ದಿನ ಭವಿಷ್ಯ: ಇವತ್ತು ಯಾರಿಗೆಲ್ಲ ಶುಭ?
Daily Horoscope: ಇಂದು (ಶುಕ್ರವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.
ಮೇಷ:
ಶ್ರಮದ ಫಲವಾಗಿ ಆದ ಉದ್ದೇಶ ಸಾಧನೆ.. ಉದ್ಯೋಗ ಕ್ಷೇತ್ರದಲ್ಲಿ ಕೀರ್ತಿ, ವ್ಯವಹಾರದಲ್ಲಿ ಜಯ. ಅಧಿಕಾರಿ ವರ್ಗಕ್ಕೆ ಸಾಮಾನ್ಯ ದಿನ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ನೆಮ್ಮದಿಯ ದಿನ. ಪಿತೃಕಾರ್ಯದಲ್ಲಿ ಭಾಗಿ. ಗಣೇಶ ದ್ವಾದಶನಾಮ ಸ್ತೋತ್ರ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.
ವೃಷಭ:
ಬಹಳ ಜಾಗರೂಕತೆಯಿಂದ ಮುಂದೆ ಸಾಗಿ.. ಮನೆಯವರ ಆರೋಗ್ಯದ ಕಡೆಗೆ ಗಮನ ಇರಲಿ. ಲೇವಾದೇವಿ ವ್ಯವಹಾರದಿಂದ ದೂರವಿರಿ. ಮನೆಮಂದಿಯ ಪಾಲಿಗೆ ನಿರಾತಂಕದ ದಿನ. ರಾತ್ರಿ ಪ್ರಯಾಣದಲ್ಲಿ ಎಚ್ಚರ. ಗಣೇಶ ಕವಚ, ದತ್ತಪಂಜರ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.
ಮಿಥುನ:
ಶುಭದಾಯಕವಾದ ಶುಕ್ರವಾರ.. ಉದ್ಯೋಗ ಕ್ಷೇತ್ರದಲ್ಲಿ ಸ್ವಲ್ಪ ಮಂದಗತಿ. ವ್ಯವಹಾರದಲ್ಲಿ ಸಾವಧಾನ ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ. ಹಿರಿಯ ಮನೆಯ ಪಿತೃಕಾರ್ಯದಲ್ಲಿ ಭಾಗಿ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ , ಆದಿತ್ಯ ಹೃದಯ ಓದಿ.
ಕರ್ಕಾಟಕ:
ಯಾವುದೇ ಪರಿಸ್ಥಿತಿಯಲ್ಲಿ ಪ್ರಗತಿ ನಿಲ್ಲದು.. ಪ್ರಾಚೀನ ಚಿಕಿತ್ಸಾ ವಿಧಾನದಿಂದ ಆರೋಗ್ಯ ಪ್ರಾಪ್ತಿ. ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಸಾಧನೆ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ. ಗಣೇಶ ಪಂಚರತ್ನ, ದಕ್ಷಿಣಾಮೂರ್ತಿ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.
ಸಿಂಹ:
ದಿಟ್ಟ ಹೆಜ್ಜೆಗಳನ್ನಿಟ್ಟು ಸಾಗಿ.. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ಮಾಜಿ ಹೊಸ ಪ್ರಸ್ತಾವ ಸದ್ಯ ಒಪ್ಪಿಕೊಳ್ಳಬೇಡಿ. ಯಂತ್ರೋಪಕರಣ ವ್ಯಾಪಾರಿಗಳಿಗೆ ಅನುಕೂಲ. ಪೂರ್ವಜರ ಆಶೀರ್ವಾದ ಕೋರಿಕೆ. ಗಣೇಶ ಕವಚ, ಶಿವಕವಚ, ದೇವೀಸ್ತೋತ್ರ ಓದಿ.
ಕನ್ಯಾ:
ಕೃಷಿಯಲ್ಲಿ ಸಾಮಾನ್ಯ ಲಾಭ.. ಉದ್ಯೋಗಸ್ಥ ಮಹಿಳೆಯರಿಗೆ ಶುಭದಿನ. ವಿದ್ಯಾರ್ಥಿವೃಂದಕ್ಕೆ ಆಲಸ್ಯದ ಪೀಡೆ. ರೈಲ್ವೆ ಪ್ರಯಾಣದಲ್ಲಿ ಜಾಗರೂಕತೆ ಇರಲಿ. ಹಳೆಯ ಗುರುಗಳ ಭೇಟಿ ಸಂಭವ. ಗಣಪತಿ ಅಥರ್ವಶೀರ್ಷ, ನರಸಿಂಹ ಕವಚ, ಹನುಮಾನ್ ಚಾಲೀಸಾ ಓದಿ.
