ದಿನ ಭವಿಷ್ಯ: ಇಂದು ಯಾವ ರಾಶಿಗೆ ಶುಭ ಫಲ?
Daily Horoscope: ಇಂದು (ಶುಕ್ರವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.
ಮೇಷ:
ಎಲ್ಲ ಉದ್ಯೋಗಸ್ಥರು ಹಾಗೂ ಉದ್ಯಮಿಗಳಿಗೂ ಅನುಕೂಲ.. ವಾಹನ ಚಾಲನೆಯಲ್ಲಿ ಎಚ್ಚರ. ಪ್ರಕೃತಿಯ ಜೊತೆಯಲ್ಲಿ ಸಾಮರಸ್ಯದಿಂದ ಆನಂದ. ಮಹಾಪುರುಷರ ದರ್ಶನಯೋಗ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಿ. ಗಣೇಶ ದ್ವಾದಶನಾಮ ಸ್ತೋತ್ರ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.
ವೃಷಭ:
ವೈಯಕ್ತಿಕ-ಸಾಮಾಜಿಕ ರಂಗಗಳಲ್ಲಿ ಸಮತೋಲನ.. ಉದ್ಯೋಗ ಸ್ಥಾನದಲ್ಲಿ ಪ್ರತಿಭೆಗೆ ಗೌರವ.. ಗೃಹೋದ್ಯಮದ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಳ. ವೃತ್ತಿಪರರಿಗೆ ಸಮಯದ ಸವಾಲು. ಕುಟುಂಬದಲ್ಲಿ ಸಾಮರಸ್ಯ ವೃದ್ಧಿ. ಗಣೇಶ ಕಬಚ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಗುರುಸ್ತೋತ್ರ ಓದಿ.
ಮಿಥುನ:
ಕಾಲಕ್ಕೆ ತಕ್ಕ ಕೋಲ ಎಂಬುದು ನೆನಪಿರಲಿ.. ಉದ್ಯಮಿಗಳ ಪಾಲಿಗೆ ಒಳ್ಳೆಯ ದಿನ ಅಕಸ್ಮಾತ್ ಧನಲಾಭ ಸಂಭವ. ಎಳೆಯರ ಮನೋವಿಕಾಸಕ್ಕೆ ಸೂಕ್ತ ಪ್ರಯತ್ನ. ದಂಪತಿಗಳ ನಡುವೆ ಹೊಂದಾಣಿಕೆ ಇರಲಿ. ಗಣೇಶ ಅಷ್ಟಕ, ಬಿಲ್ವಾಷ್ಟಕ, ಮಹಿಷಮರ್ದಿನಿ ಸ್ತೋತ್ರ ಓದಿ.
ಕರ್ಕಾಟಕ:
ಬದುಕಿನಲ್ಲಿ ಸ್ವಲ್ಪ ಹಿತಾನುಭವ.. ಉದ್ಯೋಗ ಸ್ಥಾನದಲ್ಲಿ ಸೌಹಾರ್ದ ವಾತಾವರಣ. ಖಾದಿ ಉದ್ಯಮ ಬೆಳೆಸಲು ಆಸಕ್ತಿ. ತಾಯಿಯ ಆರೋಗ್ಯ ಗಮನಿಸಿ. ಭಜನೆ, ಹರಿಕಥೆ, ಸತ್ಸಂಗಗಳ ಕಡೆಗೆ ಸೆಳೆತ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಭುಗ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
ಸಿಂಹ:
ಉದ್ಯೋಗ, ವ್ಯವಹಾರಗಳಲ್ಲಿ ಜಯಭೇರಿ.. ವಸ್ತ್ರ, ಆಭರಣಾದಿ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ವ್ಯಾಪಾರ. ದ್ವಿಚಕ್ರ ವಾಹನ ದುರಸ್ತಿಗಾರರಿಗೆ ಅಧಿಕ ಲಾಭ. ಸಂಸಾರದಲ್ಲಿ ಸಾಮರಸ್ಯ ವೃದ್ಧಿ. ವ್ಯವಹಾರ ಸಂಬಂಧ ತಿರುಗಾಟದ ಸಾಧ್ಯತೆ. ಗಣೇಶ ಕವಚ, ದತ್ತಪಂಜರ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
ಕನ್ಯಾ:
ಉನ್ನತವಾದ ಗುರಿಗಳಿರಲಿ.. ಕೃಷಿ ಆಧಾರಿತ ಉದ್ಯಮಗಳಿಗೆ ಅನುಕೂಲದ ದಿನ. ಗೃಹೋಪಕರಣ ಖರೀದಿಗೆ ಧನವ್ಯಯ. ಹೊಲಿಗೆ ಕೆಲಸ ಬಲ್ಲವರಿಗೆ ಉದ್ಯೋಗಾವಕಾಶ. ವಾಹನ ಚಾಲನೆಯಲ್ಲಿ ಎಚ್ಚರ.ಗಣೇಶ ದ್ವಾದಶನಾಮ ಸ್ತೋತ್ರ, ರಾಮರಕ್ಷಾ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.
