Nationwide Bank Strike Postponed: ಗುಡ್‌ನ್ಯೂಸ್.. ಬ್ಯಾಂಕ್ ಬಂದ್ ಇಲ್ಲ

Nationwide Bank Strike Postponed: ಇಂದಿನಿಂದ ಸೆ.30 ರವರೆಗೆ ರಾಷ್ಟ್ರವ್ಯಾಪಿ ನಡೆಯಬೇಕಿದ್ದ 3 ದಿನಗಳ ಕಾಲ ಬ್ಯಾಂಕ್ ಮುಷ್ಕರವನ್ನು ಮುಂದೂಡಲಾಗಿದೆ.

Sep 28, 2026 - 11:33
Sep 28, 2026 - 12:10
Nationwide Bank Strike Postponed: ಗುಡ್‌ನ್ಯೂಸ್.. ಬ್ಯಾಂಕ್ ಬಂದ್ ಇಲ್ಲ

Nationwide Bank Strike Postponed: ಬ್ಯಾಂಕ್ ಗ್ರಾಹಕರಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಇಂದಿನಿಂದ ಸೆ.30 ರವರೆಗೆ ರಾಷ್ಟ್ರವ್ಯಾಪಿ ನಡೆಯಬೇಕಿದ್ದ 3 ದಿನಗಳ ಕಾಲ ಬ್ಯಾಂಕ್ ಮುಷ್ಕರವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. 
 
ನಿನ್ನೆ ರಾತ್ರಿ 9.30ಕ್ಕೆ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ & ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಮಧ್ಯೆ ಜರುಗಿದ ಮಾತುಕತೆ ಯಶಸ್ವಿಯಾಗಿದೆ. ಎಲ್ಲಾ ಶನಿವಾರ ರಜೆ ಪರಿಶೀಲನೆಗೆ ಸಮಿತಿ ರಚನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಭರವಸೆ ನೀಡಲಾಗಿದೆ. ಹೀಗಾಗಿ, ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ. 
 
ಇಂದು ಎಲ್ಲಾ ಬ್ಯಾಂಕ್‌ಗಳು ತೆರೆದಿರಲಿದ್ದು, ನಗದು ವಹಿವಾಟು ಒಳಗೊಂಡಂತೆ ಪ್ರತಿಯೊಂದು ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಲಭ್ಯವಾಗಲಿವೆ. 
 
ಭಾನುವಾರವು ಬ್ಯಾಂಕ್‌ಗಳ ಕಾರ್ಯನಿರ್ವಹಣೆ:
ಮುಷ್ಕರದ ಹಿನ್ನೆಲೆ, ಬ್ಯಾಂಕಿಂಗ್ ಸೇವೆಗಳ ಅಡಚಣೆಯನ್ನು ತಪ್ಪಿಸಲು ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು ಭಾನುವಾರವು ಎಂದಿನಂತೆ ಕಾರ್ಯನಿರ್ವಹಿಸಿದ್ದವು.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.