ಹಿತ್ತಲ ಗಿಡ ಮದ್ದು: ಗುಗ್ಗುಲು.. ಉಪಯೋಗಳೇನು?
Commiphora Wightii: ಗುಗ್ಗುಲು ಪ್ರಾಚೀನ ಆಯುರ್ವೇದ ಔಷಧೀಯ ಸಸ್ಯವಾಗಿದೆ. ಇದು ಆರೋಗ್ಯವನ್ನು ವೃದ್ಧಿಸುತ್ತದೆ.
ಗುಗ್ಗುಲು (Commiphora Wightii) ಪ್ರಾಚೀನ ಆಯುರ್ವೇದ ಔಷಧೀಯ ಸಸ್ಯವಾಗಿದೆ. ಇದರ ವೈಜ್ಞಾನಿಕ ಹೆಸರು ಕಮ್ಮಿಫೊರಾ ಮುಕುಲ್. ಒಣ ಹಾಗೂ ಬಂಜರು ಪ್ರದೇಶಗಳಲ್ಲಿ ಬೆಳೆಯುವ ಮುಳ್ಳಿನ ಪೊದೆ ಗಿಡವಾಗಿದೆ. ಕಾಂಡವನ್ನು ಕತ್ತರಿಸಿದಾಗ ಬರುವ ಪರಿಮಳಯುಕ್ತ ಹಳದಿ ಅಂಟು ರಾಳವನ್ನೇ ಗುಗ್ಗುಲು ಎನ್ನುತ್ತಾರೆ.
ಈ ರಾಳದಲ್ಲಿ ಅಪಾರ ಔಷಧೀಯ ಗುಣಗಳಿದ್ದು, ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ. ಸ್ಥೂಲಕಾಯ ನಿವಾರಣೆ, ಉರಿಯೂತ ಮತ್ತು ನೋವು ಶಮನಕ್ಕೆ ಬಹಳ ಉಪಯುಕ್ತವಾಗಿದೆ. ಜೊತೆಗಿದು ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ. ರಕ್ತ ಶುದ್ದೀಕರಿಸುತ್ತದೆ & ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ತ್ರಿಫಲಾ ಗುಗ್ಗುಲು, ಯೋಗರಾಜ ಗುಗ್ಗುಲು, ಕೈಶೋರ ಗುಗ್ಗುಲುಗಳು ಪ್ರಸಿದ್ಧ ಆಯುರ್ವೇದ ಔಷಧಿಗಳಾಗಿವೆ.
ಅತಿಯಾಗಿ ಸೇವಿಸಿದರೆ ಹೊಟ್ಟೆ ಉರಿ ಮತ್ತು ಅಜೀರ್ಣ ಉಂಟಾಗಬಹುದು. ಆದ್ದರಿಂದ ಮಿತವಾಗಿ ವೈದ್ಯರ ಸಲಹೆಯಂತೆ ಸೇವಿಸುವುದು ಉತ್ತಮ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.