆನಂದ.ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

ಮಿಥುನ:

ಸಂಕಲ್ಪಶಕ್ತಿ, ದೈವಾನುಗ್ರಹದಿಂದ ಯಶಸ್ಸು.. ತಾತ್ಕಾಲಿಕ ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ. ಮಾತಿನಲ್ಲಿ ತಪ್ಪದಂತೆ ಎಚ್ಚರಿಕೆ ಇರಲಿ. ಯುವಜನರಿಗೆ ಧಾರ್ಮಿಕ ಮಾರ್ಗದರ್ಶನದ ವ್ಯವಸ್ಥೆಯ ನೇತೃತ್ವ. ಮನೆಯಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ. ಗಣೇಶ ಕವಚ,ದತ್ತಾತ್ರೇಯ ಸ್ತೋತ್ರ, ಶನಿಸ್ತೋತ್ರ ಓದಿ.

ಕರ್ಕಾಟಕ:

ಹೊಂದಾಣಿಕೆಯ ಮಾರ್ಗವನ್ನು ಅನುಸರಿಸಿ ಕಾರ್ಯ ಸಾಧನೆ.. ಉದ್ಯೋಗಸ್ಥರಿಗೆ ಸಾಂಸಾರಿಕ ನೆಮ್ಮದಿ. ಉದ್ಯಮಗಳಿಗೆ ಸರಕಾರಿ ಸಬ್ಸಿಡಿ ಲಭ್ಯ. ಮಹಿಳೆಯರ ಸ್ವೋದ್ಯೋಗ ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ಗಣೇಶ ಅಷ್ಟಕ, ಮಹಿಷಮರ್ದಿನಿ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.

ಸಿಂಹ:

ಪಾಲಿಗೆ ಬರುವ ಹೊಸ ಜವಾಬ್ದಾರಿಗಳು.. ಅನೇಕ ಬಗೆಯ ವ್ಯವಹಾರಗಳತ್ತ ಗಮನ ಕೊಡಲು ಕರೆ ಉದ್ಯೋಗಸ್ಥರ ಕಾರ್ಯ ನಿರ್ವಹಣೆಗೆ  ಶ್ಲಾಘನೆ. ಉದ್ಯಮದ ಸ್ವರೂಪ ಬದಲಾವಣೆಯ ಪ್ರಕ್ರಿಯೆಗೆ ಚಾಲನೆ. ಆಧ್ಯಾತ್ಮಿಕ ಗುರುಗಳ ಭೇಟಿ ಸಂಭವ. ಗಣೇಶ ಸ್ತೋತ್ರ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ರಾಜರಾಜೇಶ್ವರೀ ಅಷ್ಟಕ ಓದಿ.

ಕನ್ಯಾ:

ವೃತ್ತಿ ಪರಿಣತಿಯಿಂದ ಸರ್ವವಿಧ ಲಾಭ.. ಹೊಸ ಕಾರ್ಯಕ್ಷೇತ್ರದಲ್ಲಿ ಎಲ್ಲರ ಸಹಕಾರ. ಪ್ರತಿಭೆ ಹಾಗೂ ಹಾಗೂ ಕಾರ್ಯನಿಷ್ಠೆಗೆ ಮಾಲಿಕರಿಂದ ಶ್ಲಾಘನೆ.  ಉದ್ಯೋಗ ಅರಸುವವರಿಗೆ ಯೋಗ್ಯ ಹುದ್ದೆ ಸಿಗುವ  ಭರವಸೆ. ಮನೆಯಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ. ಗಣೇಶ ಕವಚ, ಸುಬ್ರಹ್ಮಣ್ಯ ಭುಜಂಗ ಸ್ತೋತ್ರ, ಗುರುಸ್ತೋತ್ರ ಓದಿ.

ತುಲಾ:

ಉದ್ಯೋಗಸ್ಥರಿಗೆ ಹಿತೈಷಿಗಳ ಸಹಕಾರ.. ಉದ್ಯಮಿಗಳಿಗೆ ಎದುರಾಳಿಗಳ ಪೈಪೋಟಿ ಸ್ವಲ್ಪ ಸಡಿಲು. ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ  ಸಕಾಲಿಕ ಮಾರ್ಗದರ್ಶನ. ಲೇವಾದೇವಿ ವ್ಯವಹಾರ ಬೇಡ. ಹುಟ್ಟೂರಿನ ಅಭಿವೃದ್ಧಿ ಕಾರ್ಯದಲ್ಲಿ ಭಾಗಿ. ಗಣೇಶ ಕವಚ, ರಾಮರಕ್ಷಾ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.