ತುಲಾ:
ಅಪರೂಪದ ವ್ಯಕ್ತಿಯೊಬ್ಬರ ಭೇಟಿ.. ಆರೋಗ್ಯ ಸುಧಾರಣೆಗಾಗಿ ಧನವ್ಯಯ. ಪ್ರಾಕೃತಿಕ ತಾಣಕ್ಕೆ ಸಣ್ಣ ಭೇಟಿ. ಹಿಂದೆ ಕಲಿತಿದ್ದ ಕಲೆ ಉಪಯೋಗಕ್ಕೆ. ಸಂಸಾರದಲ್ಲಿ ಸಾಮರಸ್ಯ ವೃದ್ಧಿ. ಗಣೇಶ ಪಂಚರತ್ನ, ವಿಶ್ವನಾಥಾಷ್ಟಕ, ಲಕ್ಷ್ಮೀಸ್ತೋತ್ರ ಓದಿ.
ವೃಶ್ಚಿಕ:
ದೂರದೇಶದಿಂದ ಶುಭವಾರ್ತೆ.. ಉದ್ಯೋಗಸ್ಥರಿಗೆ ಉತ್ಸಾಹದ ಅನುಭವ. ಪೂರ್ವಜರಿಗೆ ಶ್ರದ್ಧಾಂಜಲಿಯಲ್ಲಿ ಭಾಗಿ. ಗೃಹೋದ್ಯಮಗಳಿಗೆ ಅನುಕೂಲದ ದಿನ. ತಾಯಿಯ ಕಡೆಯ ಬಂಧುಗಳ ಆಗಮನ. ಗಣೇಶ ಸ್ತೋತ್ರ, ದತ್ತಪಂಜರ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
ಧನು:
ಸಂಸಾರದ ಆವಶ್ಯಕತೆಗಳ ಕಡೆಗೆ ಲಕ್ಷ್ಯ.. ಹಣ್ಣು, ತರಕಾರಿ ವ್ಯಾಪಾರಿಗಳಿಗೆ ಅನುಕೂಲ. ಬೌದ್ಧಿಕ ಕೆಲಸಗಳಿಗೆ ಮೇಲಿಂದ ಮೇಲೆ ವಿಘ್ನ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಅವಕಾಶ. ಬೀದಿಬದಿಯ ವ್ಯಾಪಾರಿಗಳಿಗೆ ಅನುಕೂಲದ ದಿನ. ಗಣಪತಿ ಅಥರ್ವಶೀರ್ಷ, ಶಿವಪಂಚಾಕ್ಷರ ಸ್ತೋತ್ರ ನವಗ್ರಹ ಸ್ತೋತ್ರ ಓದಿ.
ಮಕರ:
ಮಾಮೂಲಾದ ಕೆಲಸದ ಒತ್ತಡ.. ತಾಯಿಯ ಆರೋಗ್ಯದ ಕಡೆಗೆ ಗಮನ. ಗೃಹೋಪಯೋಗಿ ಸಾಮಗ್ರಿಗಳ ಖರೀದಿಗೆ ಧನವ್ಯಯ. ಆಪ್ತ ಗೆಳೆಯರಿಂದ ಅನಿರೀಕ್ಷಿತ ಸಹಾಯ. ಕುಟುಂಬದ ಹಿರಿಯರ ಮನೆಯಲ್ಲಿ ಪಿತೃಕಾರ್ಯ. ಗಣೇಶ ಪಂಚರತ್ನ, ವಿಷ್ಣು ಸಹಸ್ರನಾಮ, ಹನುಮಾನ್ ಚಾಲೀಸಾ ಓದಿ.
ಕುಂಭ:
ಉದ್ಯೋಗಸ್ಥರಿಗೆ ಕೆಲಸಕ್ಕೆ ಉತ್ತೇಜನ.. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಆದಾಯ ವೃದ್ಧಿ. ಸಾಮಾಜಿಕ ಕಾರ್ಯದಲ್ಲಿ ಮಗ್ನತೆ. ಮಕ್ಕಳ ವ್ಯವಹಾರ ಸ್ಥಿರಗೊಳಿಸಲು ಸಹಾಯ. ಸಂಸಾರದಲ್ಲಿ ಪ್ರೀತಿ, ವಿಶ್ವಾಸ ವೃದ್ಧಿ.ಗಣೇಶ ಕವಚ, ಶಿವಸಹಸ್ರನಾಮ, ಶನಿಮಹಾತ್ಮೆ ಓದಿ.
ಮೀನ:
ವಾರಾಂತ್ಯದ ಮುನ್ನಾದಿನ ಸರ್ವವೂ ಶುಭಪ್ರದ.. ಅಧಿಕಾರಿ ವರ್ಗದಿಂದ ಅನುಕೂಲಕರ ಸ್ಪಂದನ. ಖಾದ್ಯ ಪದಾರ್ಥ ಉದ್ಯಮಿಗಳಿಗೆ ಹೆಚ್ಚು ಅನುಕೂಲ. ಬಂಧು ವರ್ಗದಲ್ಲಿ ಪಿತೃಕಾರ್ಯ. ಆಪ್ತ ಗೆಳೆಯನ ಹಠಾತ್ ಭೇಟಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.