ರಾಜ್ಯಮಟ್ಟದ ಅಥ್ಲೆಟಿಕ್ಸ್: ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆ
State Level Athletics: ಕಲಬುರಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಈಚೆಗೆ ವಿದ್ಯಾಭಾರತಿ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ ಜರುಗಿತು. ಬಪ್ಪಳಿಗೆಯ ಅಂಬಿಕಾ ವಿದ್ಯಾಲಯದ ಕ್ರೀಡಾಪಟುಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಹಲವು ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದು, ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ಪುತ್ತೂರು: ಕಲಬುರಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಈಚೆಗೆ ವಿದ್ಯಾಭಾರತಿ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ ಜರುಗಿತು. ಬಪ್ಪಳಿಗೆಯ ಅಂಬಿಕಾ ವಿದ್ಯಾಲಯದ ಕ್ರೀಡಾಪಟುಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಹಲವು ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದು, ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ಈ ಕ್ರೀಡಾಕೂಟದಲ್ಲಿ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳ ವಿವರ:
ದೀಪಾಂಶ್ ಶೆಟ್ಟಿ: ಬಾಲ ವರ್ಗದ ಬಾಲಕರ ವಿಭಾಗದ 600 ಮೀ. ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಪುತ್ತೂರಿನ ಉಲಾರ್ಂಡಿ ನಿವಾಸಿ ಮಹೇಶ್ ಶೆಟ್ಟಿ ಹಾಗೂ ಸುಕನ್ಯಾ ಕೆ ಶೆಟ್ಟಿ ದಂಪತಿಗಳ ಪುತ್ರರಾಗಿದ್ದು, 8ನೇ ಓದುತ್ತಿದ್ದಾರೆ.
ಆರಾಧ್ಯ ಗಣೇಶ್: ಎತ್ತರ ಜಿಗಿತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದು, ಬೆಳ್ಳಿ ಪದಕ ಜಯಿಸಿದ್ದಾರೆ. ವಿಟ್ಲ ನೀರಕಣಿಯ ಸುನಿಲ್ ರಾಜ್ ಮತ್ತು ಬಿ.ಬಿ.ವಿದ್ಯಾ ದಂಪತಿಗಳ ಪುತ್ರರಾಗಿದ್ದು, 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಆರುಷಿ ಎನ್: ಕಿಶೋರ ವರ್ಗದ ಬಾಲಕಿಯರ ಈಟಿ ಎಸೆತ (ಜಾವೆಲಿನ್ ಥ್ರೋ) ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಪುತ್ತೂರು ತೆಂಕಿಲದ ಕೃಷ್ಣ ನಾಯ್ಕ ಹಾಗೂ ರಮ್ಯಾ ಕೃಷ್ಣ ದಂಪತಿಯ ಪುತ್ರಿಯಾಗಿದ್ದು, 10ನೇ ತರಗತಿಯಲ್ಲಿ ಓದುತ್ತಿದ್ದಾರೆ.
ಈ ಮೂವರು ವಿದ್ಯಾರ್ಥಿಗಳು ದಕ್ಷಿಣ ಕ್ಷೇತ್ರ (South Zone) ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ತೃತೀಯ ಸ್ಥಾನ ಪಡೆದಿ ಕ್ರೀಡಾಪಟುಗಳು:
ಬಿ.ತ್ರಿಷಾ: 400 ಮೀಟರ್ ಅಡೆತಡೆ ಓಟ (ಹರ್ಡಲ್ಸ್), 110 ಮೀಟರ್ ಅಡೆತಡೆ ಓಟ ಹಾಗೂ 4x400 ಮೀಟರ್ ರಿಲೇಯಲ್ಲಿ ತೃತೀಯ ಸ್ಥಾನ ಗಳಿಸಿದ್ದು, ಮೂರು ಪದಕಗಳಿಗೆ ಭಾಜನರಾಗಿದ್ದಾರೆ. ನೆಲ್ಲಿಕಟ್ಟೆಯ ಜನಾರ್ದನ ಗೌಡ ಹಾಗೂ ಶಾರದಾ ದಂಪತಿ ಪುತ್ರಿಯಾಗಿದ್ದು, 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
4x400 ಮೀಟರ್ ರಿಲೇ ತಂಡ: ಈ ಸ್ಪರ್ಧೆಯಲ್ಲಿ ಬಿ.ತ್ರಿಷಾ ಅವರೊಂದಿಗೆ 10ನೇ ತರಗತಿಯ ಶ್ರದ್ಧಾ ಕೆ ಕಟ್ಟಾಟ್ (ಉತ್ತಮ ಕೆ ಹಾಗೂ ಶ್ರುತಿ ಕೆ ದಂಪತಿ ಪುತ್ರಿ), 10ನೇ ತರಗತಿಯ ಆದಿತಿ ಎನ್ ಶೆಟ್ಟಿ (ನವೀನ್ ಕುಮಾರ್ ಮತ್ತು ವಿಜಯ ಎನ್ ದಂಪತಿಯ ಪುತ್ರಿ) & 9ನೇ ತರಗತಿಯ ನಿಹಾರಿಕಾ ಕೆ.ಎಸ್ (ಸುನಿಲ್ ರಾಜ್ ಹಾಗೂ ಬಿ.ಬಿ.ವಿದ್ಯಾ ದಂಪತಿಯ ಪುತ್ರಿ) ಭಾಗವಹಿಸಿದ್ದು, ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಸಂಸ್ಥೆಯ ಶಾಲಾ ದೈಹಿಕ ಶಿಕ್ಷಕರಾದ ಸಂತೋಷ್ ಮತ್ತು ಸುಚಿತ್ರ ಅವರು ವಿದ್ಯಾರ್ಥಿಗಳಿಗೆ, ಸೂಕ್ತ ತರಬೇತಿ ನೀಡಿದ್ದಾರೆ. ವಿದ್ಯಾರ್ಥಿಗಳ ಈ ಕ್ರೀಡಾ ಸಾಧನೆಯನ್ನು ಶಾಲೆಯ ಆಡಳಿತ ಮಂಡಳಿ, ಶಿಕ್ಷಕ ವೃಂದ ಹಾಗೂ ಪೋಷಕರು ಅಭಿನಂದಿಸಿದ್ದಾರೆ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.