ಇಂಜಿನಿಯರ್ಸ್ ಡೇ: ಶ್ಯಾಮಸುಂದರ ಹೆಗಡೆಗೆ ‘ಸಾಧಕಶ್ರೀ’ ಗೌರವ

Engineers Day: ಬೆಂಗಳೂರಿನ ಪಿಡಬ್ಲ್ಯುಡಿ ಭವನದಲ್ಲಿ ಸಾಗರ ಸಂಗಮ ಇಂಜಿನಿಯರ್ಸ್ ಅಸೋಸಿಯೇಷನ್ ವತಿಯಿಂದ, 'ಇಂಜಿನಿಯರ್ಸ್ ಡೇ' ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

Sep 28, 2026 - 13:16
ಇಂಜಿನಿಯರ್ಸ್ ಡೇ: ಶ್ಯಾಮಸುಂದರ ಹೆಗಡೆಗೆ ‘ಸಾಧಕಶ್ರೀ’ ಗೌರವ

ಬೆಂಗಳೂರು: ದೇಶ ನಿರ್ಮಾಣದಲ್ಲಿ ಇಂಜಿನಿಯರ್‌ಗಳ ಪಾತ್ರ ದೊಡ್ಡದು. ರಾಷ್ಟ್ರದ ಅಭಿವೃದ್ಧಿಗೂ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಬೆಂಗಳೂರಿನ ತಾಂತ್ರಿಕ ಶಿಕ್ಷಣ ಇಲಾಖೆಯ ನಿವೃತ್ತ ಪ್ರಾಂಶುಪಾಲೆ ಜಯಶ್ರೀ ಟಿ.ಕೆ ಹೇಳಿದರು.

ಪಿಡಬ್ಲ್ಯುಡಿ ಭವನದಲ್ಲಿ ಸಾಗರ ಸಂಗಮ ಇಂಜಿನಿಯರ್ಸ್ ಅಸೋಸಿಯೇಷನ್ ವತಿಯಿಂದ, ಏರ್ಪಡಿಸಿದ್ದ 'ಇಂಜಿನಿಯರ್ಸ್ ಡೇ' ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.

ಕೆಎಸ್‌ಎಫ್‌ಸಿಯ ನಿವೃತ್ತ ಡಿಜಿಎಂ ಸೋಮಶೇಖರಪ್ಪ ಮಾತನಾಡಿ, ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರು ದೇಶಕ್ಕೆ ನೀಡಿದ ಅಪೂರ್ವ ಕೊಡುಗೆಯನ್ನು ಸ್ಮರಿಸಿದರು.

ಸಾಗರ ಸಂಗಮ ಅಸೋಸಿಯೇಷನ್ ಅಧ್ಯಕ್ಷ ರವಿ ಕುಮಾರ್ ಸಾಗರ್ ಮತ್ತು ಗೌರವಾಧ್ಯಕ್ಷ ಗಣೇಶ ಹೊನರಿ ಕೂಡ ಮಾತನಾಡಿದರು. ಇಂದಿನ ಇಂಜಿನಿಯರ್‌ಗಳಿಗೆ ಉಪಯುಕ್ತ ಸಲಹೆಗಳನ್ನು ನೀಡಿದರು. 

ಇದೇ ಸಂದರ್ಭದಲ್ಲಿ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಿ, ಸಮಾಜಕ್ಕೆ ಕೊಡುಗೆ ನೀಡುತ್ತಿರುವ ಶ್ಯಾಮಸುಂದರ ಹೆಗಡೆ, ಸತೀಶ್ ಕುಮಾರ್ ಶೆಟ್ಟಿ, ರವಿ ಕುಮಾರ್ ಎಸ್ ಮತ್ತು ಪರಮೇಶ್ವರ ಕೆ.ಆರ್ ಅವರಿಗೆ 'ಸಾಧಕಶ್ರೀ' ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸುನಿಲ್ ಬಾರ್ಕುರ್ ಅವರ 'ಚೌಕಬಾರ' ಕೃತಿಯನ್ನು ವಿಜಯವಾಣಿ ಸಂಪಾದಕ ಕೆ.ಎನ್.ಚನ್ನೇಗೌಡ ಲೋಕಾರ್ಪಣೆಗೊಳಿಸಿದರು.

2025–26ನೇ ಸಾಲಿನಲ್ಲಿ ವಿವಿಧ ವಿಭಾಗಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ಸಂಜಯ್ ಮೆಮೋರಿಯಲ್ ಪಾಲಿಟೆಕ್ನಿಕ್‌ನ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 

ಕಳೆದ 15 ವರ್ಷಗಳಿಂದ 'ಸಾಗರ ಸಂಗಮ ಇಂಜಿನಿಯರ್ಸ್ ಅಸೋಸಿಯೇಷನ್' ಇಂಜಿನಿಯರಿಂಗ್ ಕ್ಷೇತ್ರದ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುತ್ತಿದೆ. ಈ ಬಾರಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಇಂಜಿನಿಯರ್‌ಗಳ ಮಕ್ಕಳನ್ನು ಗೌರವಿಸಿದೆ.

ಜಾದೂಗಾರ ಉದಯ ಅವರ 'ಮ್ಯಾಜಿಕ್ ಶೋ 'ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರೇಕ್ಷಕರ ಗಮನ ಸೆಳೆಯಿತು. 

ಯತೀಶ್ ಹಾಗೂ ಮಹೇಂದ್ರ ನಿರೂಪಿಸಿದರು. ಸಮಾರಂಭದ ಯಶಸ್ಸಿಗೆ ಮಹೇಶ್ ಮರಾಟೆ, ಪ್ರದೀಪ್ ಯಲಸಂಗಿಕರ, ಸನ್ನಿ ಸಾಮೂವಲ್, ರಾಜು, ಸುರೇಶ್ ಬಾಪಾಟ್, ಪ್ರಶಾಂತ್ ನಂದಿತಾಲೇ ಮತ್ತು ಸಂಜಯ್ ಮೆಮೋರಿಯಲ್ ಪಾಲಿಟೆಕ್ನಿಕ್‌ನ ಹಳೆಯ ವಿದ್ಯಾರ್ಥಿಗಳು ಸಹಕರಿಸಿದರು.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.