Vanatvam: ಸುವರ್ಣ ರಿಯಲ್ಟಿ ಎಕ್ಸ್‌ಪೋ.. ವನತ್ವಂ ಸ್ಟಾಲ್‌ಗೆ ನಟ ನೀನಾಸಂ ಸತೀಶ್ ಭೇಟಿ

Vanatvam: ಏಷ್ಯಾನೆಟ್ ಸುವರ್ಣ ನ್ಯೂಸ್ & ಕನ್ನಡಪ್ರಭ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ 'ಪ್ರಾಪರ್ಟಿ ಆ್ಯಂಡ್ ಲೈಫ್‌ಸ್ಟೈಲ್ ಎಕ್ಸ್‌ಪೋ-2026'ರಲ್ಲಿ ನಟ ನೀನಾಸಂ ಸತೀಶ್ ಭಾಗವಹಿಸಿದ್ದು, ವನತ್ವಂ ಸ್ಟಾಲ್‌ಗೆ ಭೇಟಿ ನೀಡಿದರು.

Aug 14, 2026 - 12:26
Aug 14, 2026 - 12:57
Vanatvam: ಸುವರ್ಣ ರಿಯಲ್ಟಿ ಎಕ್ಸ್‌ಪೋ.. ವನತ್ವಂ ಸ್ಟಾಲ್‌ಗೆ ನಟ ನೀನಾಸಂ ಸತೀಶ್ ಭೇಟಿ

ಬೆಂಗಳೂರು: ಏಷ್ಯಾನೆಟ್ ಸುವರ್ಣ ನ್ಯೂಸ್ & ಕನ್ನಡಪ್ರಭ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ 'ಪ್ರಾಪರ್ಟಿ ಆ್ಯಂಡ್ ಲೈಫ್‌ಸ್ಟೈಲ್ ಎಕ್ಸ್‌ಪೋ-2026'ಗೆ ನಟ ನೀನಾಸಂ ಸತೀಶ್ (Ninasam Satish) ಚಾಲನೆ ನೀಡಿದರು. 

ನಾಯಂಡಹಳ್ಳಿಯ ನಂದಿ ಲಿಂಕ್ ಗ್ರೌಂಡ್‌ನಲ್ಲಿ ಇಂದಿನಿಂದ ಆಗಸ್ಟ್ 16 ರವರೆಗೆ 3 ದಿನಗಳ ಕಾಲ ಎಕ್ಸ್‌ಪೋ ನಡೆಯಲಿದೆ.

ಎಕ್ಸ್‌ಪೋದಲ್ಲಿ ಬೆಂಗಳೂರಿನ ಪ್ರತಿಷ್ಠಿತ ವನತ್ವಂ (Vanatvam) ಸಂಸ್ಥೆ ಭಾಗವಹಿಸಿದ್ದು, ವಿಶಿಷ್ಟ ಫಾರ್ಮ್‌ಲ್ಯಾಂಡ್ ಪರಿಕಲ್ಪನೆಯನ್ನು ಸಾರ್ವಜನಿಕರಿಗೆ ಪರಿಚಯಿಸುತ್ತಿದೆ. 

ಪ್ರಕೃತಿ ಮಡಿಲಿನಲ್ಲಿ ನೆಮ್ಮದಿಯ ಬದುಕು ಹಾಗೂ ಹೂಡಿಕೆಗೆ ಅವಕಾಶ ಕಲ್ಪಿಸುವ 'ವನತ್ವಂ'ನ ಆಶಯದ ಕುರಿತು ಎಕ್ಸ್‌ಪೋಗೆ ಆಗಮಿಸುವವರು ಮಾಹಿತಿ ಪಡೆಯಬಹುದಾಗಿದೆ.

ಈ ಎಕ್ಸ್‌ಪೋ ಉದ್ಘಾಟನೆಯ ಬಳಿಕ, ನಟ ನೀನಾಸಂ ಸತೀಶ್ ಹಾಗೂ ಕನ್ನಡಪ್ರಭ & ಸುವರ್ಣ ನ್ಯೂಸ್‌ನ ಪ್ರಧಾನ ಸಂಪಾದಕ ರವಿ ಹೆಗಡೆ ಅವರು 'ವನತ್ವಂ ಸ್ಟಾಲ್‌'ಗೆ ಭೇಟಿ ನೀಡಿ, ಸಂಸ್ಥೆಯ ಫಾರ್ಮ್‌ಲ್ಯಾಂಡ್ ಬಗ್ಗೆ ಮಾಹಿತಿ ಪಡೆದುಕೊಂಡರು.

ಎಕ್ಸ್‌ಪೋದಲ್ಲಿ ಪ್ರಮುಖ ಬಿಲ್ಡರ್‌ಗಳು, ಡೆವಲಪರ್‌ಗಳು, ಬ್ಯಾಂಕ್‌ಗಳು ಮತ್ತು ಬಿಡಿಎ ಸೇರಿದಂತೆ ವಿವಿಧ ಸಂಸ್ಥೆಗಳು ಪಾಲ್ಗೊಂಡಿವೆ. ಮನೆ, ನಿವೇಶನ, ವಿಲ್ಲಾ, ರಿಯಲ್ ಎಸ್ಟೇಟ್ ಹೂಡಿಕೆ, ಗೃಹ ಸಾಲ ಹಾಗೂ ಕಾನೂನು ಸಲಹೆ ಸೇರಿದಂತೆ ಆಸ್ತಿ ಖರೀದಿ, ಹೂಡಿಕೆಗೆ ಸಂಬಂಧಿಸಿದ ಸಮಗ್ರ ವಿವರಗಳು ಒಂದೇ ಸೂರಿನಡಿ ಲಭ್ಯವಾಗಲಿದೆ. ಸಾರ್ವಜನಿಕರಿಗೆ ಎಕ್ಸ್‌ಪೋಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.