IND vs ZIM: ಇಂದು ಮೊದಲ ಟಿ20 ಪಂದ್ಯ

IND vs ZIM: ಭಾರತವು ಜಿಂಬಾಬ್ವೆ ಪ್ರವಾಸದಲ್ಲಿದ್ದು, ಹರಾರೆ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ 3 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಇಂದು (ಜು.23) ಮೊದಲ ಪಂದ್ಯ ಆಯೋಜನೆಗೊಂಡಿದೆ.

Jul 23, 2026 - 09:16
Jul 23, 2026 - 09:16
IND vs ZIM: ಇಂದು ಮೊದಲ ಟಿ20 ಪಂದ್ಯ

ಭಾರತವು ಜಿಂಬಾಬ್ವೆ ಪ್ರವಾಸದಲ್ಲಿದ್ದು, ಹರಾರೆ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ 3 ಪಂದ್ಯಗಳ ಟಿ20 (T20) ಸರಣಿಯನ್ನು ಆಡಲಿದೆ. ಇಂದು (ಜು.23) ಮೊದಲ ಪಂದ್ಯ ಆಯೋಜನೆಗೊಂಡಿದೆ. ಸಂಜೆ 4:30ಕ್ಕೆ (ಭಾರತೀಯ ಕಾಲಮಾನ) ಶುರುವಾಗಲಿದೆ.

ಟೀಂ ಇಂಡಿಯಾ ಐರ್ಲೆಂಡ್ ಎದುರಿಗೆ ಟಿ20 ಸರಣಿಯನ್ನು 2-0 ಅಂತರದಲ್ಲಿ ಸೋತಿದೆ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು 4-0 ಅಂತರದಿಂದ ಪರಾಭವಗೊಂಡಿದೆ. ಹೀಗಾಗಿ, ಈ ಸರಣಿಗೆ ಹೆಚ್ಚಿನ ಮಹತ್ವ ಬಂದಿದೆ. ಭಾರತ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನೆಡೆಸುತ್ತಿದ್ದಾರೆ. ಈ ಪ್ರವಾಸದಲ್ಲಿ ಮುಖ್ಯ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ನೇಮಕಗೊಂಡಿದ್ದಾರೆ. ಬಹುತೇಕ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. 

ಸಂಭಾವ್ಯ ಪ್ಲೇಯಿಂಗ್ 11: 

ಭಾರತ: ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಶ್ರೇಯಸ್ ಅಯ್ಯರ್ (ನಾಯಕ), ಇಶಾನ್ ಕಿಶನ್, ತಿಲಕ್ ವರ್ಮಾ, ರಿಂಕು ಸಿಂಗ್, ಶಿವಂ ದುಬೆ, ಹರ್ಷ್ ದುಬೆ/ ರವಿ ಬಿಷ್ಣೋಯಿ, ಮಯಾಂಕ್ ಯಾದವ್, ಅಶೋಕ್ ಶರ್ಮಾ & ಪ್ರಿನ್ಸ್ ಯಾದವ್.

ಜಿಂಬಾಬ್ವೆ: ಸಿಕಂದ‌ರ್ ರಜಾ (ನಾಯಕ), ಬ್ರಿಯಾನ್ ಬೆನೆಟ್, ರಯಾನ್ ಬರ್ಲ್, ತನಾಕ ಚಿವಾಂಗ, ಬೆನ್ ಕರನ್, ಬ್ರಾಡ್ ಇವಾನ್ಸ್, ವೆಸ್ಲಿ ಮಧೆವೆರೆ, ತಸಿವನಾಶೆ ಮರುಮಣಿ, ವೆಲ್ಡಿಂಗ್ಟನ್ ಮಸಕದ್ವಾ, ಬ್ಲೆಸಿಂಗ್ ಮುಝರಾಬಾನಿ, ಡಿಯಾನ್ ಮೈರ್ಸ್, ರಿಚಾರ್ಡ್ ಎನ್ಗವಾರ, ನೆಲ್ಮನ್ ನ್ಯಾಮ್‌ಹುರಿ, ಮಿಲ್ಟನ್‌ ಶುಂಬಾ & ತಫದ್‌ಜ್ಜಾ ಸಿಗಾ.