ಅಮರಗಿರಿ: ಕಾರ್ಗಿಲ್ ವಿಜಯೋತ್ಸವ ಆಚರಣೆ, ಯೋಧರಿಗೆ ಗೌರವಾರ್ಪಣೆ
Kargil Vijay Diwas: ಅಮರಗಿರಿಯ ಶ್ರೀಕ್ಷೇತ್ರ ಹನುಮಗಿರಿ - ಭಾರತೀ ಅಮರ ಜ್ಯೋತಿ ಮಂದಿರದಲ್ಲಿ ಭಾನುವಾರ ಕಾರ್ಗಿಲ್ ವಿಜಯೋತ್ಸವ ಮತ್ತು ಯೋಧರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು.
ಪುತ್ತೂರು (ಈಶ್ವರಮಂಗಲ): ಅಮರಗಿರಿಯ ಶ್ರೀಕ್ಷೇತ್ರ ಹನುಮಗಿರಿ - ಭಾರತೀ ಅಮರ ಜ್ಯೋತಿ ಮಂದಿರದಲ್ಲಿ ಭಾನುವಾರ ಕಾರ್ಗಿಲ್ ವಿಜಯೋತ್ಸವ ಮತ್ತು ಯೋಧರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು. ರಾಷ್ಟ್ರ ಧ್ವಜವನ್ನು ಹಾರಿಸಿ, ಅಮರ ಜವಾನ್ ಸ್ಮಾರಕ ಮತ್ತು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ, ನಮನಗಳನ್ನು ಸಲ್ಲಿಸಲಾಯಿತು.
ಕಾರ್ಗಿಲ್ ಯೋಧ ಶೇಷಪ್ಪ ಗೌಡ ಹಡೀಲು ಅವರಿಗೆ ಸನ್ಮಾನ:
ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿ ದೇಶಕ್ಕಾಗಿ ಸೇವೆ ಸಲ್ಲಿಸಿದ ನಿವೃತ್ತ ಯೋಧ ಶೇಷಪ್ಪ ಗೌಡ ಹಡೀಲು ಅವರನ್ನು ಸನ್ಮಾನಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದರು. ಕಾರ್ಗಿಲ್ ಸಮರ ಭೂಮಿಯಲ್ಲಿ ಅನುಭವಿಸಿದ ಕಠಿಣ ಸವಾಲುಗಳು ಮತ್ತು ಸೈನಿಕರ ಸಾಹಸಗಾಥೆಯ ನೈಜ ಕಥೆಗಳನ್ನು ವಿವರಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಕ್ಷೇತ್ರ ಹನುಮಗಿರಿಯ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಕೀಲರ ಪ್ರಸಾದ್ ಕುಮಾರ್ ಅವರು, ಕಾರ್ಗಿಲ್ ಯುದ್ಧದ ಇತಿಹಾಸ, ಅದರ ಪ್ರಾಮುಖ್ಯತೆ & ವೀರ ಯೋಧರ ತ್ಯಾಗದ ಕುರಿತು ಸವಿಸ್ತಾರವಾಗಿ ಮಾತನಾಡಿದರು.

ಪ್ರಗತಿಪರ ಕೃಷಿಕ ಕೃಷ್ಣ ಪ್ರಸಾದ್ ಭಟ್ ಮತ್ತು ಎನ್‌ಸಿಸಿ ಅಧಿಕಾರಿ ತೇಜಸ್ವಿ ಭಟ್ ಕೆ ಭಾಗವಹಿಸಿದ್ದು, ದೇಶಭಕ್ತಿಯ ಸಂದೇಶ ನೀಡಿದರು.
ಕ್ಷೇತ್ರ ಸಂವರ್ಧನಾ ಸಮಿತಿ ಸಂಚಾಲಕರು ಹಾಗೂ ಸರ್ವ ಸದಸ್ಯರ ಉಪಸ್ಥಿತಿಯಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ, ಅಪಾರ ಸಂಖ್ಯೆಯ ದೇಶಭಕ್ತರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.