ವೃಶ್ಚಿಕ:

ಎಲ್ಲ ಬಗೆಯ ಪರಿಸ್ಥಿತಿಗಳಲ್ಲೂ ಅನುಕೂಲದ ಪರಿಣಾಮ.. ಉದ್ಯೋಗಸ್ಥರ ಸ್ಥಾನ ಗೌರವಕ್ಕೆ ಹಾನಿ ಇಲ್ಲ. ಸರ್ಕಾರ ಅಧಿಕಾರಿಗಳ ಆತಂಕ ಕೊಂಚ ದೂರ. ರಾಜಕಾರಣಿಗಳಿಗೆ ಬಿಗಿಯಾದ  ಇಕ್ಕಟ್ಟಿನ ಪರಿಸ್ಥಿತಿ. ವಸ್ತ್ರ, ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ಗಣಪತಿ ಅಥರ್ವಶೀರ್ಷ, ದಾರಿದ್ರ್ಯದಹನ ಶಿವಸ್ತೋತ್ರ, ನರಸಿಂಹ ಕವಚ ಓದಿ.

ಧನು:

ಜನ್ಮಜಾತ ಉದ್ಯಮಶೀಲತೆಗೆ ಸಹಚರರ ಮೆಚ್ಚುಗೆ.. ಪರಿಸರದ ಸ್ವರೂಪ ಬದಲಾವಣೆಗೆ ಆದ್ಯತೆ. ಹಿರಿಯ ನಾಗರಿಕರಿಗೆ ಸರ್ಕಾರಿ ನೆರವು ದೊರಕಿಸಲು ಸಹಾಯ.ಬಂಧುಗಳ ಮನೆಯಲ್ಲಿ ದೇವತಾ ಕಾರ್ಯ. ಅವಿವಾಹಿತರಿಗೆ ವಿವಾಹ ಯೋಗ. ಗಣೇಶ ಕವಚ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

ಮಕರ:

ಸಂದಿಗ್ಧ ಪರಿಸ್ಥಿತಿಗಳಿಂದ  ಮುಕ್ತಿ.. ಉದ್ಯೋಗಸ್ಥರ ಕಾರ್ಯಸಾಮರ್ಥ್ಯ ಪರೀಕ್ಷೆಗಳಲ್ಲಿ ವಿಜಯ. ಬಂಧುವರ್ಗದಲ್ಲಿ ಸಾಮರಸ್ಯ ಸ್ಥಾಪನೆ. ಗೃಹೋಪಯೋಗಿ ಸಾಮಗ್ರಿಗಳ ದುರಸ್ತಿಗೆ ಧನವ್ಯಯ. ಹಿರಿಯರ, ಮಕ್ಕಳ ಆರೋಗ್ಯ ಸುಧಾರಣೆ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

ಕುಂಭ.

ಉದ್ಯೋಗಸ್ಥರಿಗೆ ಹಿತಾನುಭವ.. ಸರ್ಕಾರಿ ನೌಕರರಿಗೆ ಹೆಚ್ಚುವರಿ ಜವಾಬ್ದಾರಿಗಳು. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆಯಿಂದ ಲಾಭ. ಸಂಗೀತ, ನೃತ್ಯ ಕಲೆಗಳನ್ನು ಅಭ್ಯಾಸ ಮಾಡುವವರಿಗೆ ಸಂತಸದ ಸಮಾಚಾರ. ಕೃಷಿಕರಿಗೆ ನೂತನ ಬೆಳೆಗಳಲ್ಲಿ ಆಸಕ್ತಿ. ಗಣೇಶ ಕವಚ, ರಾಮ ಭುಜಂಗಪ್ರಯಾತ ಸ್ತೋತ್ರ, ಶನಿ ಮಹಾತ್ಮೆ ಓದಿ. 

ಮೀನ:

ಉದ್ಯೋಗ ಸ್ಥಾನದಲ್ಲಿ ಸಹಚರರಿಂದ  ವಿಶೇಷ ಸಹಾಯ.. ಸೇವಾ ರೂಪದ ಕಾರ್ಯಗಳು  ಮುನ್ನಡೆ. ಹೊಸ ಉದ್ಯಮ ಆರಂಭ ದೇವತಾ ಸಾನ್ನಿಧ್ಯಕ್ಕೆ ಭೇಟಿ. ಹಿರಿಯರ ಆರೋಗ್ಯದತ್ತ ಗಮನವಿರಲಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.