ತುಲಾ:
ಬುದ್ಧಿವಂತಿಕೆಯಿಂದ ನಡೆದುಕೊಂಡರೆ ಜಯ.. ಕಸೂತಿ, ಕರಕೌಶಲದ ಕೆಲಸಗಳನ್ನು ಬಲ್ಲವರಿಗೆ ಬೇಡಿಕೆ. ಮಕ್ಕಳ ಬಹುಮುಖ ಪ್ರತಿಭೆ ಬೆಳವಣಿಗೆಗೆ ಪ್ರೋತ್ಸಾಹ. ಇಷ್ಟದೇವರ ದರ್ಶನದಿಂದ ಹರ್ಷ. ಸಾಹಿತ್ಯ ಅಧ್ಯಯನಕ್ಕೆ ಸಮಯ ನೀಡಿಕೆ. ಗಣೇಶ ಕವಚ, ನರಸಿಂಹ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.
ವೃಶ್ಚಿಕ:
ಹೆಜ್ಜೆ ಹಿಂದಿಡುವ ಪ್ರಶ್ನೆಯೇ ಇಲ್ಲ.. ಒಂದಿಲ್ಲೊಂದು ಬಗೆಯ ಹವ್ಯಾಸ ಬೆಳೆಸಿಕೊಳ್ಳುವ ಪ್ರಯತ್ನ. ಗೃಹೋದ್ಯಮ ಉತ್ಪನ್ನಗಳಿಗೆ ಹೊಸ ಗಿರಾಕಿಗಳು. ಉದ್ಯೋಗ ಅರಸುವ ಶಿಕ್ಷಿತರಿಗೆ ಮಾರ್ಗದರ್ಶನ. ನಿವೃತ್ತಿ ಜೀವನಕ್ಕೆ ಮುದನೀಡುವ ಸನ್ನಿವೇಶ. ಸಂಕಷ್ಟನಾಶನ ಗಣೇಶ ಸ್ತೋತ್ರ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
ಧನು:
ಏನಾದರೊಂದು ಸೇವೆ ಮಾಡುವ ಹಂಬಲ.. ಉದ್ಯೋಗಸ್ಥರ ನಡುವೆ ಪರಸ್ಪರ ಸಹಕಾರ. ಸಣ್ಣ ಗೃಹೋದ್ಯಮಗಳಿಗೆ ಶುಕ್ರದೆಶೆ. ಉದ್ಯೋಗಾಸಕ್ತರಿಗೆ ಯೋಗ್ಯ ಅವಕಾಶ. ಕರಕುಶಲ ಸಾಮಗ್ರಿ ತಯಾರಕರಿಗೆ ಪ್ರೋತ್ಸಾಹ. ಗಣೇಶ ಅಷ್ಟೋತ್ತರ ಶತನಾಮ ಸ್ತೋತ್ರ, ವಿಷ್ಣು ಸಹಸ್ರನಾಮ, ಗುರುಸ್ತೋತ್ರ ಓದಿ.
ಮಕರ:
ಹಿರಿಯರಿಂದ ಸೂಕ್ತ .ಮಾರ್ಗದರ್ಶನ.. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ. ಮಕ್ಕಳ ಜ್ಞಾನವೃದ್ಧಿಗೆ ವಿಶೇಷ ಪ್ರಯತ್ನ.ಅಸಹಾಯಕರಿಗೆ ನೆರವಾಗುವ ಅವಕಾಶ. ಬಂಧುಗಳೊಂದಿಗೆ ಸಂತೋಷ ಕೂಟದ ಸಾಧ್ಯತೆ. ಗಣೇಶ ಕವಚ, ದತ್ತಪಂಜರ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
ಕುಂಭ:
ಪಾರದರ್ಶಕತೆಯಿದ್ದರೆ ಪಾಲುದಾರಿಕೆ ಅಡ್ಡಿಯಿಲ್ಲ.. ಉದ್ಯೋಗಸ್ಥರಿಗೆ ಸತ್ವಪರೀಕ್ಷೆಯಲ್ಲಿ ಜಯ. ವೃತ್ತಿರಂಗದ ಮಿತ್ರರಿಂದ ಸಹಾಯಕ್ಕೆ ಕೋರಿಕೆ. ಗ್ರಾಹಕರ ವಿಶ್ವಾಸ ಉಳಿಸುವ ಪ್ರಯತ್ನ. ಅವಿವಾಹಿತ ಹುಡುಗರಿಗೆ ವಿವಾಹ ಯೋಗ. ಗಣೇಶ ಅಷ್ಟಕ, ವೆಂಕಟೇಶ್ವರ ಸ್ತೋತ್ರ, ಶನಿಮಹಾತ್ಮೆ ಓದಿ.
ಮೀನ:
ಸ್ವಲ್ಪಮಟ್ಟಿನ ಆರಾಮದ ಅನುಭವ.. ಪ್ರಭಾವಿ ವ್ಯಕ್ತಿಯ ನೆರವಿನ ಭರವಸೆ. ಭೂಮಿ ವ್ಯವಹಾರ ಮತ್ತೆ ಆರಂಭ. ಗುರುಸಮಾನ ವ್ಯಕ್ತಿಯ ಆಗಮನ. ವ್ಯವಹಾರ ಸಂಬಂಧ ಪ್ರಯಾಣದ ಸಾಧ್ಯತೆ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.