ದಿನ ಭವಿಷ್ಯ

19-11-2025

Nov 19, 2025 - 15:48
ದಿನ ಭವಿಷ್ಯ


ಜ್ಯೋತಿರ್ಮಯ.               

ಅದೃಷ್ಟ ಸಂಖ್ಯೆ 1

೧. ಮೇಷ:

 ಉದ್ಯೋಗದಲ್ಲಿ ಜವಾಬ್ದಾರಿಗಳ ಮರುಹೊಂದಾಣಿಕೆ. ಸಮಯಕ್ಕೆ ತಕ್ಕಂತೆ ಸ್ಪಂದಿಸುವುದು ವಿಹಿತ. ಸರಕಾರಿ ಉದ್ಯೋಗಸ್ಥರಿಗೆ  ಸವಾಲಿನ ಸನ್ನಿವೇಶ. ಸಣ್ಣ ಉದ್ಯಮಿಗಳಿಗೆ  ಸಮಾಧಾನ. ಮಕ್ಕಳಿಗೆ ಕಲಿಕೆಯಲ್ಲಿ ಉತ್ಸಾಹ ವೃದ್ಧಿ. ಗಣೇಶ ಕವಚ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಶನಿಮಹಾತ್ಮೆ ಓದಿ.


೨.ವೃಷಭ:
      ಸಿದ್ಧ ಉಡುಪುಗಳು ಹಾಗೂ ವಸ್ತ್ರ ಉದ್ಯಮಕ್ಕೆ ಲಾಭ.  ವೃತ್ತಿಪರಿಣತರಿಗೆ  ಉದ್ಯೋಗಾವಕಾಶ. ವಾಹನ ದುರಸ್ತಿ ಮಾಡುವವರಿಗೆ ಅನುಕೂಲದ ದಿನ. ಕುಟುಂಬದಲ್ಲಿ ಸಾಮರಸ್ಯ ವೃದ್ಧಿ.  ಎಲ್ಲರಿಗೂ ಉತ್ತಮ ಆರೋಗ್ಯ ಭಾಗ್ಯ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಭುಜಂಗಸ್ತೋತ್ರ, ಆಂಜನೇಯ ಸ್ತೋತ್ರ ಓದಿ.

೩.ಮಿಥುನ:
  ಯೋಜನೆಗಳಿಗೆ   ಕಾರ್ಯರೂಪ ನೀಡಿಕೆ ಆರಂಭ.  ಹುದ್ದೆ ಖಾಯಂ ಮಾಡಿಕೊಳ್ಳುವ ಪ್ರಯತ್ನ ಸಫಲ. ಹಳೆಯ ಗೆಳೆಯ ಮತ್ತೆ ಸಂಪರ್ಕಕ್ಕೆ. ಯುವಜನರಿಗೆ ವೃತ್ತಿಪರ ಶಿಕ್ಷಣ ಆಯೋಜನೆ.  ಆರೋಗ್ಯ ವೃದ್ಧಿಯಿಂದ ನೆಮ್ಮದಿ. ಗಣೇಶ ಅಷ್ಟಕ, ನರಸಿಂಹ ಕವಚ, ದೇವೀಸ್ತೋತ್ರ ಓದಿ.


೪. ಕರ್ಕಾಟಕ:

  ಎಣಿಸಿದ್ದಕ್ಕಿಂತ ಸುಲಭವಾದ ಕಾರ್ಯಸಾಧನೆ. ಉದ್ಯೋಗಸ್ಥರಲ್ಲಿ ಕೆಲವರಿಗೆ ಸ್ಥಾನ ಬದಲಾವಣೆ‌. ಉದ್ಯಮಗಳಿಗೆ ಸರಕಾರಿ ಸಬ್ಸಿಡಿ ಪ್ರಾಪ್ತಿ. ಮಹಿಳೆಯರ ಸ್ವೋದ್ಯೋಗ ಯೋಜನೆಗಳಿಗೆ ಕೀರ್ತಿ. ಅನವಶ್ಯ ಪ್ರಯಾಣದ ಸಾಧ್ಯತೆ. ಗಣೇಶ ಪಂಚರತ್ನ, ವಿಶ್ವನಾಥಾಷ್ಟಕ, ಆದಿತ್ಯ ಹೃದಯ ಓದಿ.


೫.ಸಿಂಹ:

 ಉದ್ಯೋಗಸ್ಥರಿಗೆ ಮೇಲಿನವರ ಪ್ರೋತ್ಸಾಹ.  ಉದ್ಯಮಕ್ಕೆ ನವಚೈತನ್ಯ ನೀಡುವ ಪ್ರಕ್ರಿಯೆ ಆರಂಭ. ಪರಿಣತರ ಸಲಹೆಯಂತೆ ಹೊಸ ಕ್ರಮಗಳು. ಹತ್ತಿರದ ತೀರ್ಥಕ್ಷೇತ್ರಕ್ಕೆ ಸಂದರ್ಶನ. ಕುಟುಂಬದಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ. ಗಣೇಶ ದ್ವಾದಶನಾಮ ಸ್ತೋತ್ರ, ವಿಷ್ಣು ಸಹಸ್ರನಾಮ, ಹನುಮಾನ್ ಚಾಲೀಸಾ ಓದಿ.

೬. ಕನ್ಯಾ:

ಪ್ರತಿಭಾವಂತರಿಗೆ ಸ್ಥಾನಗೌರವ.  ಸಣ್ಣ ಉದ್ಯಮ ಘಟಕದ ಪ್ರಗತಿಗೆ ಸವಾಲುಗಳು. ಅವಿವಾಹಿತ ಪುತ್ರನಿಗೆ  ವಿವಾಹ ನಿಶ್ಚಯ. ದೂರದೇಶದಲ್ಲಿರುವ ಬಂಧುಗಳಿಂದ ಶುಭವಾರ್ತೆ. ಹಳೆಯ ಸ್ನೇಹಿತನಿಂದ ಪಾಲುದಾರಿಕೆ ವ್ಯವಹಾರ ಪ್ರಸ್ತಾವ.


