ಬಡ ಹುಡುಗಿಯ ಕ್ರೀಡಾ ಸಾಧನೆಗೆ ಗೌರವ: ರೂ.5 ಲಕ್ಷ ಪ್ರೋತ್ಸಾಹಧನ

Dr.G.Parameshwara: ಪೋಲ್ ವಾಲ್ಟ್ ಕ್ರೀಡೆಯಲ್ಲಿ ಸಿಂಧುಶ್ರೀ ಗಣೇಶ್ ಅಮೋಘ ಸಾಧನೆ ಮಾಡಿದ್ದು, ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್‌ ಗೇಮ್ಸ್‌ಗೂ ಆಯ್ಕೆಯಾಗಿದ್ದಾರೆ. ಅವರಿಗೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅಂತರರಾಷ್ಟ್ರೀಯ ಗುಣಮಟ್ಟದ 3 ಪೋಲ್‌ಗಳನ್ನು ವಿತರಿಸಿದರು.

Jul 24, 2026 - 16:48
ಬಡ ಹುಡುಗಿಯ ಕ್ರೀಡಾ ಸಾಧನೆಗೆ ಗೌರವ: ರೂ.5 ಲಕ್ಷ ಪ್ರೋತ್ಸಾಹಧನ

ಬೆಂಗಳೂರು: ಪೋಲ್ ವಾಲ್ಟ್ ಕ್ರೀಡೆಯಲ್ಲಿ ಸಿಂಧುಶ್ರೀ ಗಣೇಶ್ ಅಮೋಘ ಸಾಧನೆ ತೋರಿದ್ದು, ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್‌ ಗೇಮ್ಸ್‌ಗೂ ಆಯ್ಕೆಯಾಗಿದ್ದಾರೆ. ಅವರಿಗೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ (Dr.G.Parameshwara) ಅಂತರರಾಷ್ಟ್ರೀಯ ಗುಣಮಟ್ಟದ 3 ಪೋಲ್‌ಗಳನ್ನು ವಿತರಿಸಿದರು.

ಆ ಬಳಿಕ  ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಸಿಂಧುಶ್ರೀ ಪೋಲ್ ವಾಲ್ಟ್ ಕ್ರೀಡೆಯಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಅವರಿಗೆ ರಾಜ್ಯ ಕ್ರೀಡಾ‌ ಇಲಾಖೆ ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರದಿಂದ ಅಂತರರಾಷ್ಟ್ರೀಯ ಗುಣಮಟ್ಟದ 3 ಹೊಸ ಪೋಲ್‌ಗಳನ್ನು ವಿದೇಶದಿಂದ ತರಿಸಿ ಕೊಡಲಾಗಿದೆ. ಅದರೊಂದಿಗೆ ರೂ.5 ಲಕ್ಷ ಹಣವನ್ನು ನೀಡುತ್ತಿದ್ದೇವೆ ಎಂದು ಹೇಳಿದರು. 

ಕೂಲಿ‌ ಕಾರ್ಮಿಕರಾಗಿದ್ದ ಗಣೇಶ್ ಅವರಿಗೆ ತಮ್ಮ ಪುತ್ರಿಯನ್ನು ಕ್ರೀಡಾಪಟುವನ್ನಾಗಿ ಮಾಡುವ ಆಸೆಯಿತ್ತು. ಅದಕ್ಕಾಗಿ ಚೆನ್ನಾಗಿ ತರಬೇತಿ ಕೊಡಿಸುತ್ತಾರೆ.‌ ಆ ಬಳಿಕ ಕ್ರೀಡಾಸಕ್ತಿದಾರರು ಗಮನಿಸಿ, ಚೆನ್ನಾಗಿ ಓಡುತ್ತೀಯ‌. ಬೆಂಗಳೂರಿನಲ್ಲಿ ತರಬೇತಿ ಪಡೆಯುವಂತೆ ಹೇಳಿ ಆಕೆಯನ್ನು ಕಳುಹಿಸಿಕೊಡುತ್ತಾರೆ. ಇಲ್ಲಿ ಪೋಲೋ ವಾಲ್ಟ್‌ಗೆ ಸಿದ್ಧರಾಗುತ್ತಾರೆ. ಸ್ಪೋರ್ಟ್ಸ್ ಆಥಾರಿಟಿ ಆಫ್ ಇಂಡಿಯಾದಿಂದ ತರಬೇತಿ ಪಡೆದುಕೊಂಡಿದ್ದು, ಏಷ್ಯನ್ ಗೇಮ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಭಾರತವನ್ನು ಪ್ರತಿನಿಧಿಸಲಿದ್ದಾರೆ‌ ಎಂದು ವಿವರಿಸಿದರು. 

ಯುವತಿಯ ತಂದೆ ಗಣೇಶ್, ಈಗ ನಮ್ಮೊಂದಿಗಿಲ್ಲ. ಆದರೆ ತಂದೆಯ ಆಸೆಯನ್ನು ಸಿಂಧುಶ್ರೀ ಪೂರೈಸಿದ್ದಾರೆ. ತಾಯಿ ಮನೆ ಕೆಲಸ ಮಾಡಿ, ಪುತ್ರಿಯನ್ನು ಪ್ರೋತ್ಸಾಹಿಸಿದ್ದಾರೆ. ಬಡ ಕುಟುಂಬದ ಈ ಹೆಣ್ಣು ಮಗಳಿಗೆ ಶುಭವಾಗಲಿ. ಏಷ್ಯನ್ ಗೇಮ್ಸ್‌ನಲ್ಲಿ ಸಾಧನೆ ಮಾಡಿ, ದೇಶಕ್ಕೆ ಪದಕ ತಂದು, ನಮ್ಮ ನಾಡಿಗೆ ಕೀರ್ತಿ ಹೆಚ್ಚಿಸಲಿ ಎಂದು ಶುಭ ಹಾರೈಸಿದರು.

ಯವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಹಾಗೂ ಆಯುಕ್ತ ಎಂ.ಎನ್.ಅನುಚೇತ್ ಇತರರು ಇದ್ದರು.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.