೭.ತುಲಾ:

ಮಿತ್ರರಾಗಿ ಬದಲಾದ ಹಳೆಯ ಶತ್ರುಗಳು.  ಉತ್ಪಾದನಾ ಕ್ಷೇತ್ರದಲ್ಲಿ ಪೈಪೋಟಿ ಶಮನ. ಉದ್ಯೋಗಾಪೇಕ್ಷಿಗಳಿಗೆ ಅನುಕೂಲ ವಾತಾವರಣ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ಮಧ್ಯವಯಸ್ಕರ ಆರೋಗ್ಯದ ಕಡೆಗೆ ಗಮನ ಇರಲಿ. ಗಣೇಶ ಅಷ್ಟೋತ್ತರ ಶತನಾಮ ಸ್ತೋತ್ರ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

೮. ವೃಶ್ಚಿಕ:

ನಿಕಟ ಭವಿಷ್ಯದಲ್ಲಿ ಯಾವುದೇ ತೊಂದರೆಯ ಸೂಚನೆಯಿಲ್ಲ. ಉದ್ಯೋಗಸ್ಥರಿಗೆ ಒಂದು ಬಗೆಯ ನಿಶ್ಚಿಂತೆ. ಸರಕಾರಿ ಅಧಿಕಾರಿಗಳಿಗೆ ಕೊಂಚ ಕಿರಿಕಿರಿ. ರಾಜಕಾರಣಿಗಳಿಗೆ ಅನಿಶ್ಚಿತ ಪರಿಸ್ಥಿತಿ. ವಸ್ತ್ರ, ಆಭರಣ, ಗೃಹೋಪಯೋಗಿ ಸಾಮಗ್ರಿಗಳ ವ್ಯಾಪಾರಿಗಳಿಗೆ ಲಾಭ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.


೯. ಧನು:

 ಎಡೆಬಿಡದ ಪ್ರಯತ್ನದಿಂದ ವಾತಾವರಣ ಶುದ್ಧಿ. ಉದ್ಯಮದ ವೈವಿಧ್ಯೀಕರಣ ಯೋಜನೆ ಸಫಲ. ಹಿರಿಯ ನಾಗರಿಕರ ಆರೋಗ್ಯ ರಕ್ಷಣೆಗೆ  ಸಹಾಯ. ಮಕ್ಕಳ ಪ್ರತಿಭೆ ವಿಕಸನಕ್ಕೆ  ಪ್ರೋತ್ಸಾಹ. ಆರೋಗ್ಯ ಕಾರ್ಯಕರ್ತರಿಗೆ ಕೆಲಸದ ಒತ್ತಡ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.

೧೦. ಮಕರ:

  ಉದ್ಯೋಗಸ್ಥರಿಗೆ ದಿನಕ್ಕೊಂದು ಬಗೆಯ ಕೆಲಸ. ಹೆಸರು ಕೆಡಿಸುವವರ  ಮಸಲತ್ತಿಗೆ ಸೋಲು. ಉದ್ಯಮಿಗಳಿಗೆ ಹಠಾತ್ ನಷ್ಟವಾಗುವ ಭೀತಿ. ಯಂತ್ರೋಪಕರಣ ಉದ್ಯಮಿಗಳಿಗೆ ಅನುಕೂಲದ ವಾತಾವರಣ. ಹಿರಿಯರನ್ನು ಸಮ್ಮಾನಿಸುವ  ಅವಕಾಶ ಪ್ರಾಪ್ತಿ. ಗಣೇಶ ಕವಚ, ವೇದಸಾರ ಶಿವಸ್ತೋತ್ರ, ಹನುಮಾನ್ ಚಾಲೀಸಾ ಓದಿ.


೧೧.ಕುಂಭ:
  ಕೆಲಸ, ಕಾರ್ಯಗಳು ಕೊನ. ಉದ್ಯೋಗಸ್ಥರಿಗೆ ಹಿತಕರವಾದ ವಾತಾವರಣ. ಸರಕಾರಿ ನೌಕರರಿಗೆ ನಿಶ್ಚಿಂತೆಯ ಅನುಭವ. ಶೇರು ಮಾರುಕಟ್ಟೆಯಲ್ಲಿ ಹೂಡಿಕೆಯಿಂದ ಲಾಭ. ಸಾಹಿತ್ಯ, ಸಂಗೀತ, ನೃತ್ಯಾದಿ ಲಲಿತ ಕಲೆಗಳಲ್ಲಿ ಆಸಕ್ತರಿಗೆ ಹರ್ಷ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.


೧೨. ಮೀನ:

 ಪ್ರೋತ್ಸಾಹಕ ವಾತಾವರಣ ಕಾಣಿಸದಿದ್ದರೂ ಕಾರ್ಯದಲ್ಲಿ ಮುನ್ನಡೆ. ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ. ಇಲಾಖೆಗಳವರಿಂದ ಉತ್ತಮ ಸಹಕಾರ. ಆವಶ್ಯಕತೆ ಉಳ್ಳವರಿಗೆ ಸಹಾಯ ಮಾಡುವ ಅವಕಾಶ. ಸಂಸಾರದಲ್ಲಿ ಪ್ರೀತಿ, ಸಾಮರಸ್ಯ ವೃದ್ಧಿ. ಗಣೇಶ ಅಷ್ಟಕ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.